fbpx
ಸಮಾಚಾರ

“ಡಾ.ರಾಜ್ ಬಿಟ್ರೆ ಅತಿ ದೊಡ್ಡ ಸ್ಥಾನದಲ್ಲಿರುವವರು ಹಂಸಲೇಖ, ಅವರಿಗೆ ಚಿತ್ರರಂಗದ ಸಂಪೂರ್ಣ ಬೆಂಬಲವಿದೆ” ನಟ ಡಾಲಿ ಧನಂಜಯ್

ಕನ್ನಡ ಚಿತ್ರರಂಗದ ದೈತ್ಯ ದೇಸಿಪ್ರತಿಭೆ ನಾದಬ್ರಹ್ಮ ಹಂಸಲೇಖ ಅವರು ದಲಿತರ ಮೇಲೆ ನಡೆಯುತ್ತಿರುವ ಅಸ್ಪೃಶ್ಯತೆ, ಸಮಾಜದಲ್ಲಿನ ಜಾಲಾತಿದೋರಣೆಗಳ ವಿಚಾರವಾಗಿ ನೀಡಿದ್ದ ಹೇಳಿಕೆ ಸಮಾಜದಲ್ಲಿ ಸಂಚಲವನ್ನೇ ಸೃಷ್ಟಿಸಿತ್ತು. ಈ ವಿಚಾರವಾಗಿ ವಿರೋಧಿಗಳು ನಾದಬ್ರಹ್ಮನ ವಿರುದ್ಧ ಪೊಲೀಸ್ ದೂರು ನೀಡಿದ್ದರು. ಸದ್ಯ ಈ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿ ಹಂಸಲೇಖಾರಿಗೆ ರಿಲೀಫ್ ಸಿಕ್ಕಿದ್ದು ವಿವಾದ ಬಹುತೇಕ ತಣ್ಣಗಾಗಿದೆ.

ಈ ಮದ್ಯೆ ನಟ ದಾಳಿ ಧನಂಜಯ ನಾದಬ್ರಹ್ಮ ಹಂಸಲೇಖ ಅವರಿಗೆ ಬೆಂಬಲ ಸೂಚಿಸಿದ್ದಾರೆ. “ಹಂಸಲೇಖ ಅವರು ಡಾ.ರಾಜಕುಮಾರ್ ನಂತರದಲ್ಲಿ ಅತಿ ದೊಡ್ಡ ಸ್ಥಾನದಲ್ಲಿ ಇರುವವರು. ಚಿತ್ರರಂಗಕ್ಕೆ, ಬರವಣಿಗೆಗೆ ಅವರು ನೀಡಿರುವ ಕೊಡುಗೆ ದೊಡ್ಡದು. ಅವರ ವಿಚಾರದಲ್ಲಿ ಚಿತ್ರರಂಗ ಕಮೆಂಟ್ಸ್ ಮಾಡದೇ ಇರಬಹುದು ಆದರೆ ಅವರ ಬೆಂಬಲಕ್ಕೆ ಇಡೀ ಚಿತ್ರರಂಗ ಇದೆ” ಎಂದು ಧನಂಜಯ್ ಹೇಳಿರುವುದಾಗಿ ಕನ್ನಡ ಸುದ್ದಿ ಪತ್ರಿಕೆಯೊಂದು ವರದಿ ಮಾಡಿದೆ.

ಕಾರ್ಯಕ್ರಮವೊಂದರ ಅತಿಥಿಯಾಗಿ ಕುಂದಾಪುರಕ್ಕೆ ಹೋಗಿದ್ದ ಧನಂಜಯ್ ಈ ವೇಳೆ ಪತ್ರಿಕೆಯ ಜೊತೆ ಮಾತನಾಡಿದ್ದಾರೆ “ಮಾನವೀಯತೆಗೆ ಹಂಸಲೇಖರ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ. ವೈಚಾರಿಕ ಭಿನ್ನಾಭಿಪ್ರಾಯ ಇರುತ್ತದೆ ಆದರೆ ಸೌಹಾರ್ದತೆ ಕೂಡ ಅಷ್ಟೇ ಮುಖ್ಯ” ಎಂದು ಧನಂಜಯ್ ಹೇಳಿದ್ದಾರೆ.

ಏನಿದು ವಿವಾದ?
ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಹಂಸಲೇಖ ಈ ದೇಶದ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿರುವ ಜಾತೀಯತೆ ಮತ್ತು ಅಸ್ಪೃಶ್ಯತೆ ಬಗ್ಗೆ ಮಾತನಾಡಿದ್ದರು. “ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿ ಕುಳಿತುಕೊಂಡು ಬಂದಿದ್ದಾರೆ. ಆದರೆ ದಲಿತರು ಕೋಳಿ ಕೊಟ್ರೆ ತಿಂತಾರಾ..? ಕುರಿ ರಕ್ತ ಪ್ರೈ ಮಾಡಿ ಕೊಟ್ರೆ ತಿಂತಾರಾ..? ಲಿವರ್ ಕೊಟ್ರೆ ತಿಂತಾರಾ..? ದಲಿತರ ಮನೆಗೆ ಹೋಗುವುದು ದೊಡ್ಡ ವಿಷಯ ಅಲ್ಲ, ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವರು ತಿಂದ ಲೋಟ, ತಟ್ಟೆ ತೊಳೆಯೋದು ದೊಡ್ಡ ವಿಷಯ” ಎಂದು ಹೇಳಿದ್ದರು. ಹಂಸಲೇಖರ ಈ ಹೇಳಿಕೆಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top