fbpx
ಸಮಾಚಾರ

“ಪ್ಲೀಸ್ ಅಪ್ಪುನಾ ದೂರ ತಳ್ಳಬೇಡಿ” ತಮ್ಮನನ್ನು ನೆನೆದು ಕಣ್ಣೀರು ಹಾಕಿದ ಶಿವಣ್ಣ

ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದೈಹಿಕವಾಗಿ ನಮ್ಮಿಂದ ದೂರವಾಗಿ ಬರೋಬ್ಬರಿ ಒಂದು ತಿಂಗಳು ಕಳೆದುಹೋಗಿದೆ. ಗಟ್ಟಿಮುಟ್ಟಾಗಿದ್ದ ಆರೋಗ್ಯವಂತ ಅಪ್ಪು ಇದ್ದಕ್ಕಿಂತ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಇಡೀ ಕರ್ನಾಟಕಕ್ಕೆ ಸಿಡಿಲು ಬಡಿದಂತೆ ಬಡಿದಿತ್ತು. ಅಪ್ಪು ಆಗಲಿ ಒಂದು ತಿಂಗಳೇ ಕಳೆದಿದ್ದರೂ ಅದರಿಂದ ಕನ್ನಡಿಗರ ಮನಸ್ಸಿಗೆ ಆಗಿರುವ ನೋವಿನ ಪ್ರಮಾಣ ಕಡಿಮೆಯಾಗಿಲ್ಲ.

ಇನ್ನು ಅವರ ಕುಟುಂಬದವರಿಗಂತೂ ಅಪ್ಪು ಅಗಲಿಕೆಯ ನೋವನ್ನು ಅರಗಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಈಗಲೂ ಕಾರ್ಯಕ್ರಮಗಳ ವೇದಿಕೆ ಮೇಲೆ ಅಪ್ಪು ನೆನೆದು ಕಣ್ಣೀರು ಹಾಕುತ್ತಲೇ ಇದ್ದಾರೆ. ಈಗ ಮತ್ತೊಮ್ಮೆ ಶಿವಣ್ಣ ಅವರು ಅಪ್ಪು ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ‘ಅಪ್ಪುನ ದೂರ ತಳ್ಳಬೇಡಿ ನಿಮ್ಮ ಮನಸ್ಸಿನಲ್ಲೇ ಇಟ್ಕೊಳ್ಳಿ” ಎಂದು ಭಾವುಕವಾಗಿ ಶಿವಣ್ಣ ಹೇಳಿದ್ದಾರೆ.

ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಆವರಣದಲ್ಲಿ ಕಾರ್ಯಕ್ರಮ ಆರಂಭ ಆಗಿತ್ತು. ಈ ಸಮಾರಂಭದಲ್ಲಿ ತಮ್ಮ ಪುನೀತ್ ನೆನೆದು ಶಿವಣ್ಣ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ರು. ಇದೇ ವೇಳೆ ವೇದಿಕೆ ಮೇಲೆ ಮಾತಾಡುತ್ತಾ, ಅಪ್ಪುನಾ ದೂರ ತಳ್ಳಬೇಡಿ ಅಂತ ನಿಮ್ಮ ಮನಸ್ಸಿನಲ್ಲೇ ಇಟ್ಟುಕೊಳ್ಳಿ ಅಂತ ಭಾವುಕರಾಗಿದ್ದಾರೆ.

ಅಳಬಾರದು ಅನ್ಕೋತ್ತಿನಿ ಆದರೆ ಆಗುತ್ತಿಲ್ಲ, ಪುನೀತ್ ಮುಖ ನೋಡಿದಾಗಲೆಲ್ಲ ಕಣ್ಣೀರು ಬರುತ್ತೆ, ಅಪ್ಪು ಬಗ್ಗೆ ಯಾವಾಗಲೂ ಮಾತಾಡುತ್ತೇನೆ, ಎಲ್ಲಾರೂ ನಿಮ್ಮ ತಮ್ಮ ನಿಮ್ಮ ತರಾನೇ ಇದ್ದಾರೆ ಅಂತಿದ್ರು, ಆದ್ರೆ ನಾನು ನನ್ನ ತಮ್ಮನಂತೆ ಇದೀನಿ. ನಾನು ನನ್ನ ತಮ್ಮನೊಂದಿಗೆ ಜಗಳನೇ ಆಡಿಲ್ಲ, ವಾಚ್ ಮ್ಯಾನ್ ನನ್ನೂ ಸಹ ತನ್ನ ಸರಿಸಮಾನಾಗಿ ನೋಡುತ್ತಿದ್ದ ಅಪ್ಪು. ಯಾವತ್ತೂ ಅಪ್ಪು ನನ್ನ ಅಣ್ಣ ಅಂತಾ ಕರೆದಿಲ್ಲ , ಶಿವಣ್ಣ ಅಂತಾನೇ ಕರಿತಿದ್ದ. ತಂಗಿಯರ ಜೊತೆ ಜಗಳ ವಾಡಿದ್ದು ಬಿಟ್ಟರೆ ತಮ್ಮಂದಿರೊಂದಿಗೆ ಯಾವತ್ತೂ ಜಗಳವಾಡಿಲ್ಲ ಎಂದು ಶಿವರಾಜ್ ಕುಮಾರ್ ತಿಳಿಸಿದ್ಧಾರೆ.

“ಅಪ್ಪುನಾ ದೂರ ತಳ್ಭೇಡಿ, ಅದಷ್ಟು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಿ. ಅವನು ಎಲ್ಲೋ ಹೋಗಿದ್ದಾನೆ ಮತ್ತೆ ಬರ್ತಾನೆ ಅವನು ಅಂದುಕೊಳ್ಳಿ. ಆ ಬರ್ತಾನೆ ಅನ್ನೋ ನಂಬಿಕೆಯಲ್ಲೇ ಕಾಯೋಣ. ಅದರಲ್ಲೇ ಜೀವನ ನಡೆಯುತ್ತೆ.. ಅಪ್ಪು ನೆನಪು ಇಟ್ಕೊಂಡು ನಾವು ಬದುಕಬೇಕು.” ಎಂದು ವೇದಿಕೆ ಮೇಲೆ ಭಾವುಕರಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top