fbpx
ಸಮಾಚಾರ

“ಶಿವಣ್ಣ ಎಂದಾಕ್ಷಣ ನೆನಪಿಗೆ ಬರುವುದು……..” ಹಿರಿಯ ನಟ ಶಿವರಾಮ್ ಬಗ್ಗೆ ಶಿವಣ್ಣ ಹೇಳಿದ್ದೇನು ಗೊತ್ತಾ?

ಕನ್ನಡದ ಹಿರಿಯ ನಟ ಶಿವರಾಂ ಅವರು ಡಿಸೆಂಬರ್ 4 ರಂದು ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಅಪಘಾತ ಗಾಯಗೊಂಡು ವಿದ್ಯಾಪೀಠ ಸರ್ಕಲ್ ಬಳಿ ಇರುವ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬ್ರೇನ್ ಡ್ಯಾಮೇಜ್ ನಿಂದ ಕೋಮಾದಲ್ಲಿದ್ದರು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ಶಿವರಾಮ್ ಅವರ ನಿಧನಕ್ಕೆ ಚಿತ್ರರಂಗ, ರಾಜಕೀಯ ಗಣ್ಯರು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಅಂತೆಯೇ ನಟ ಶಿವ ರಾಜಕುಮಾರ್ ಅವರು ಶಿವರಾಂ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವರ ಅಗಲಿಕೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಶಿವಣ್ಣ ಹೇಳಿದ್ದೇನು?
ಎಸ್‌. ಶಿವರಾಮ್​ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಣ್ಣ ಅವರು, ‘ನಿನ್ನೆ ಆಸ್ಪತ್ರೆಗೆ ಬಂದು ನೋಡಿದಾಗ ಶಿವರಾಮಣ್ಣ ಚೇತರಿಸಿಕೊಳ್ಳುತ್ತಾರೆ ಎನ್ನುವ ಭರವಸೆ ಇತ್ತು. ಇವತ್ತು ಸುದ್ದಿ ಕೇಳಿದಾಗ ಆಘಾತವಾಯಿತು. ಒಂದು ತಿಂಗಳ ಹಿಂದೆ ಅಪ್ಪು. ಇದೀಗ ಶಿವರಾಮಣ್ಣ. ಶಿವರಾಮಣ್ಣ ನಮ್ಮ ಕುಟುಂಬದ ಸದಸ್ಯರಾಗಿದ್ದರು. ಎಲ್ಲ ಪರಿಸ್ಥಿತಿಯಲ್ಲೂ ನಮ್ಮ ಕುಟುಂಬದ ಜೊತೆಗಿದ್ದರು’ ಎಂದು ಸ್ಮರಿಸಿದರು.

ಶಿವರಾಮಣ್ಣ ಎಂದ ತಕ್ಷಣ ಜ್ಞಾಪಕಕ್ಕೆ ಬರುವುದು ಶಬರಿಮಲೆ. ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದ ರೀತಿ ಇನ್ನೂ ನೆನಪಿಗೆ ಬರುತ್ತದೆ. ಅವರನ್ನು ನಾವು ಗುರುಸ್ವಾಮಿ ಆಗಿ ಸ್ವೀಕರಿಸಿದ್ದೆವು. ಅವರಲ್ಲಿ ಆ ಒಂದು ಚೈತನ್ಯವಿತ್ತು. ಮೂರ್ನಾಲ್ಕು ವರ್ಷಗಳ ಹಿಂದೆ ಶಬರಿಮಲೆ ಬೆಟ್ಟವನ್ನು ಆರಾಮವಾಗಿ ಹತ್ತಿದ್ದರು. ಇದು ಅವರ ಸಾಮರ್ಥ್ಯಕ್ಕೆ ಸಾಕ್ಷಿ” ಎಂದು ಹೇಳುತ್ತ ಶಿವಣ್ಣ ಭಾವುಕರಾದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top