fbpx
ಸಮಾಚಾರ

ಕೆಎಲ್‌ ರಾಹುಲ್‌ನ ಉಳಿಸಿಕೊಳ್ಳದೇ ಇರಲು ಇದ್ದ ಕಾರಣ ತಿಳಿಸಿದ ಕುಂಬ್ಳೆ!

ಐಪಿಎಲ್ 2022ರ(IPL 2022) ಟೂರ್ನಿಗೆ ಫ್ರಾಂಚೈಸಿಗಳ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಅದರ ಮೊದಲ ಹಂತವಾಗಿ ಆಟಗಾರರ ರಿಟೆನ್ಶನ್ ಪ್ರಕ್ರಿಯೆ ನೆನ್ನೆಯಷ್ಟೇ ಮುಗಿದಿದ್ದು ಆಯಾ ತಂಡಗಳು ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು ಮಿಕ್ಕವರನ್ನೆಲ್ಲಾ ಬಿಡುಗಡೆ ಮಾಡಿವೆ. ಬಿಡುಗಡೆಗೊಂಡ ಆಟಗಾರರು ಮೆಗಾ ಹರಾಜಿನಲ್ಲಿ ಬೇರೆ ಬೇರೆ ತಂಡಗಳಿಗೆ ಸೇರುತ್ತಾರೆ.

ಕೆಲ ತಂಡಗಳು ಸ್ಟಾರ್ ಆಟಗಾರರನ್ನೇ ಕೈಬಿಟ್ಟಿದ್ದು ಕ್ರಿಕೆಟ್ ಪ್ರೇಮಿಗಳ ಆಚರಿಗೆ ಕಾರಣವಾಗಿದೆ. ಅದೇ ರೀತಿ ಪ್ರೀತಿ ಜಿಂಟಾ ಮಾಲಿಕತ್ವದ ಪಂಜಾಬ್ ಕಿಂಗ್ಸ್ ತಂಡವು ಮಯಾಂಕ್ ಅಗರ್ವಾಲ್ ಮತ್ತು ಅರ್ಶ್ ದೀಪ್ ಸಿಂಗ್ ಅವರನ್ನು ರಿಟೈನ್ ಮಾಡಿಕೊಂಡಿದೆ. ಪಂಜಾಬ್ ಕಿಂಗ್ಸ್ ನ ನಾಯಕ ಕೆ.ಎಲ್.ರಾಹುಲ್ ರನ್ನು ಫ್ರಾಂಚೈಸಿ ಉಳಿಸಿಕೊಂಡಿಲ್ಲ.

ಟಿ20 ಸ್ಪೆಶಲಿಸ್ಟ್ ಎಂದೇ ಹೆಸರುವಾಸಿಯಾಗಿರುವ ರಾಹುಲ್ ಅವರನ್ನು ಕೈಬಿಟ್ಟಿದ್ದು ಎಲ್ಲರನ್ನೂ ಆಶ್ಚರ್ಯಗೊಳಿಸಿದೆ. ಈ ಬಗ್ಗೆ ತಂಡದ ಹೆಡ್ ಕೋಚ್ ಅನಿಲ್ ಕುಂಬ್ಳೆ ಪ್ರತಿಕ್ರಿಯೆ ನೀಡಿದ್ದಾರೆ., “ಕಳೆದ ನಾಲ್ಕು ರ್ವಗಳಲ್ಲಿ ಪಂಜಾಬ್‌ ತಂಡದ ಪ್ರಮುಖ ಆಟಗಾರನಾಗಿ ಕೆಎಲ್‌ ರಾಹುಲ್‌ ಕಾಣಿಸಿಕೊಂಡಿದ್ದಾರೆ. ನಾನು ಪಂಜಾಬ್‌ ತಂಡದ ಕೋಚ್‌ ಆದಾಗಿನಿಂದ ಅವರು ಕಳೆದ 2 ವರ್ಷಗಳಿಂದ ತಂಡದ ನಾಯಕನಾಗಿ ಆಡಿದ್ದಾರೆ. ಹೀಗಾಗಿ ಖಂಡಿತವಾಗಿ ನಾವು ಅವರನ್ನು ಉಳಿಸಿಕೊಳ್ಳಬೇಕು ಎಂದಿದ್ದೆವು. ಆತನ ಸುತ್ತ ಪಂಜಾಬ್‌ ತಂಡ ಕಟ್ಟುವ ಉದ್ದೇಶ ಹೊಂದಿದ್ದೆವು. ಆದರೆ, ಹರಾಜಿಗೆ ಇಳಿಯುವುದು ಅವರ ಸ್ವಂತ ನಿರ್ಧಾರವಾಗಿತ್ತು. ಇದನ್ನು ಗೌರವಿಸಿದ್ದೇವೆ,” ಎಂದು ಕುಂಬ್ಳೆ ಹೇಳಿದ್ದಾರೆ.

“ಐಪಿಎಲ್‌ ಮೆಗಾ ಆಕ್ಷನ್‌ಗೂ ಮುನ್ನ ಆಟಗಾರರು ತಂಡದಿಂದ ಹೊರನಡೆಯುವ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನಿಯಮಗಳು ಹೇಳುತ್ತವೆ. ಇದು ಸಂಪೂರ್ಣ ಆಟಗಾರನ ನಿರ್ಧಾರಕ್ಕೆ ಬಿಟ್ಟಿದ್ದು. ಹೀಗಾಗಿ ಅದನ್ನು ಗೌರವಿಸಿದ್ದೇವೆ. ಅವರು ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ನಂಬಿದ್ದೇವೆ. ಮುಂದೇನಾಗುತ್ತದೆ ಕಾದು ನೋಡಬೇಕು,” ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top