fbpx
ಸಮಾಚಾರ

“ಶಿವರಾಂ ಮೆದುಳು, ಹೃದಯ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ, ಅವ್ರು ತುಂಬಾ ಹೊತ್ತು ನಮ್ಮ ಜೊತೆ ಇರಲ್ಲ” ವೈದ್ಯ ಕಣ್ಣೀರು

ನಟ ಶಿವರಾಂ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎಂದು ಪ್ರಶಾಂತ್‌ ಆಸ್ಪತ್ರೆಯ ವೈದ್ಯ ಮೋಹನ್‌ ತಿಳಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅವರು ತುಂಬಾ ಸಮಯ ನಮ್ಮ ಜೊತೆಗೆ ಇರಲ್ಲ” ಎಂದು ಹೇಳುತ್ತಾ ವೈದ್ಯರು ಭಾವುಕರಾಗಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ವೈದ್ಯ ಡಾ. ಮೋಹನ್, ಅವರ ಆರೋಗ್ಯ ಚೇತರಿಕೆಗಾಗಿ ನಾವು ಕಾಯುತ್ತಿದ್ದೆವು. ಆ ಆದರೆ ಅವರ ಬ್ರೈನ್‍ಗೆ ಅತಿ ಹೆಚ್ಚಿನ ಹಾನಿಯಾಗಿದೆ. ನಾನು ಶಿವರಾಂ ಅವರ ಸಂಬಂಧಿ ಮತ್ತು ಡಾಕ್ಟರ್ ಆಗಿ ಇವತ್ತು ನಿಮ್ಮ ಮುಂದೆ ಬಂದು ನಿಲ್ಲಲು ನನಗೆ ತುಂಬಾ ಕಷ್ಟವಾಗುತ್ತಿದೆ. ಮಿರಾಕಲ್ ಆಗುತ್ತದೆ ಎನ್ನುವ ಭಾವನೆ ನಮಗೆ ಕಮ್ಮಿಯಾಗುತ್ತಿದೆ. ನಾವು ಏನೇ ಮಾಡಿದರೂ ಅವರಿಗೆ ಹಿಂಸೆ ಆಗುತ್ತದೆ. ಕಿಡ್ನಿ, ಲಿವರ್ ವರ್ಕ್ ಆಗುತ್ತಿದೆ. ಆದರೆ ಹೃದಯ ಸ್ಪಂದಿಸುತ್ತಿಲ್ಲ. ಅವರು ತುಂಬಾ ಸಮಯ ನಮ್ಮ ಜೊತೆಗೆ ಇರಲ್ಲ ಎಂದು ಹೇಳುತ್ತಾ ವೈದ್ಯರು ಭಾವುಕರಾಗಿದ್ದಾರೆ.

‘ಜೀವರಕ್ಷಕದ ನೆರವು ಹೆಚ್ಚಿಸಿದ್ದೇವೆ. ತುಂಬಾ ಹಿಂಸೆ ಮಾಡಬೇಡಿ ಎಂದು ಕುಟುಂಬದವರು ಹೇಳಿದ್ದಾರೆ. ಉಳಿಸಿಕೊಳ್ಳಲು ನೋಡಿ ಎನ್ನುತ್ತಿದ್ದಾರೆ. ಅವರಿಗೂ ಪರಿಸ್ಥಿತಿ ಅರ್ಥವಾಗಿದೆ. ಎಂಆರ್‌ಐ ಸ್ಕ್ಯಾನ್‌ ಮಾಡಲು ಸಾಧ್ಯವಿಲ್ಲ. ಏಕೆಂದರೆ ಸ್ಕ್ಯಾನ್‌ ಮಾಡಲು ಅವರನ್ನು ಬೆಡ್‌ನಿಂದ ಸ್ಥಳಾಂತರಿಸಬೇಕು. ಹೀಗೆ ಮಾಡಿದಲ್ಲಿ ರಕ್ತದೊತ್ತಡ ಏರುಪೇರಾಗಬಹುದು ಎನ್ನುವ ಭಯವಿದೆ. ಶ್ವಾಸಕೋಶದಲ್ಲಿ ನೀರು ತುಂಬುತ್ತಿದೆ. ಮಿದುಳಿನ ಜೊತೆ ಇತರೆ ಅಂಗಾಂಗಗಳೂ ನಿಷ್ಕ್ರಿಯಗೊಳ್ಳುತ್ತಿವೆ’ ಎಂದು ಮೋಹನ್‌ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top