fbpx
ಸಮಾಚಾರ

ಶಿವರಾಮ್ ಕೇವಲ ನಟ ಮಾತ್ರ ಅಲ್ಲ, ಅವರು ಸ್ಥಾಪಿಸಿದ್ದ ‘ರಾಶಿ ಬ್ರದರ್ಸ್’​ ಸಂಸ್ಥೆ ಹೆಸರಿನ ಅರ್ಥವೇನು ಗೊತ್ತಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ

ಕನ್ನಡದ ಹಿರಿಯ ನಟ ಶಿವರಾಂ ಅವರು ಡಿಸೆಂಬರ್ 4 ರಂದು ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಕನ್ನಡ ಚಿತ್ರರಂಗ, ರಾಜಕೀಯ ವ್ಯಕ್ತಿಗಳು ಸಂತಾಪ ಸೂಚಿಸಿದ್ದಾರೆ. ಶಿವರಾಮ್ ಅವರ ಅಗಲಿಕೆಯ ಹಿನ್ನಲೆ ಅವರ ಕೆಲ ಸಾಧನೆಗಳತ್ತ ಕಣ್ಣು ಹಾಯಿಸೋಣ.

ಕನ್ನಡ ಚಿತ್ರರಂಗದಲ್ಲಿ ಸುಮಾರು ಆರು ದಶಕಗಳಿಂದ ಪೋಷಕನಟನಾಗಿ, ಹಾಸ್ಯನಟನಾಗಿ ನಟಿಸುವ ಮೂಲಕ ಅಪಾರ ಜನಮೆಚ್ಚುಗೆ ಗಳಿಸಿದವರಲ್ಲಿ ಎಸ್.ಶಿವರಾಮ್ ಅಲಿಯಾಸ್ ಶಿವರಾಮಣ್ಣ ಕೂಡಾ ಒಬ್ಬರಾಗಿದ್ದಾರೆ. ಇವರು ನಟನಾಗಿ ಮಾತ್ರವಲ್ಲ, ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

‘ರಾಶಿ ಬ್ರದರ್ಸ್’​ ಸಿನಿಮಾ ನಿರ್ಮಾಣ ಸಂಸ್ಥೆ ಸ್ಥಾಪಿಸಿ, ಅದರ ಅಡಿಯಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಶಿವರಾಂ​ ಅವರು ಸಹೋದರ ರಾಮನಾಥನ್​ ಜತೆಗೂಡಿ ರಾಶಿ ಬ್ರದರ್ಸ್​ ನಿರ್ಮಾಣ ಸಂಸ್ಥೆ ಸ್ಥಾಪನೆ ಮಾಡಿದರು. ರಾಮನಾಥನ್​ ಹೆಸರಿನ ಮೊದಲ ಅಕ್ಷರ ಹಾಗೂ ಶಿವರಾಂ ಹೆಸರಿನ ಮೊದಲ ಅಕ್ಷರ ಬಳಕೆ ಮಾಡಿಕೊಂಡು ರಾಶಿ ಬ್ರದರ್ಸ್​ ಎಂದು ನಾಮಕರಣ ಮಾಡಲಾಯಿತು. ಈ ಸಹೋದರರು ಒಟ್ಟೂ ಆರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top