fbpx
ಸಮಾಚಾರ

ಪುನೀತ್​ ಕನಸಿನ ‘ಗಂಧದ ಗುಡಿ’ ಟೀಸರ್​ ರಿಲೀಸ್​ ಮಾಡಲಿದ್ದಾರೆ ಈ ‘ವಿಶೇಷ ವ್ಯಕ್ತಿ’ ಯಾರು ಗೊತ್ತಾ? ಆಹ್ವಾನ ನೀಡಿದ ಶಿವಣ್ಣ

ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಾಕಷ್ಟು ಕನಸುಗಳನ್ನು ಹೊತ್ತುಕೊಂಡಿದ್ದವರು. ಪುನೀತ್​ ರಾಜ್​ಕುಮಾರ್ ಪಿಆರ್​ಕೆ ಪ್ರೊಡಕ್ಷನ್​ ಅಡಿಯಲ್ಲಿ ಸಾಕಷ್ಟು ಭಿನ್ನ ಸಿನಿಮಾಗಳನ್ನು ನಿರ್ಮಾಣ ಮಾಡೋಕೆ ಪಣತೊಟ್ಟಿದ್ದರು. ಇದರ ಜತೆಗೆ ಕರ್ನಾಟಕದ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡಿದ್ದರು. ಆದರೆ ಅದನ್ನು ಅಭಿಮಾನಿಗಳಿಗೆ ತೋರಿಸುವ ಮುನ್ನವೇ ನಮ್ಮನ್ನ ಬಿಟ್ಟು ಅಪ್ಪು ದೂರವಾಗಿದ್ದಾರೆ.

ಇದರ ಟೈಟಲ್​ ಟೀಸರ್​ ಡಿಸೆಂಬರ್​ 6ಕ್ಕೆ ​ ರಿಲೀಸ್​ ಆಗಲಿದೆ. ಡಿಸೇಂಬರ್ 6 ರಾಜ್ ಕುಟುಂಬಕ್ಕೆ ತುಂಬಾ ವಿಶೇಷ ದಿನ. ಏಕೆಂದರೆ ಅಂದು ಪಾರ್ವತಮ್ಮ ರಾಜಕುಮಾರ್ ಅವರ ಜನ್ಮದಿನ. ಅದರ ವಿಶೇಷವಾಗಿ ಅಪ್ಪು ಚಿತ್ರೀಕರಿಸಿದ್ದ ‘ಗಂಧದ ಗುಡಿ’ ಡಾಕ್ಯುಮೆಂಟರಿಯನ್ನು ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದೆ.

 

ಟೈಟಲ್​ ಟೀಸರ್​ ಬಿಡುಗಡೆಗೆ ಡಾ. ರಾಜ್​ಕುಮಾರ್​ ಕುಟುಂಬದವರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಪಿಆರ್​ಕೆ ಆಡಿಯೋ ಮೂಲಕ ಅದು ರಿಲೀಸ್​ ಆಗಲಿದೆ. ಟೀಸರ್​ ಬಿಡುಗಡೆ ಮಾಡಲು ಶಿವರಾಜ್​ಕುಮಾರ್ ಅವರು ವಿಶೇಷ ವ್ಯಕ್ತಿಯನ್ನು ಆಹ್ವಾನಿಸಿದ್ದಾರೆ. ಯಾರದು? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ! ಹೌದು, ಈ ಕುರಿತು ಈಗಾಗಲೇ ಸಿಎಂ ಅವರನ್ನು ಶಿವಣ್ಣ ಭೇಟಿ ಮಾಡಿದ್ದಾರೆ.

ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಸಿಎಂ ಸರ್ಕಾರಿ ನಿವಾಸದಲ್ಲಿ ಶಿವರಾಜ್​ಕುಮಾರ್​ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಆಗಿದ್ದಾರೆ. ಈ ವೇಳೆ ‘ಗಂಧದ ಗುಡಿ’ ಟೈಟಲ್​ ಟೀಸರ್ ಬಿಡುಗಡೆಗೆ ಆಹ್ವಾನ ನೀಡಿದ್ದಾರೆ. ಇದು ಪುನೀತ್ ರಾಜ್‌ಕುಮಾರ್ ಅವರ ಡ್ರೀಮ್ ಪ್ರಾಜೆಕ್ಟ್ ಆಗಿರುವುದರಿಂದ ಎಲ್ಲರಿಗೂ ಹೆಚ್ಚಿನ ನಿರೀಕ್ಷೆ ಇದೆ. ಡಿ.6ರಂದು ಟೀಸರ್ ಆಗಲಿದೆ.

ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ, ರಾಷ್ಟ್ರಪ್ರಶಸ್ತಿ ವಿಜೇತ ‘ವೈಲ್ಡ್‌ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಜೆ.ಎಸ್‌. ಅವರ ಜೊತೆಗೂಡಿ ಪುನೀತ್‌ ‘ಗಂಧದ ಗುಡಿ’ ಹೆಸರಿನಲ್ಲಿ ಡಾಕ್ಯೂಫಿಲಂ ಒಂದನ್ನು ನಿರ್ಮಾಣ ಮಾಡಿದ್ದರು. ಕರ್ನಾಟಕದ ವನ್ಯಲೋಕ, ವನ್ಯಸಂಪತ್ತನ್ನು ಪರಿಚಯಿಸುವ ಈ ಸಾಕ್ಷ್ಯಚಿತ್ರದ ಟೀಸರ್‌ ನ.1ಕ್ಕೆ ಅನಾವರಣಗೊಳ್ಳಬೇಕಿತ್ತು. ಆದರೆ ಅಪ್ಪು ಅಕಾಲಿಕ ನಿಧನದಿಂದಾಗಿ ಇದು ಸಾಧ್ಯವಾಗಿರಲಿಲ್ಲ. ನಾಗರಹೊಳೆ, ಕಾಳಿನದಿ, ಹೊಸಪೇಟೆ ಸೇರಿದಂತೆ ಕರ್ನಾಟಕದ ಹಲವು ಜಾಗಗಳಲ್ಲಿ ಸುತ್ತಿ ಇದರ ಚಿತ್ರೀಕರಣ ನಡೆಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top