fbpx
ಸಮಾಚಾರ

ಕೆಎಲ್ ರಾಹುಲ್ ಅಲ್ಲ,,, “ಈ ಆಟಗಾರನಿಗಾಗಿ ಎಲ್ಲಾ 10 ತಂಡಗಳು ಹಣದ ಹೊಳೆಯನ್ನೇ ಹರಿಸಲಿವೆ” ಲಕ್ಷ್ಮಣ್ ಹೇಳಿದ ಆ ಆಟಗಾರ ಯಾರು ಗೊತ್ತಾ?

15ನೇ ಆವೃತ್ತಿಯ ಐಪಿಎಲ್ ಗೆ ಈಗಾಗಲೇ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ ಇದರ ಮೊದಲ ಹಂತವಾಗಿ ಆಟಗಾರರ ರಿಟನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಆಯಾ ತಂಡಗಳು ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು ಮಿಕ್ಕೆಲ್ಲಾ ಆಟಗಾರರನ್ನು ಮೆಗಾ ಹರಾಜಿಗೆ ಪಾಲ್ಗೊಳ್ಳಲು ಬಿಡುಗಡೆಗೊಳಿಸಿದ್ದಾರೆ.

ಇನ್ನು ಹಲವು ತಂಡಗಳು ತಮ್ಮ ಉಳಿಸಿಕೊಂಡ ಆಟಗಾರರ ಪಟ್ಟಿಯಲ್ಲಿ ಕೆಲ ಸ್ಟಾರ್‌ ಆಟಗಾರರ ಕೈಬಿಟ್ಟು ಅಚ್ಚರಿ ಮೂಡಿಸಿದೆ. ಅದರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 4 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶವಿದ್ದರೂ, 3 ಆಟಗಾರರಿಗೆ ಮಣೆ ಹಾಕಿ ತಂಡದ ಅತ್ಯಂತ ಯಶಸ್ವಿ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ಅವರನ್ನು ಕೈಬಿಟ್ಟ ಶಾಕ್‌ ಕೊಟ್ಟಿದೆ. ವಿರಾಟ್‌ ಕೊಹ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಮೊಹಮ್ಮದ್‌ ಸಿರಾಜ್‌ ಆರ್‌ಸಿಬಿ ಉಳಿಸಿಕೊಂಡ ಆಟಗಾರರು.

ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಲೆಗ್‌ ಸ್ಪಿನ್ನರ್‌ ಲಕ್ಷ್ಮಣ್‌ ಶಿವರಾಮಕೃಷ್ಣನ್‌, ಆರ್‌ಸಿಬಿ ತಾರೆ ಯುಜ್ವೇಂದ್ರ ಚಹಲ್‌ಗೆ ಹರಾಜಿನಲ್ಲಿ ಫ್ರಾಂಚೈಸಿಗಳು ಹಣದ ಹೊಳೆ ಹರಿಸಲಿವೆ ಎಂದು ಭವಿಷ್ಯ ನುಡಿದಿದ್ದಾರೆ. ಐಪಿಎಲ್‌ 2021 ಟೂರ್ನಿಯ ಮೊದಲ ಚರಣದಲ್ಲಿ ನೀಡಿದ್ದ ಕಳಪೆ ಪ್ರದರ್ಶನ ಕಾರಣ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಚಹಲ್‌, 2ನೇ ಚರಣದಲ್ಲಿ ಭರ್ಜರಿ ಕಮ್‌ಬ್ಯಾಕ್‌ ಮಾಡಿ 8 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಕಿತ್ತು ಮಿಂಚಿದ್ದರು.

ಇನ್ನು ಪಂಚ ತಂಡದ ನಾಯಕನಾಗಿದ್ದ ಕೆಎಲ್ ರಾಹುಲ್ ಅವರನ್ನು ತಂಡವು ಕೈಬಿಟ್ಟಿದ್ದು ಅವರಿಗೆ ಐಪಿಎಲ್ ಮೆಗಾ ಆಕ್ಷನ್ ನಲ್ಲಿ ದುಬಾರಿ ಮತ್ತು ಸಿಗುವುದು ಎಂದು ಹೇಳಲಾಗುತ್ತಿದೆ ಆದರೆ ಅವರ ಪ್ರಕಾರ ರಾಹುಲ್ ಅವರಿಗಿಂತಲೂ ಚಹಲ್ ಅವರು ಹೆಚ್ಚಿನ ಮೊತ್ತಕ್ಕೆ ಅಧಿಕಾರಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ

ಒಟ್ಟಿನಲ್ಲಿ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ಹೇಳಿದಂತೆ ಹಲವರು ರಾಹುಲ್ ಅವರಿಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿದೆ ಎಂಬುದನ್ನು ಕಾದು ನೋಡಬೇಕಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top