fbpx
ಸಮಾಚಾರ

ಡಿಸೆಂಬರ್ 03: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಡಿಸೆಂಬರ್ 3, 2021 ಶುಕ್ರವಾರ
ವರ್ಷ : 1943 ಪ್ಲಾವ
ತಿಂಗಳು : ಕಾರ್ತೀಕ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಚತುರ್ದಶೀ 4:55 pm
ನಕ್ಷತ್ರ : ವಿಶಾಖ 1:44 pm
ಯೋಗ : ಅತಿಗಂಡ 12:56 pm
ಕರಣ : ವಿಷ್ಟಿ 6:42 am ಶಕುನಿ 4:55 pm

Time to be Avoided
ರಾಹುಕಾಲ : 10:44 am – 12:09 pm
ಯಮಗಂಡ : 2:58 pm – 4:23 pm
ದುರ್ಮುಹುರ್ತ : 8:46 am – 9:31 am, 12:32 pm – 1:17 pm
ವಿಷ : 5:15 pm – 6:39 pm
ಗುಳಿಕ : 7:55 am – 9:20 am

Good Time to be Used
ಅಮೃತಕಾಲ : 1:40 am – 3:04 am
ಅಭಿಜಿತ್ : 11:46 am – 12:32 pm

Other Data
ಸೂರ್ಯೋದಯ : 6:27 am
ಸುರ್ಯಾಸ್ತಮಯ : 5:51 pm
ರವಿರಾಶಿ : ವೃಶ್ಚಿಕ
ಚಂದ್ರರಾಶಿ : ತುಲ upto 08:27

 

 

 

 

ನಿರೀಕ್ಷಿತ ವಿಷಯಗಳನ್ನು ಲೀಲಾಜಾಲವಾಗಿ ಎದುರಿಸಬಲ್ಲಿರಿ. ಅನಿರೀಕ್ಷಿತ ವಿಚಾರಗಳ ಬಗೆಗೂ ಗಮನವಿರಲಿ. ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವರು. ಅಂತೆಯೆ ಜೇಬಿನಲ್ಲಿರುವ ಹಣಕ್ಕೆ ತಕ್ಕಷ್ಟು ವ್ಯವಹರಿಸುವುದು ಉತ್ತಮ.

ವಿಚಿತ್ರವಾದ ರೀತಿಯಲ್ಲಿ ನಿಮ್ಮ ವಿರೋಧಿಗಳೇ ನಿಮ್ಮನ್ನು ಬೆಂಬಲಿಸುವರು. ಹಾಗಾಗಿ ನಿಮ್ಮ ಯಶಸ್ಸಿನ ಹಾದಿಗೆ ಅಡ್ಡಲಾಗಿದ್ದ ಕೆಲವು ವಿಚಾರಗಳು ಅಲ್ಲಿಯೇ ಸ್ಥಗಿತಗೊಂಡು ಯಶಸ್ಸಿನ ಹಾದಿ ಸುಗಮವಾಗಲಿದೆ.

 

ಕಿರಿಕಿರಿಗಳು ಸಮುದ್ರದ ಅಲೆಗಳಂತೆ ಒಂದರ ಹಿಂದೆ ಮತ್ತೊಂದು ಬರುತ್ತಲೇ ಇರುತ್ತವೆ. ಆದರೆ ಅದನ್ನು ಎದುರಿಸಿ ಅದರೊಂದಿಗೆ ಸ್ನೇಹ ಸಂಪರ್ಕವನ್ನು ಬೆಳೆಸಿಕೊಂಡಲ್ಲಿ ಮನಸ್ಸಿಗೆ ಹರ್ಷವುಂಟಾಗುವುದು

 

ನಿಮ್ಮ ಎದುರೇ ಎದುರಾಳಿಗಳನ್ನು ಹೊಗಳುವ ಧೂರ್ತರ ಬಗೆಗೆ ಕಿಡಿಕಾರದಿರಿ. ಸಹನೆಯಿಂದ ಒಳಿತಾಗುವುದು ಮತ್ತು ಇದರಿಂದ ಒಂದು ದೊಡ್ಡ ಪಾಠವನ್ನು ಕಲಿಯುವಿರಿ. ನಿಮ್ಮ ಕೈಲಿ ಆದರೆ ಕೆಲಸಗಳನ್ನು ಒಪ್ಪಿಕೊಳ್ಳಿ. ಇಲ್ಲವೆ ನಯವಾಗಿ ತಿರಸ್ಕರಿಸಿ.

 

 

ಬರೀ ಬಾಯಿ ಮಾತಿನಿಂದ ಏನನ್ನೂ ಸಾಧಿಸಲು ಆಗುವುದಿಲ್ಲ. ಸ್ವಾರ್ಥದ ಜೀವನ ಎಂದೂ ಉನ್ನತಮಟ್ಟಕ್ಕೆ ತರುವುದಿಲ್ಲ. ಹೃದಯ ವೈಶಾಲ್ಯತೆ ಬೆಳಸಿಕೊಂಡು ನಿಮ್ಮ ಸುತ್ತಮುತ್ತಲಿನ ಜನಕ್ಕೆ ಸಹಾಯ ಹಸ್ತ ನೀಡಿ.

