fbpx
ಸಮಾಚಾರ

ದೇಶ ತೊರೆಯುತ್ತಿದ್ದ ನಟಿ ಜಾಕ್ವೆಲಿನ್​​ಗೆ ತಡೆ: ಏರ್​​ಪೋರ್ಟ್​​ನಲ್ಲೇ ವಶಕ್ಕೆ ಪಡೆದ ಅಧಿಕಾರಿಗಳು

ರಾಜಕಾರಣಿಯ ಸಂಬಂಧಿ ಎಂದು ನೂರಾರು ಜನರಗೆ ಕೋಟ್ಯಂತರ ರೂಪಾಯಿ ವಂಚನೆ ಆರೋಪದಡಿ ಜೈಲು ಸೇರಿದ ಬೆಂಗಳೂರು ಮೂಲದ ವಂಚಕ ಸುಕೇಶ್‌ ಚಂದ್ರಶೇಖರ್‌ ಕೇಸ್​​ನಲ್ಲಿ ಬಾಲಿವುಡ್​ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮುಂಬೈ ಏರ್​​ಪೋರ್ಟ್​ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಲ್‌ಒಸಿ ಹಿನ್ನೆಲೆಯಲ್ಲಿ ಬಾಲಿವುಡ್​ ನಟಿಯನ್ನು ವಶಕ್ಕೆ ಪಡೆಯಲಾಗಿದೆ. ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ನಟಿಯ ವಿರುದ್ಧ ಜಾರಿ ನಿರ್ದೇಶನಾಲಯ ಲುಕ್​​ ಔಟ್​ ನೋಟಿಸ್​ ಹೊರಡಿಸಿತ್ತು. ಇಂದು ಜಾಕ್ವೆಲಿನ್ ​​ ಕಾರ್ಯಕ್ರಮವೊಂದಕ್ಕಾಗಿ ದುಬೈಗೆ ಹೋಗಲು ಮುಂದಾದಾಗ ಏರ್​ಪೋರ್ಟ್​ನಲ್ಲೇ ತಡೆಯಲಾಗಿದೆ. ಇದೀಗ ನಟಿಯನ್ನು ವಿಚಾರಣೆಗಾಗಿ ದೆಹಲಿಗೆ ಕರೆತರಲಾಗುವುದು ಎಂದು ಇಡಿ ಮೂಲಗಳು ತಿಳಿಸಿವೆ.

ಅಕ್ಟೋಬರ್ ಕೊನೆಯ ವಾರದಲ್ಲಿ ಜಾಕ್ವೆಲಿನ್ ವಿರುದ್ಧ ಇಡಿ LOC (Look Out Circular) ಹೊರಡಿಸಿತ್ತು ಎಂಬುದು ಇಲ್ಲಿ ಗಮನಾರ್ಹ. 200 ಕೋಟಿ ಸುಲಿಗೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಅವರನ್ನು ಎರಡು ಬಾರಿ ವಿಚಾರಣೆ ನಡೆಸಲಾಗಿದೆ. ಸುಕೇಶ್ ಜಾಕ್ವೆಲಿನ್ ಗೆ ಕೋಟಿಗಟ್ಟಲೆ ಗಿಫ್ಟ್ ಕೊಟ್ಟಿದ್ದಾರೆ. ಇದರಲ್ಲಿ BMW ಕಾರು, ಅರೇಬಿಯನ್ ಕುದುರೆ, 4 ಬೆಕ್ಕುಗಳು, ಫೋನ್, ಆಭರಣ ಸೇರಿದಂತೆ ಸಾಕಷ್ಟು ಹಣ ಜಾಕ್ವೆಲಿನ್ ಖಾತೆಗೆ ವರ್ಗಾವಣೆಯಾಗಿದೆ.

200 ಕೋಟಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರು ತಳುಕು ಹಾಕಿಕೊಂಡಿರುವುದರಿಂದ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಅಕ್ಟೋಬರ್ ಕೊನೆಯ ವಾರ ಜಾಕ್ವೆಲಿನ್‌ಗೆ ಲುಕ್ ಔಟ್ ಸರ್ಕೂಲರ್ ಅನ್ನು ನೀಡಲಾಗಿತ್ತು. ಈ ಕಾರಣಕ್ಕಾಗಿ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top