fbpx
ಸಮಾಚಾರ

ಪತಿ ರಾಮು ನಿರ್ಮಿಸಿದ್ದ ಕೊನೆಯ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಮಾಲಾಶ್ರೀ

ನಟಿ ಮಾಲಾಶ್ರೀಯವರ ಪತಿ, ಕೋಟಿ ನಿರ್ಮಾಪಕ ಎಂದೇ ಖ್ಯಾತಿಯಾಗಿದ್ದ ನಿರ್ಮಾಪಕ ರಾಮು ಈ ವರ್ಷ ಕೊರೋನಾಗೀಡಾಗಿ ಸಾವನ್ನಪ್ಪಿದ್ದರು. ಇವರು ಬದುಕಿದ್ದಾಗ ನಿರ್ಮಾಣ ಮಾಡಿದ್ದ ಅವರ ಕೊನೆಯ ಸಿನಿಮಾವನ್ನು ನಟಿ ಮಾಲಾಶ್ರೀ ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ಪತಿಯ ಕನಸುಗಳಲ್ಲಿ ಒಂದನ್ನು ಪೂರೈಸುತ್ತಿದ್ದಾರೆ.

 

 

ಪ್ರಜ್ವಲ್​ ದೇವರಾಜ್​ ನಟನೆಯ ‘ಅರ್ಜನ್​ ಗೌಡ’ ರಾಮು ಅವರು ನಿರ್ಮಿಸಿದ ಕೊನೆಯ ಸಿನಿಮಾ. ಈಗ ಅರ್ಜುನ್ ಗೌಡ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ. ಡಿ.31ರಂದು ‘ಅರ್ಜುನ್​ ಗೌಡ’ ಸಿನಿಮಾವನ್ನು ತೆರೆಕಾಣಿಸಲು ಮಾಲಾಶ್ರೀ ನಿರ್ಧರಿಸಿದ್ದಾರೆ. ಒಂದು ಆ್ಯಕ್ಷನ್​ ಪ್ರಧಾನ ಸಿನಿಮಾವಾಗಿದ್ದು ಅದರ ಬಗ್ಗೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ.

ಈಗಾಗಲೇ ಟ್ರೇಲರ್​ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಈ ಚಿತ್ರಕ್ಕೆ ಈಗ ರಿಲೀಸ್​ ದಿನಾಂಕ ನಿಗದಿ ಆಗಿದೆ. ಲಕ್ಕಿ ಶಂಕರ್​ ನಿರ್ದೇಶನ ಮಾಡಿದ್ದಾರೆ. ಧರ್ಮ ವಿಶ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಅರ್ಜುನ್​ ಕಿಟ್ಟು ಸಂಕಲನ, ಜೈ ಆನಂದ್​ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಮಾಸ್​ ಮಾದ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಪ್ರಜ್ವಲ್​ ದೇವರಾಜ್​ ಅವರಿಗೆ ಜೋಡಿಯಾಗಿ ಪ್ರಿಯಾಂಕಾ ತಿಮ್ಮೇಶ್​ ಅಭಿನಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top