 

 

ಜನರ ಬಳಿ ಮಾತನಾಡುವಾಗ ಬೇಕಾಬಿಟ್ಟಿ ಮನ ಬಂದಂತೆ ಮಾತನಾಡದಿರಿ. ಹಿತಶತ್ರುಗಳು ನಿಮ್ಮನ್ನು ಮಣಿಸಲು ಹೊಂಚು ಹಾಕಿರುವರು. ಆದಷ್ಟು ಕುಲದೇವರನ್ನು ಆರಾಧಿಸಿ. ನೆಮ್ಮದಿ ಪಡೆಯಿರಿ.

 

 

ದೂರದೂರಿನ ಬಂಧುಗಳಿಂದ ಕಿರಿಕಿರಿಯ ಮಾತುಗಳು ಎದುರಾಗುವ ಸಂಭವ ಇದೆ. ನೀವು ಮಾಡದೇ ಇರುವ ತಪ್ಪಿಗೆ ಮೂದಲಿಸಿಕೊಳ್ಳುವ ಸಂದರ್ಭ ಇರುತ್ತದೆ. ಇದಕ್ಕೆ ಹೆಚ್ಚಿನ ಮಹತ್ವ ನೀಡದೆ ದೇವರ ಪ್ರಾರ್ಥನೆ ಮಾಡಿ.

 

 

ಎಷ್ಟೇ ರೀತಿಯ ಜನರು ನಿಮ್ಮ ಮೇಲೆ ಪರಿಣಾಮ ಬೀರಿರಬಹುದು. ಆದರೆ ಇತ್ತೀಚೆಗೆ ಪರಿಚಯವಾದ ಗಣ್ಯರ ಮಾತು ನಿಮ್ಮ ನಿಜ ಜೀವನಕ್ಕೆ ಹತ್ತಿರವಾದಂತೆ ಅನಿಸುತ್ತಿರುವುದರಿಂದ ಅವರ ಬಗ್ಗೆ ಗೌರವ ಆದರಗಳು ಹೆಚ್ಚಾಗುವವು.

 

ನಿಮ್ಮ ಮಾತಿಗೆ ಬೆಲೆಯುಂಟು ಎಂಬುದು ಒಳ್ಳೆಯದೇ. ಆದರೆ ಜನ ಒಂದೇ ರೀತಿಯಾಗಿ ಚಿಂತಿಸುವುದಿಲ್ಲ. ಹಾಗಾಗಿ ಮೇಲ್ನೋಟಕ್ಕೆ ನಿಮ್ಮಂತೆ ಇದ್ದರೂ ಅವರ ಒಳ ವಿಚಾರಧಾರೆಗಳು ನಿಮ್ಮನ್ನು ಸಂಕಷ್ಟಕ್ಕೆ ಗುರಿ ಮಾಡುವುದೇ ಆಗಿರುತ್ತದೆ.

 

ಬಹುರೂಪಿಯಾದ ಮತ್ತು ಅತ್ಯಂತ ಕರುಣಾಮಯಿಯಾದ ಭಗವಂತನ ಅನುಗ್ರಹ ನಿಮ್ಮ ಮೇಲಿರುವುದರಿಂದ ಹೆದರುವ ಅವಶ್ಯಕತೆಯಿಲ್ಲ. ನಿಮ್ಮ ಮನೆಗೆ ನೂತನ ಸದಸ್ಯರ ಸೇರ್ಪಡೆ ಸಾಧ್ಯತೆ ಇರುವುದು.

 

ನಿಮ್ಮ ಗುರಿಯನ್ನು ಬೆನ್ನುಹತ್ತಿ ಸೋತಿದ್ದೀರಿ ಎನ್ನುವ ಬಳಲಿಕೆ ಬೇಡ. ಮುನ್ನುಗ್ಗಿರಿ, ಜಯಶೀಲರಾಗುವಿರಿ. ಪತ್ನಿಯ ಸಕಾಲಿಕ ಎಚ್ಚರಿಕೆಯ ಮಾತುಗಳನ್ನು ಆಲಿಸಿ ಮತ್ತು ಅದರಂತೆ ಕಾರ್ಯ ಪ್ರವೃತ್ತರಾಗುವುದರಿಂದ ಒಳಿತಾಗುವುದು.

 

ಯಾರು ಏನೇ ಅನ್ನಲಿ, ಬಿಡಲಿ ನಿಮ್ಮ ಕಾರ್ಯವನ್ನು ನೀವು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ಇದು ನಿಮ್ಮನ್ನು ಇಚ್ಛಿತ ಗುರಿಕಡೆಗೆ ಕರೆದುಕೊಂಡು ಹೋಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿಯು ನಿಮಗೆ ಸಂತಸ ನೀಡುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top