ಟಿಆರ್ಪಿ ಪೈಪೋಟಿಗೆ ಬಿದ್ದು, ಬೇಕಿಂಗ್ ನ್ಯೂಸ್ ದಾಹಕ್ಕೆ ಸಿಲುಕಿರುವ ಬಹುತೇಕ ನ್ಯೂಸ್ ಚಾನೆಲ್ ಗಳು ಇಂದು ಜನರಲ್ಲಿ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ.. ಜರ್ನಲಿಸಂ ಅನ್ನೋ ಪದಕ್ಕೆ ಕಳಂಕ ಎಂಬಂತೆ ವರ್ತಿಸುವ ಸೋ ಕಾಲ್ಡ್ ನ್ಯೂಸ್ ಚಾನೆಲ್ ಗಳ ಪಟ್ಟಿಯಲ್ಲಿ ಕನ್ನಡದ ಕುಖ್ಯಾತ ವಾಹಿನಿ ‘ಬಿ ಟಿವಿ’ ಕೂಡ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ತಾವೇ ಮೊದಲು ಸುದ್ದಿ ಬಿತ್ತರಿಸಬೇಕು ಎಂಬ ಹಪಾಹಪಿಯಲ್ಲಿ ಅತಿಶಯೋಕ್ತವಾಗಿ ವರ್ತಿಸಿ ನಗೇಪಾಟಲಿಗೀಡಾಗುತ್ತೆ ಎಂಬ ಆಪಾದನೆ ಬಿಟಿವಿ ಮೇಲೆ ಮೊದಲಿನಿಂದಲೂ ಇದೆ. ಇಂಥಾ ಸಾಕಷ್ಟು ಘಟನೆಗಳು ನಮ್ಮ ಕಣ್ಣ ಮುಂದಿವೆ. ಇಂಥಾ ಬಿಟಿವಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ತೀವ್ರ ಟೀಕೆಗೆ ಗುರಿಯಾಗಿದೆ. ಏನಪ್ಪಾ ಈ ಬಿಟಿವಿಯ ಕಿತಾಪತಿ ಅಂತೀರಾ? ಮುಂದೆ ಓದಿ
ಕನ್ನಡದ ಖ್ಯಾತ ನಟಿ ಅಮೂಲ್ಯ ಅವರು ತಾವು ಚೊಚ್ಚಲ ಮಗುವಿಗೆ ತಾಯಿ ಆಗುತ್ತಿರುವ ವಿಚಾರವನ್ನು ನೆನ್ನೆ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದರು. ಆನಂತರ ಅಭಿಮಾನಿಗಳು ಅಮೂಲ್ಯಗೆ ಶುಭಾಶಯ ಕೋರಿದರು ಈ ಮಧ್ಯೆ ಕನ್ನಡದ ಬಿಟಿವಿ ಸುದ್ದಿಯನ್ನು ಬಿತ್ತರಿಸುವ ಭರದಲ್ಲಿ ಬಾಯಿಗೆ ಬಂದ ಹಾಗೆ ತಲೆಕೆಟ್ಟ ಹೆಡ್ ಲೈನ್ ಗಳನ್ನು ಹಾಕಿ ನಗೆಪಾಟಲಿಗೆ ಈಡಾಗಿತ್ತು.
ಅಮೂಲ್ಯಾ ಅವರು ಗರ್ಭಿಣಿ ಆದ ಸಾಮಾನ್ಯ ವಿಷಯ ‘ಇಡೀ ರಾಜ್ಯಕ್ಕೆ ಶುಭ ಸುದ್ದಿ’ ಸುದ್ದಿ ಎಂದು ಉಲ್ಲೇಖಿಸಿ ಹೆಡ್ ಲೈನ್ ತೋರಿಸಿರುವ ಬಿಟಿವಿ, “ಉಲ್ಲಾಸದ ಹೂಮಳೆ ಸುರಿಸುವ ಖುಷಿಖುಷಿಯ ಸುದ್ದಿ, ಸ್ಯಾಂಡಲ್ವುಡ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್, ಇಡೀ ರಾಜ್ಯ ಖುಷಿ ಪಡುವ ಸುದ್ದಿ-ನಟಿ ಅಮೂಲ್ಯಾ ಪ್ರಗ್ನೆಂಟ್” ಎಂಬಿತ್ಯಾದಿ ತಲೆಕೆಟ್ಟ ಹೆಡ್ ಲೈನ್ ಗಳನ್ನ ಹಾಕಿ ಅಪಹಾಸ್ಯಕ್ಕೆ ತುತ್ತಾಗಿತ್ತು.
ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟೀಕೆಗೆ ಗುರಿಯಾಗುತ್ತಿದ್ದಂತೆ ಬಿಟಿವಿ ಮತ್ತೊಂದು ಸುದ್ದಿ ಪ್ರಸಾರ ಮಾಡಿದೆ. “ತಮ್ಮ ಸುದ್ದಿಯನ್ನು ಇಟ್ಟುಕೊಂಡು ಟ್ರೊಲ್ ಮಾಡಿದ್ದು ತಪ್ಪು, ಟ್ರೋಲ್ ಮಾಡುವವರಿಗೆ ಬೇರೆ ಕೆಲಸವೇ ಇರುವುದಿಲ್ಲ, ಅವರಿಗೆ ಬಿಟ್ಟು ಇಂಟರ್ನೆಟ್ ಸಿಗುತ್ತೆ” ಎಂಬಿತ್ಯಾದಿಯಾಗಿ ಚೈಲ್ಡ್ ನಿರೂಪಕಿ ಯೊಬ್ಬಳು ಬಾಯಿಗೆ ಬಂದಂತೆ ವದರಿದ್ದಾಳೆ. ಈ ವಿಚಾರದಿಂದ ಈಗ ಮತ್ತೊಮ್ಮೆ ಬಿಟಿವಿ ಮೇಲೆ ಟ್ರೋಲಿಗರು ಎರಗಿ ಬಿದ್ದಿದ್ದಾರೆ. ಯಾರು ಬಿಟ್ಟು ಇಂಟರ್ನೆಟ್ ಸಿಗಲ್ಲ ದುಡ್ಡು ಕೊಟ್ಟೆ ರಿಚಾರ್ಜ್ ಮಾಡಿಸ್ಕೋತೀನಿ ಎಂಬ ಅರ್ಥದಲ್ಲಿ ಡಿಟಿವಿಗೆ ಜನರು ಹುಗಿದಿದ್ದಾರೆ.
ಬಿಟಿವಿಯ ಈ ಹೆಡ್ ಲೈನ್ ಗಳನ್ನ ಸ್ಕ್ರೀನ್ ಶಾಟ್ ತೆಗೆದುಕೊಂಡು ನೆಟ್ಟಿಗರು ಸಿಕ್ಕಾಪಟ್ಟೆ ವ್ಯಂಗ್ಯ ಮಾಡಿದ್ದಾರೆ. ಇತ್ತ ಟ್ರೋಲ್ ಪೇಜುಗಳು ಸಹ ಭೀತಿಯನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡಿವೆ. ಕೆಲ ಟ್ರೋಲ್ ಪೋಸ್ಟ್ ಗಳು ಈ ಕೆಳಗಿನಂತಿವೆ ನೋಡಿ ಒಮ್ಮೆ ನಕ್ಕುಬಿಡಿ.
As per #BTV, everyone in full celebration mood.! @memesmaadonu pic.twitter.com/NALwEoNozb
— SUDHIR Devadiga (@SudhirMudrady) December 2, 2021
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
