fbpx
ಸಮಾಚಾರ

ಭೀಕರ ಅಪಘಾತದಲ್ಲಿ ಗಾಯಗೊಂಡ ಆಸ್ಟ್ರೇಲಿಯಾ ದಂತಕತೆ ಶೇನ್ ವಾರ್ನ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ತಮ್ಮ ಮಗ ಜಾಕ್ಸನ್ ಜೊತೆಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಬೈಕ್ ಅಪಘಾತಕ್ಕೆ ಒಳಗಾಗಿದ್ದು ಗಾಯಗೊಂಡಿದ್ದಾರೆ. ಆಸ್ಟ್ರೇಲಿಯಾ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದು ಬೈಕ್ ಅಪಘಾತದ ಸಂದರ್ಭದಲ್ಲಿ ಕೆಳಕ್ಕೆ ಬಿದ್ದ ವಾರ್ನ್ ಸುಮಾರು 15 ಮೀಟರ್‌ನಷ್ಟು ದೂರಕ್ಕೆ ಬಿದ್ದಾರೆ ಎಂದು ವರದಿಯಾಗಿದೆ.

ಮೆಲ್ಬೋರ್ನ್‌ನಲ್ಲಿ ತಮ್ಮ 300 ಕೆ.ಜಿ ತೂಕದ ಬೈಕ್‌ ಅನ್ನು ಶೆಡ್‌ಗೆ ನಿಲ್ಲಿಸಲು ವಾಪಸ್‌ ಆಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಈ ಅವಗಢ ಸಂಭವಿಸಿದೆ. ಬಿದ್ದ ರಭಸಕ್ಕೆ 15 ಮೀಟರ್‌ಗಳಷ್ಟು ಅವರು ಜಾರಿದ್ದಾರೆ. ಪರಿಣಾಮ ಅವರ ಸೊಂಟ, ಕಾಲು ಮತ್ತು ಪಾದಕ್ಕೆ ಗಾಯವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಶೇನ್ ವಾರ್ನ್ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಅದೃಷ್ಟವಶಾತ್ ಶೇನ್ ವಾರ್ನ್‌ಗೆ ಗಂಭೀರ ಗಾಯಗಳಿಂದ ಪಾರಾಗುದ್ದು ಸಣ್ಣಪುಟ್ಟ ಗಾಯಗಳು ಉಂಟಾಗಿದೆ.

52 ವರ್ಷ ವಯಸ್ಸಿನ ವಾರ್ನ್ ಅವರು ತಮ್ಮ ಕಾಲು ಮುರಿದಿರಬಹುದು ಅಥವಾ ಸೊಂಟಕ್ಕೆ ಹಾನಿಯಾಗಿರಬಹುದೆಂಬ ಭಯದಿಂದ ಆಸ್ಪತ್ರೆಗೆ ಹೋಗಿದ್ದರು. ಆದಾಗ್ಯೂ, ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಮುಂಬರುವ ಆ್ಶಶಸ್‌ ಸರಣಿಯಲ್ಲಿ ಟಿವಿ ಕೆಲಸಗಳನ್ನು ಮಾಡುವ ನಿರೀಕ್ಷೆಯಿದೆ. ಸರಣಿಯು ಡಿಸೆಂಬರ್ 8 ರಿಂದ ಪರ್ತ್ ನ ಗಾಬಾ ಸ್ಟೇಡಿಯಂನಲ್ಲಿ ಆರಂಭವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top