fbpx
ಸಮಾಚಾರ

ಜಡೇಜಾ ರೀತಿಯೇ ಬ್ಯಾನ್ ಆಗುತ್ತಾರಾ ರಾಹುಲ್, ರಶೀದ್ ಖಾನ್‍? ಇಬ್ಬರ ಮೇಲೂ ತೂಗುಕತ್ತಿ

15ನೇ ಆವೃತ್ತಿ ಐಪಿಎಲ್‍ಗಾಗಿ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿದೆ. ಜನವರಿ ತಿಂಗಳಲ್ಲಿ ನಡೆಯುವ ಮೆಗಾ ಹರಾಜಿಗೂ ಮುನ್ನ ಹೊಸ ಫ್ರಾಂಚೈಸ್ ಲಕ್ನೋ ತಮ್ಮ ತಂಡಕ್ಕಾಗಿ ಆಡಬೇಕೆಂದು ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ರಶೀದ್ ಖಾನ್‍ಗೆ ನೀಡಿದ ಬಿಗ್ ಆಫರ್ ಇದೀಗ ಈ ಇಬ್ಬರು ಕ್ರಿಕೆಟಿಗರ ಐಪಿಎಲ್ ಕೆರಿಯರ್‌ಗೆ ಕಂಟಕವಾಗಿದೆ.

ಹೌದು, ವರ್ಷ ಮೆಗಾ ಹರಾಜು ಇರುವುದರಿಂದ ಪ್ರಮುಖ ಆಟಗಾರರಿಗೆ ಸಿಕ್ಕಾಪಟ್ಟೆ ಬೇಡಿಕೆಯಿದೆ. ಹೊಸ ತಂಡಗಳು ಈಗಿರುವ ತಂಡಗಳ ಪ್ರಮುಖ ಆಟಗಾರರಿಗೆ ಈಗಾಗಲೇ ಹಿಂಬಾಗಿಲಿನಿಂದ ಗಾಳ ಹಾಕುತ್ತಿವೆ. ಹಾಲಿ 8 ತಂಡಗಳು ತಮ್ಮ ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಮಾಡುವ ಮೊದಲೇ, ಪಂಜಾಬ್‌ ಕಿಂಗ್ಸ್‌ ತಂಡದ ನಾಯಕ ಕೆಎಲ್‌ ರಾಹುಲ್ ಮತ್ತು ಸಮ್‌ರೈಸರ್ಸ್‌ ಹೈದರಾಬಾದ್‌ ತಂಡದ ಸ್ಟಾರ್‌ ಸ್ಪಿನ್ನರ್‌ ರಶೀದ್‌ ಖಾನ್‌ ಅವರನ್ನು ಲಖನೌ ತಂಡ ಸಂಪರ್ಕಿಸಿರುವುದಾಗಿ ವರದಿಗಳಾಗಿತ್ತು. ಈಗ ಈ ಇಬ್ಬರೂ ಆಟಗಾರರು ನಿಷೇಧದ ಭೀತಿ ಎದುರೀಸುತ್ತಿದ್ದಾರೆ.

ಅಷ್ಟೇ ಅಲ್ಲದೆ ಲಖನೌ ತಂಡ ಸೇರುವಂತೆ ಕೆಎಲ್‌ ರಾಹುಲ್‌ಗೆ 20 ಕೋಟಿ ರೂ. ಮತ್ತು ರಶೀದ್‌ಗೆ ಅಹ್ಮದಾಬಾದ್‌ ತಂಡ ಸೇರುವಂತೆ 16 ಕೋಟಿ ರೂ. ಆಫರ್‌ ಕೊಡಲಾಗಿದೆ ಎಂದು ವರದಿಗಳು ವಿವರಿಸಿದ್ದವು. ಅಂದಹಾಗೆ ಈ ವರದಿಗಳು ನಿಜವಾಗಿದ್ದೇ ಆದರೆ ಕೆಎಲ್‌ ರಾಹುಲ್‌ ಮತ್ತು ರಶೀದ್‌ ಖಾನ್‌ ವಿರುದ್ಧ ಬಿಸಿಸಿಐ ಒಂದು ವರ್ಷ ನಿಷೇಧ ಹೇರುವ ಸಾಧ್ಯತೆ ಇದೆ. ತಂಡಗಳು ತಮ್ಮ ಉಳಿಸಿಕೊಂಡ ಆಟಗಾರ ಪಟ್ಟಿ ಪ್ರಕಟ ಮಾಡುವವರೆಗೂ ಆಯಾ ತಂಡಗಳ ಆಟಗಾರರು ಬೇರೆ ತಂಡಗಳನ್ನು ಸಂಪರ್ಕಿಸುವಂತ್ತಿಲ್ಲ. ಹೀಗೆ ಮಾಡಿದ್ದಲ್ಲಿ ನಿಯಮ ಉಲ್ಲಂಘನೆಯ ಶಿಕ್ಷೆ ಎದುರಿಸುವಂತ್ತಾಗುತ್ತದೆ. ಸದ್ಯ ಈ ಪ್ರಕರಣದ ಬಗ್ಗೆ ಪಂಜಾಬ್ ಮತ್ತು ಹೈದರಾಬಾದ್ ತಂಡಗಳು ಬಿಸಿಸಿಐಗೆ ದೂರು ನೀಡಿವೆ ಎನ್ನಲಾಗಿದ್ದು ಬಿಸಿಸಿಐ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

ಹಿಂದೆ ಜಡೇಜಾ ಕೂಡ ಬ್ಯಾನ್ ಆಗಿದ್ದರು:
ಈ ಹಿಂದೆ 2010ರಲ್ಲಿ ಇಂತಹದ್ದೇ ಘಟನೆಯೊಂದು ನಡೆದಿತ್ತು. ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದ ರವೀಂದ್ರ ಜಡೇಜಾರನ್ನು ಮುಂಬೈ ಫ್ರಾಂಚೈಸ್ ಸಂಪರ್ಕಿಸಿದ ಕಾರಣ ಜಡೇಜಾಗೆ ಒಂದು ವರ್ಷ ಐಪಿಎಲ್‍ನಿಂದ ನಿಷೇಧ ಹೇರಲಾಗಿತ್ತು. ಹಾಗಾಗಿ ಇದೀಗ ರಾಹುಲ್ ಮತ್ತು ರಶೀದ್ ಖಾನ್‍ಗೂ ಬ್ಯಾನ್ ಭಯ ಶುರುವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top