fbpx
ಸಮಾಚಾರ

ಇಂದಿಗೆ ಪುನೀತ್‌ ರಾಜ್‌ಕುಮಾರ್- ಅಶ್ವಿನಿ ದಾಂಪತ್ಯಕ್ಕೆ 22 ವರ್ಷ

ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದೈಹಿಕವಾಗಿ ನಮ್ಮಿಂದ ದೂರವಾಗಿ ಬರೋಬ್ಬರಿ ಒಂದು ತಿಂಗಳು ಕಳೆದುಹೋಗಿದೆ. ಗಟ್ಟಿಮುಟ್ಟಾಗಿದ್ದ ಆರೋಗ್ಯವಂತ ಅಪ್ಪು ಇದ್ದಕ್ಕಿಂತ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಇಡೀ ಕರ್ನಾಟಕಕ್ಕೆ ಸಿಡಿಲು ಬಡಿದಂತೆ ಬಡಿದಿತ್ತು. ಅಪ್ಪು ಆಗಲಿ ಒಂದು ತಿಂಗಳೇ ಕಳೆದಿದ್ದರೂ ಅದರಿಂದ ಕನ್ನಡಿಗರ ಮನಸ್ಸಿಗೆ ಆಗಿರುವ ನೋವಿನ ಪ್ರಮಾಣ ಕಡಿಮೆಯಾಗಿಲ್ಲ.

 

 

ಆದರೆ ಈ ನೋವಿನಲ್ಲೂ ಅವರ ಕುಟುಂಬಕ್ಕೆ ಇಂದು ಸಂತಸದ ದಿನ. ಇಂದು (ಡಿಸೆಂಬರ್ 1) ಪುನೀತ್‌ ರಾಜ್‌ಕುಮಾರ್ ಮತ್ತು ಅಶ್ವಿನಿ ಅವರ ವಿವಾಹ ಆದ ದಿನ. 1999ರ ಡಿಸೆಂಬರ್ 1ರಂದು ಅಪ್ಪು- ಅಶ್ವಿನಿ ಮದುವೆ ಆಗಿದ್ದಾರೆ. ಈ ಜೋಡಿ ಮದುವೆಯಾಗಿ 22 ವರ್ಷ ಆಯ್ತು. ಇದು ಶುಭದಿನ ಆದರೂ ಅದನ್ನು ಸಂಭ್ರಮಿಸುವ ಅದೃಷ್ಟವನ್ನು ವಿಧಿ ಕಿತ್ತುಕೊಂಡು ಬಿಟ್ಟಿದೆ.

ಸ್ನೇಹಿತರ ಮೂಲಕ ಪುನೀತ್ ಹಾಗೂ ಅಶ್ವಿನಿ ಅವರ ಪರಿಷಯವಾಗಿತ್ತು, ನಂತರ ಹಿರಿಯರ ಸಮ್ಮತಿಯಿಂದ ಈ ಜೋಡಿಯ ವಿವಾಹ ನಡೆದಿತ್ತು. ಚಿಕ್ಕಮಗಳೂರಿನಲ್ಲಿ ಪುನೀತ್ ರಾಜ್​ಕುಮಾರ್​ ಹಾಗೂ ಅಶ್ವಿನಿ ಅವರ ಮದುವೆಯಾಗಿತ್ತು. ಪುನೀತ್ ಹಾಗೂ ಅಶ್ವಿನಿ ಅವರಿಗೆ ದೃತಿ ಹಾಗೂ ವಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top