fbpx
ಸಮಾಚಾರ

ಇಮ್ಮಡಿ ಪುಲಿಕೇಶಿ ಜಯಂತಿ ವಿಶೇಷ: ಯುದ್ಧದಲ್ಲಿ ಸೋತವರನ್ನು ಗೌರವಿಸುವ ಗುಣ ನಮ್ಮ ಕನ್ನಡಿಗರದ್ದು

ಕರ್ನಾಟಕದ ಹೆಮ್ಮೆಯ ಚಾಲುಕ್ಯ ದೊರೆ, ದಕ್ಷಿಣ ಪಥೇಶ್ವರ ಶ್ರೀ ಇಮ್ಮಡಿ ಪುಲಿಕೇಶಿ ಅವರ ಜಯಂತಿ ಇಂದು. ಸಾವಿರಾರು ವರ್ಷಗಳ ಹಿಂದೆಯೇ ಬೃಹತ್ ನೌಕಾಪಡೆಯನ್ನು ಕಟ್ಟಿದ್ದ ಕನ್ನಡ ನಾಡಿನ ಹೆಮ್ಮೆಯ ಸೇನಾನಿ. ಬಾದಾಮಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡುಮಹಾರಾಷ್ಟ್ರವೂ ಸೇರಿದಂತೆ ಕರ್ನಾಟಕವನ್ನು ಆಳಿದ ಇಮ್ಮಡಿ ಪುಲಿಕೇಶಿ ತನ್ನ ಚಿಂತನೆ ಮತ್ತು ಧೋರಣೆಗಳಲ್ಲಿ ಜನಪರ, ಜಾತ್ಯತೀತ ಮತ್ತು ಅಭಿವೃದ್ದಿಯ ಹರಿಕಾರನೂ ಆಗಿದ್ದ.

ಯುದ್ದದಲ್ಲಿ ಸೋತ ರಾಜನನ್ನು ಗೆದ್ದ ರಾಜನು ಆತ್ಮೀಯವಾಗಿ ಸ್ವಾಗತಿಸುವುದೇ ಎಲ್ಲಾದರೂ ಸಾಧ್ಯವೇ.ಇದು ಕನ್ನಡಿಗರ ಇತಿಹಾಸದ ಪುಟವನ್ನ್ನು ಒಮ್ಮೆ ತಿರುವಿದರೆ ಮಾತ್ರ ಕಾಣಸಿಗುವ ವಾಸ್ತವ . ಹೌದು ಸೌಜನ್ಯತೆ ಎನ್ನುವ ಪದಕ್ಕೆ ಮತ್ತಷ್ಟು ಮೆರುಗು ನೀಡಿದ ಅ ರಾಜಕುಮಾರ ಮತ್ತಾರು ಅಲ್ಲ ಸತ್ಯಾಶ್ರಯ ಶ್ರೀ ಪೃಥ್ವಿ ವಲ್ಲಭ , ಪರಮ ಭಟ್ಟಾರಕ ಮಹಾರಾಜಧಿರಾಜ , ದಕ್ಷಿಣಾಪಥೇಶ್ವರ , ಪರಮೇಶ್ವರ ಎಂದು ಬಿರುದು ಪಡೆದಿದ್ದ ಚಾಲುಕ್ಯ ದೊರೆ ಇಮ್ಮಡಿ ಪುಲಕೇಶಿ.

