fbpx
ಸಮಾಚಾರ

ಪಬ್​ನಲ್ಲಿ ಬಿಯರ್​ ಬಾಟಲ್​ನಿಂದ ಹಲ್ಲೆಗೊಳಗಾದ ಕಿರಿಕ್​ ಕೀರ್ತಿ ಪರಿಸ್ಥಿತಿ ಈಗ ಹೇಗಿದೆ?

ತಡರಾತ್ರಿ ಪಬ್​ನಲ್ಲಿ ಪೋಟೋ ವಿಚಾರಕ್ಕೆ ಕಿರಿಕ್​ ನಡೆದು, ಬಿಯರ್​ ಬಾಟಲ್ ನಿಂದ ಬಿಗ್ ಬಾಸ್ ಸ್ಪರ್ಧಿ ಕಿರಿಕ್​ ಕೀರ್ತಿ ಮೇಲೆ ಹಲ್ಲೆ ಮಾಡಲಾಗಿದೆ. ಬೆಂಗಳೂರಿನ ಸದಾಶಿವನಗರದ ಪಬ್‌ವೊಂದರಲ್ಲಿ ಮಾರಾಮಾರಿ ನಡೆದಿದೆ. ಸ್ನೇಹಿತರ ಜತೆ ರಾತ್ರಿ ಪಬ್‌ಗೆ ತೆರಳಿದ್ದ ಕಿರಿಕ್​ ಕೀರ್ತಿ ಮೇಲೆ ಹಲ್ಲೆ ಮಾಡಲಾಗಿದೆ. ಕಿರಿಕ್ ಕೀರ್ತಿ ಹಾಗೂ ಆಪ್ತರು ಕೂತಿದ್ದ ಪಕ್ಕದ ಟೆಬಲ್‌ನಲ್ಲಿಯೇ ವ್ಯಕ್ತಿಯೊಬ್ಬ ಕೂತಿದ್ದ. ಆತ ಕಿರಿಕ್ ಕೀರ್ತಿಗೆ ಗೊತ್ತಿಲ್ಲದಂತೆ ಫೋಟೊ ಕ್ಲಿಕ್ಕಿಸಿದ್ದ.ಫೋಟೋ ಕ್ಲಿಕ್ಕಿಸಿದ್ದನ್ನು ಕೀರ್ತಿ ಪ್ರಶ್ನೆ ಮಾಡಿದರು. ಫೋಟೋ ತೆಗೆದ ವ್ಯಕ್ತಿಗೆ ಬಾಯಿಗೆ ಬಂದಂತೆ ಬೈಯ್ದಿದ್ದೂ ಅಲ್ಲದೇ ಮೊಬೈಲ್​ ಕಸಿದುಕೊಳ್ಳಲು ಮುಂದಾದರು.

ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭ ಆಗಿದೆ. ಕಿರಿಕ್ ಕೀರ್ತಿ ಬೈದಿದ್ದಕ್ಕೆ ಕೋಪಗೊಂಡ ವ್ಯಕ್ತಿ ಪಕ್ಕದಲ್ಲೇ ಇದ್ದ ಬಿಯರ್ ಬಾಟಲ್ ತೆಗದು ಕಿರಿಕ್ ಕೀರ್ತಿ ತಲೆಗೆ ಬಾರಿಸಿದ್ದಾನೆ. ಹಲ್ಲೆಯಿಂದ ಗಾಯಗೊಂಡ ಕಿರಿಕ್​ ಕೀರ್ತಿ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬಳಿಕ ಸದಾಶಿವನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೂ ಹಲ್ಲೆ ನಡೆಸಿದ ವ್ಯಕ್ತಿಗಾಗಿ ಹುಡುಕುತ್ತಿದ್ದಾರೆ. ಪಬ್​ನ ಸಿಸಿಟಿವಿ ಕೂಡ ಪರಿಶೀಲನೆ ನಡೆಸುತ್ತಿದ್ದಾರೆ.

ಗಲಾಟೆಯಿಂದ ಕಿರಿಕ್ ಕೀರ್ತಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸದ್ಯ ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕನ್ನಡ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top