fbpx
ಸಮಾಚಾರ

ಹೆಣ್ಣು ಹುಟ್ಟಿದೆ ತಪ್ಪಾ! ಪೊಲೀಸ್ ಠಾಣೆ ಮೆಟ್ಟಿಲು ಏರಿದ ವಿದ್ಯಾವಂತ ದಂಪತಿ.

ಕರಿಷ್ಮಾ ಮತ್ತು ಕಲಂದರ್ ಖಾನ್ ಇವರಿಬ್ಬರ ಮದುವೆ ಅದ್ದೂರಿಯಾಗಿ ನೆಡಯಿತು. ಕೈತುಂಬ ವರದಕ್ಷಣೆ ಕೂಡ ಕೊಡಲಾಗಿತ್ತು. ಆದ್ರೆ ಕೈ ಹಿಡಿದ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆದ್ರೆ ಮದುವೆಯಾ ಒಂದು ವರ್ಷ ತುಂಬಿತ್ತು . ಆಗಲೇ ಜೋಡಿಯ ಮಧ್ಯೆ ಜಗಳ, ವಾದ ವಿವಾದ ಮತ್ತು ಬಿರುಕು ಆಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದರು .

ಆದರೆ ಇದ್ದಕೆ ಕಾರಣವೆ ಆ ಮಗು ಏಕೆಂದರೆ ಅವಧಿಗೆ ಮುನ್ನ ಮಗು ಜನಿಸಿದ ಕಾರಣ ತೂಕದಲ್ಲಿ ಹಾಗೂ ಆರೋಗ್ಯದಲ್ಲಿ ಮಗುವಿಗೆ ಏರು ಪೇರಾಗಿತ್ತು. ಇದ್ರಿಂದ ಕೋಪಒಳಗಾದ ಕಲಂದರ್ ಹಾಗು ಆತನ ತಾಯಿ ಹೆಣ್ಣು ಮಗು ಜನಿಸಿದ್ದಕ್ಕೆ 10 ಲಕ್ಷ ರೂಪಾಯಿ ವರದಕ್ಷಣೆ ತರಲೆ ಬೇಕು ಎಂದು ಕಿರುಕುಳ ನೀಡುತ್ತಿದ್ದಾರಂತೆ. ಇದ್ರಿಂದ ಮನಸು ನೊಂದ ಕರಿಷ್ಮಾ ಗಂಡನ ಮನೆಗೆ ಹೋಗದೆ ತವರು ಮನೆಯಲ್ಲಿ ಇದ್ದಾಳೆ.

ಮಾತುಕತೆಗೆ ಬಂದ ಅಳಿಮಯ್ಯ ಹಾಗೂ ಆತನ ಸಂಬಂಧಿಗಳು, ಕರಿಷ್ಮಾ ಹಾಗೂ ಆಕೆಯ ತಂದೆ ತಾಯಿಯ ಮೇಲೆ ಹಲ್ಲೆ ಮಾಡಿದ್ದಾರೆ. ಇದ್ರಿಂದ ಕರಿಷ್ಮಾ ಮಂಚೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಸಂಪ್ರದಾಯದಂತೆ ಬುರ್ಕಾ ಹಾಕಿಕೊಳ್ಳಿ ಅಂತ ಬುದ್ಧಿವಾದ ಹೇಳಿದ್ದಕ್ಕೆ ಇಷ್ಟೆಲ್ಲಾ ರಂಪಾಟ ಮಾಡ್ತಿದ್ದಾರೆ ಎಂದು ಹೇಳಿದ. ಆದರೆ ಮಾತುಕತೆಗೆ ಹೋದಾಗ ಪರಸ್ಪರ ತಳ್ಳಾಟ ಗಲಾಟೆ ಆಯ್ತು ಆದ್ರೂ ಸಹೀತ ತನಗೆ ತನ್ನ ಪತ್ನಿ ಬೇಕು ಎಂದು ಹೇಳಿದ್ದಾನೆ. ಕೊನೆಗೆ ಮಂಚೇನಹಳ್ಳಿ ಪೊಲೀಸರು ಇಬ್ಬರಿಗೂ ಬುದ್ಧಿವಾದ ಹೇಳಿ ಸುಖವಾಗಿ ಸಂತೋಷವಾಗಿ ಸಂಸಾರ ನಡೆಸಿ ಅಂತ ಬುದ್ಧಿ ಹೇಳಿ ಪಂಚಾಯತಿ ಮಾಡಿ ಮನೆಗೆ ಕಳುಹಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top