fbpx
ಸಮಾಚಾರ

ಮಂಗಳೂರಿನಲ್ಲಿ ಶುಭಾ ಪೂಂಜಾ ಸಿಂಪಲ್ ಮ್ಯಾರೇಜ್

ಕನ್ನಡ ಚಿತ್ರರಂಗದ ನಟಿ ಶುಭ ಪೂಂಜಾ ಮದುವೆ ಕುರಿತಾಗಿ ಕಳೆದ ವರ್ಷದದಿಂದ ಸುದ್ದಿಯಾಗುತ್ತಲೇ ಇದೆ. ಲಾಕ್ ಡೌನ್, ಬಿಗ್ ಬಾಸ್ ಮುಂತಾದ ಕಾರಣಕ್ಕೆ ಶುಭಾ ಪೂಂಜಾ ಮದುವೆ ಮುಂದು ಹೋಗುತ್ತಲೇ ಇತ್ತು. ಇದೀಗ ಅಂತಿಮವಾಗಿ ಕೊನೆಗೂ ಶುಭಾಗೆ ಮದುವೆ ಆಗುವ ಯೋಗ ಕೂಡಿಬಂದಿದೆ.

ಮದುವೆ ಬಗ್ಗೆ ಸ್ವತಃ ಶುಭ ಪೂಂಜಾ ಅವರೇ ಮಾತನಾಡಿದ್ದು ವಿವಾಹ ಮಹೋತ್ಸವದ ಬಗ್ಗೆ ಮಾಹಿತಿ ನೀಡಿದ್ದಾರೆ. “ಡಿಸೆಂಬರ್ ತಿಂಗಳಿನಲ್ಲಿಯೇ ಮದುವೆಯ ಬಗ್ಗೆ ಯೋಜನೆ ಮಾಡಿದ್ದೇವೆ. ಮಂಗಳೂರಿನಲ್ಲಿ ಸಿಂಪಲ್ ಆಗಿ ಮದುವೆ ಆಗಬೇಕು ಅಂದುಕೊಂಡಿದ್ದೇನೆ. ನಂತರ ಬೆಂಗಳೂರಿನಲ್ಲಿ ಯೋಚನೆ ಮಾಡಿದ್ದೇವೆ. ಮದುವೆ ಮುಂದೆ ಹೋದರೂ ಜನವರಿ 10ರ ಒಳಗಾಗಿ ನಡೆಯಲಿದೆ. ”

“ನಾನು ಯಾವತ್ತೂ ಈ ರೀತಿ ಹೆಚ್ಚು ಪ್ಲ್ಯಾನ್ ಮಾಡಿಲ್ಲ. ಬಹಳ ಸಿಂಪಲ್ ಆಗಿ ಮದುವೆ ನಡೆಯಬೇಕು ಎಂಬುದು ನಮ್ಮಿಬ್ಬರಿಗೂ ಆಸೆ. ನಾವಿಬ್ಬರೂ ಮಂಗಳೂರು ಮೂಲದವರು. ನಾನು ಉಡುಪಿ ಹಾಗೂ ಅವರು ಕುಂದಾಪುರ. ಆದ್ದರಿಂದ ನಮ್ಮ ಮದುವೆ ಕುಟುಂಬದವರು ಹಾಗೂ ಹಿರಿಯರ ಸಮ್ಮುಖದಲ್ಲಿ, ದೇವಸ್ಥಾನದಲ್ಲಿ ನಡೀಬೇಕು ಅಂದುಕೊಂಡಿದ್ದೇವೆ.” ಎಂದು ನಟಿ ಶುಭ ಪುಂಜ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top