ಉತ್ತರಭಾರತವನ್ನು ಗೆದ್ದು ಬಿಗಿಯುತ್ತಿದ್ದ ಉತ್ತರಪಥೇಶ್ವರ ಹರ್ಷವರ್ಧನನು , ಪುಲಕೇಶಿಯನ್ನು ಸೋಲಿಸಿ, ದಕ್ಷಿಣ ಭಾರತವನ್ನು ಗೆದ್ದು ಸಮಸ್ತ ಭಾರತದ ಚಕ್ರವರ್ತಿಯಾಗಿ ಮೆರೆಯ ಬೇಕೆಂಬ ಮಹಾದಾಸೆಯೊಂದಿಗೆ ತನ್ನ ಬಲಿಷ್ಠ ಸೈನ್ಯವನ್ನು ನರ್ಮದೆಯ ತೀರದಲ್ಲಿ ಬೀಡು ಬೀಡುತ್ತಾನೆ. ಹರ್ಷವರ್ಧನನ ಗರ್ವವನ್ನು ಅಡಗಿಸಿ ಅವನಿಗೆ ತಕ್ಕ ಬುದ್ದಿ ಕಲಿಸುವ ಸಲುವಾಗಿ ಪುಲಕೇಶಿಯು ತನ್ನ ಮಿತ್ರರಾದ ಕದಂಬರು,ಗಂಗರು, ಅಳುಪರು, ಸೇಂದ್ರಕರು ಮುಂತಾದವರನ್ನು ಒಟ್ಟುಗೂಡಿಸಿ ನರ್ಮದೆಯ ಕಡೆಗೆ ಮುನ್ನುಗುತ್ತಾನೆ. ಯುದ್ದಕ್ಕೆ ಮುನ್ನ ಸಂಧಾನ ಮಾಡುವುದು ರಾಜಧರ್ಮ. ಸಂಧಾನ ವಿಫಲವಾದುದರಿಂದ ಯುದ್ದ ಅನಿವಾರ್ಯವಾಯಿತು. ಮುಂದೆ ನಡೆದ ಘೋರ ಕಾಳಗದಲ್ಲಿ ಪುಲಕೇಶಿಯ ಸಾಮರ್ಥ್ಯದ ಮುಂದೆ ಹರ್ಷವರ್ಧನನ ಸೈನ್ಯ ನುಚ್ಚು ನೂರಾಯಿತು. ಹರ್ಷವರ್ಧನ ಸೋಲನ್ನು ಒಪ್ಪಿಕೊಳ್ಳುತ್ತಾನೆ. ಪುಲಕೇಶಿಯ ಸೈನಿಕರು ಸಂಭ್ರಮವನ್ನು ಆಚರಿಸುತ್ತಿದ್ದರೆ ಇತ್ತ ಕಡೆ ಹರ್ಷವರ್ಧನನ ಸೈನಿಕರು ತಲೆ ತಗ್ಗಿಸಿ ನಿಂತಿರುತ್ತಾರೆ.

ಅಗ ಹರ್ಷವರ್ಧನನು ರಥವನ್ನೇರಿ ತನ್ನ ಪಾಳೆಯವನ್ನು ಬಿಟ್ಟು ಪುಲಕೇಶಿಯ ಬಿಡಾರ ಕಡೆಗೆ ಬಂದಾಗ ಪುಲಕೇಶಿಯು ತನ್ನ ಅಸನದಿಂದೆದ್ದು ಬಂದು ಹರ್ಷವರ್ಧನನ್ನು ಕುರಿತು ” ಹರ್ಷವರ್ಧನ ಚಕ್ರವರ್ತಿಗಳಿಗೆ ಸುಸ್ವಾಗತ ” . ಹರ್ಷವರ್ಧನ ರಥದಿಂದ ಇಳಿದು ಬಂದು ಪುಲಕೇಶಿಯಯನ್ನು ಆಲಂಗಿಸಿ ” ನಿಮ್ಮ ಸೌಜನ್ಯ, ನಮ್ಮ ಕಣ್ಣನ್ನು ತೆರೆಸಿತು, ನಿಮ್ಮ ಶೌರ್ಯ ಮತ್ತು ಸೌಜನ್ಯದ ಬಗ್ಗೆ ಕೇಳಿದ್ದೆ , ನೀವು ನನ್ನ ಯುದ್ದದಲ್ಲಿ ಮಾತ್ರ ಗೆಲ್ಲಲಿಲ್ಲ , ಹೃದಯದಿಂದಲು ಗೆದ್ದಿದಿರಿ ” ಎಂದು ಹೇಳಿ , ಇಂದಿನಿಂದ ನೀವು ದಕ್ಷಿಣಾಪಥೇಶ್ವರ ಎಂಬ ಬಿರುದನ್ನು ಕೊಟ್ಟನು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top