ಯಲಹಂಕ ಬಿಜೆಪಿ ಶಾಸಕ ಎಸ್. ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಹಾಕಲಾಗಿದೆ ಎನ್ನಲಾಗಿರುವ ವಿಡಿಯೋ ಇದೀಗ ಬಹಿರಂಗಗೊಂಡಿದೆ. ವಿಡಿಯೋದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಜೊತೆ ಮಾತನಾಡುತ್ತಿರುವ ವಿಡಿಯೋದಲ್ಲಿ ಹಲವು ಮಾತುಕತೆಗಳು ನಡೆದಿವೆ.
ಯಲಹಂಕದಿಂದ ಗೋಪಾಲಕೃಷ್ಣ ಅವರು ಎಸ್. ಆರ್ ವಿಶ್ವನಾಥ್ ಚುನಾವಣೆಯಲ್ಲಿ ವಿರುದ್ಧವಾಗಿ ನಿಂತು ಸೋತಿದ್ದರು. ಎಸ್. ಆರ್ ವಿಶ್ವನಾಥ್ ಅವರನ್ನು ಕೊಲೆ ಮಾಡಲು ಸುಪಾರಿ ನೀಡಿರುವ ಈ ವೀಡಿಯೋ 2 ತಿಂಗಳ ಹಿಂದೆ ಶೂಟ್ ಮಾಡಿದ್ದು ಎನ್ನಲಾಗಿದೆ. ಗೋಪಾಲಕೃಷ್ಣ ತನ್ನ ಆಪ್ತ ಕುಳ್ಳ ದೇವರಾಜ್‍ಗೆ ಸುಪಾರಿ ಕೊಟ್ಟಿರುವ ಎರಡು ವೀಡಿಯೋ ಹಾಗೂ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಇರೋದೇನು?
ವಿಶ್ವನಾಥ್ ವಿರುದ್ಧ ಗೆಲ್ಲಲು ನೂರು ಕೋಟಿ ಮಾಡಬೇಕು. ಐದು ಕೋಟಿ ರೂ. ಕೊಡ್ತೀನಿ ನೀವೇ ಹೊಡೆದು ಹಾಕಿಬಿಡಿ. ಆಂಧ್ರದಿಂದ ಶಾರ್ಪ್ ಶೂಟರ್ಗಳ ಕರೆಸಿ ಹೊಡೆಸೋಣ. ಬೆಳಗ್ಗೆ ತೋಟಕ್ಕೆ ವಿಶ್ವನಾಥ್ ಒಬ್ಬನೇ ಹೋಗುತ್ತಿರುತ್ತಾನೆ. ಆಗ ಹೊಡೀಬಹುದು. ಸ್ಕೆಚ್ ಹಾಕಿದ್ರೆ ಮಿಸ್ ಆಗಬಾರದು. ಒಂದು ವೇಳೆ ಹೊಡೆದು ಹಾಕಿದ್ರೆ ಸುಲಭವಾಗಿ ಗೆಲ್ಲಬಹುದು ಅಂತ ವಿಶ್ವನಾಥ್ ವಿರುದ್ಧ ಸ್ಪರ್ಧಿಸಿ ಸೋತಿದ್ದ ಗೋಪಾಲಕೃಷ್ಣ ಮಾತುಕತೆ ನಡೆಸಿದ್ದ ವಿಡಿಯೋ ಬಹಿರಂಗವಾಗಿದೆ.
ಇನ್ನೊಂದು ಕೋನದಲ್ಲಿ ಈ ಪ್ರಕರಣವನ್ನು ನೋಡೋದಾದ್ರೆ, ಶಾಸಕ ವಿಶ್ವನಾಥ್ ಅವರೇ ಕುಳ್ಳದೇವರಾಜ್ ಅವರನ್ನು ಬಿಟ್ಟು ಈ ವಿಡಿಯೋ ಮಾಡಿಸಿದ್ರಾ ಅನ್ನೋದು ಜನರ ಸಂದೇಹಕ್ಕೆ ಕಾರಣವಾಗಿದೆ. ಏಕೆಂದರೆ ಸಿಸಿಬಿ ವಶದಲ್ಲಿರುವ ಕುಳ್ಳದೇವರಾಜ್, ವಿಶ್ವನಾಥ್ ಬೆಂಬಲಿಗರಾಗಿದ್ದವರು. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಮುಂದಿನ ದಿನಗಳಲ್ಲಿ ಮತ್ತಷ್ಟು ತಿರುವು ಪಡೆಯುವ ಸಾಧ್ಯತೆ ಇದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
