fbpx
ಸಮಾಚಾರ

ವಾವ್ ವಾಟ್ ಎ ಕ್ಯಾಚ್: ಶ್ರೇಯಸ್ ಅಯ್ಯರ್ ಹಿಡಿದ ಅತ್ಯದ್ಭುತ ಕ್ಯಾಚ್ ಫುಲ್ ವೈರಲ್: ವಿಡಿಯೋ ನೋಡಿ

ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ಭಾರತ ತಂಡ ಮೊದಲನೇ ಇನ್ನಿಂಗ್ಸ್ ನಲ್ಲಿ ಬರೋಬ್ಬರಿ 325 ರನ್ ಗಳ ಮತವನ್ನು ಪೇರಿಸಿತು. ಇದಕ್ಕೆ ಉತ್ತರವಾಗಿ ತನ್ನ ಕೋಟಾದ ಪ್ರಥಮ ಇನ್ನಿಂಗ್ಸ್ ನ್ಯೂಜಿಲೆಂಡ್ ತಂಡವು ಕೇವಲ 62 ರನ್ ಗಳಿಗೆ ಆಲೌಟ್ ಆಗಿ ಇನಿಂಗ್ಸ್ನಲ್ಲಿ ಬರೋಬ್ಬರಿ 263 ರನ್ ಗಳ ಹಿನ್ನಡೆ ಅನುಭವಿಸಿದೆ.

 

 

ಅಚ್ಚುಕಟ್ಟು ಬೌಲಿಂಗ್ ಪ್ರದರ್ಶಿಸಿದ ಭಾರತದ ಬೌಲರ್ ಗಳು ನ್ಯೂಜಿಲೆಂಡ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಭಾರತದ ವೇಗಿ ಮೊಹಮ್ಮದ್ ಸಿರಾಜ್ ಮೂರು ವಿಕೆಟ್ ಕಬಳಿಸಿದರೇ, ಸ್ಪಿನ್ನರ್ ಗಳಾದ ರವಿಚಂದ್ರನ್ ಅಶ್ವಿನ್ 4, ಮತ್ತು ಅಕ್ಷರ್ ಪಟೇಲ್ ಎರಡು ವಿಕೆಟ್ ಪಡೆದು ಕಿವೀಸ್ ತಂಡವನ್ನು ಧೂಳಿಪಟ ಮಾಡಿದರು..

ಈ ಮಧ್ಯೆ ಅಕ್ಷರ ಪಟೇಲ್ ಬೌಲಿಂಗ್ನಲ್ಲಿ ಭಾರತದ ಶ್ರೇಯಸ್ ಅಯ್ಯರ್ ಹಿಡಿದ ಕ್ಯಾಚ್ ಒಂದು ನೋಡುಗಳ ಮನಸ್ಸು ಗೆದ್ದಿದೆ. ಹೌದು, ಅಕ್ಷರ್ ಪಟೇಲ್ ಎಸೆತದಲ್ಲಿ ಕೈಲ್ ಜೇಮಿಸನ್ ಭರ್ಜರಿ ಹೊಡೆತಕ್ಕೆ ಮುಂದಾದರು. ಆದರೆ ಬ್ಯಾಟ್​ ಬದಿಗೆ ತಗುಲಿದ ಚೆಂಡು ವಿಕೆಟ್ ಕೀಪರ್​ನತ್ತ ಮುನ್ನುಗ್ಗಿತು. ಆದರೆ ವಿಕೆಟ್ ಕೀಪರ್ ಸಾಹ ಚೆಂಡನ್ನು ಗುರುತಿಸುವಲ್ಲಿ ಎಡವಿದರು. ಚೆಂಡು ಕೀಪರ್ ಕಾಲಿಗೆ ತಗುಲಿ ಚಿಮ್ಮಿತು. ಅತ್ತ ಸಿಲ್ಲಿ ಪಾಯಿಂಟ್​ನಲ್ಲಿ ಫೀಲ್ಡಿಂಗ್​ನಲ್ಲಿದ್ದ ಶ್ರೇಯಸ್ ಅಯ್ಯರ್ ಕ್ಷಣಾರ್ಧದಲ್ಲೇ ಚೆಂಡನ್ನು ಗುರುತಿಸಿ ಅದ್ಭುತವಾಗಿ ಡೈವ್ ಹೊಡೆದರು.

ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿಯುವ ಮೂಲಕ ಜೇಮಿಸನ್ ಔಟ್ ಆಗಲು ಪ್ರಮುಖ ಕಾರಣರಾದರು. ಶ್ರೇಯಸ್ ಅಯ್ಯರ್ ಅವರ ಫೆಂಟಾಸ್ಟಿಕ್ ಕ್ಯಾಚ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಅದ್ಭುತ ಡೈವಿಂಗ್ ಕ್ಯಾಚ್ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top