fbpx
ಸಮಾಚಾರ

65ನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ.

ವರ್ಷಗಳು ಮಾಗಿದಷ್ಟು ನಿಜವಾದ ಪ್ರೇಮ ಮತ್ತಷ್ಟು ಅರ್ಥಪೂರ್ಣವಾಗುತ್ತೆ ಅನ್ನೋ ಮಾತು ಇವರ ವಿಷಯದಲ್ಲಿ ನಿಜಕ್ಕೂ ಸತ್ಯವಾಗಿದೆ. ಇವರ ಕಥೆಯಲ್ಲಿ ಒನ್ ಸೈಡ್ ಲವ್ ಅಂದರೆ ಬರೋಬ್ಬರಿ 35 ವರ್ಷಗಳ ಬಳಿಕ ಸಕ್ಸಸ್ ಆಗಿದೆ. ಮೇಲುಕೋಟೆಯಲ್ಲಿ ನೆಡೆದ ಇವರ ಅಪರೂಪದ ವಿವಾಹ. ಇವರು ಮೂಲತಃ ಹಾಸನ ಜಿಲ್ಲೆಯ ಹೊಳೆನರಸೀಪುರದ ಹೆಬ್ಬಾಳದ ಚಿಕ್ಕಣ್ಣ ಮತ್ತು ಅವರ ಅತ್ತೆ ಮಗಳಾದ ಮೈಸೂರಿನ ಜಯಮ್ಮ . ಇದರಲ್ಲೇನು ವಿಶೇಷ ಅಂದರೆ ! ಇವರು ಪ್ರೇಮಿಗಳು ಆದರೆ ಅದು 35 ವರ್ಷದ ಪ್ರೇಮಕಥೆ. ಆದರೆ ಮದುವೆ ಮಾತ್ರ 65ನೇ ವಯಸ್ಸಿನಲ್ಲಿ ಮಾಡಿಕೊಂಡುಬಿಟ್ಟರು.

35 ವರ್ಷಗಳ ಹಿಂದೆ ಜಯಮ್ಮ ಮೇಲೆ ಚಿಕಣ್ಣನಿಗೆ ಪ್ರೇಮ ಆಗಿತ್ತು. ಆದರೆ ಜಯಮ್ಮ ಬೇರೆ ಅವರಿಗೆ ಮದುವೆ ಆಗಿಬಿಟ್ಟರು. ಆದರೆ ಚಿಕಣ್ಣ ಜಯಮ್ಮನ ನೆನಪಿನಲ್ಲಿಯೇ ಇದ್ದು ಬಿಟ್ಟರು . ಆದರೆ ವಿಧಿ ಇಬ್ಬರ ಬಾಳಲ್ಲೂ ಬೇರೆಯದ್ದೇ ಆಟ ಆಡಿ ಬಿಡ್ತು. ಯಾಕೇಂದರೆ ಮದುವೆಯಾದ ಜಯಮ್ಮಗೆ ಸಂಸಾರ ಸುಖ ಸಿಗಲಿಲ್ಲ. ಕಟ್ಟಿಕೊಂಡ ಗಂಡ ಬಿಟ್ಟು ಹೋಗಿಬಿಟ್ಟ, ಮಕ್ಕಳೂ ಇರಲಿಲ್ಲ. ಮದುವೆಯಾದರೂ ಒಂಟಿಯಾಗೇ ಜಯಮ್ಮ ಬದುಕು ನೆಡೆಸುತ್ತಿದರು.

ಇತ್ತ ಚಿಕ್ಕಣ್ಣ ಕೂಡ ಜಯಮ್ಮನ ನೆನಪಲ್ಲೇ ಜೀವನ ಕಳೆದಿದ್ದರು. ಚಿಕ್ಕಣ್ಣನ ಒನ್ ಸೈಡ್ ಲವ್ ಗೆ ಈಗ ಮದುವೆಯ ಸಂಭ್ರಮ. ಕೊನೆಗೆ ಎರಡೂ ಒಂಟಿ ಜೀವಗಳು ಈಗ ಜೊತೆಯಾಗಿದೆ. ಚಿಕ್ಕಣ್ಣನ ಪ್ರೇಮವನ್ನು 35 ವರ್ಷಗಳ ನಂತರ ಜಯಮ್ಮ ಒಪ್ಪಿಕೊಂಡು ಮೇಲುಕೋಟೆ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಪ್ರೇಮಿಗಳಿಬ್ಬರು ನೂರು ಕಾಲ ಚನ್ನಾಗಿರಲಿ ಅಂತ ಸಾಕಷ್ಟು ಜನ ಹಾರೈಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top