ಬಹುಭಾಷಾ ನಟಿ ಸಮಂತಾ ಇತ್ತೀಚಿನ ದಿನಗಳಲ್ಲಿ ಸಿನಿಮಾ ಕುರಿತ ವಿಚಾರಗಳಿಗಿಂತ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಸುದ್ದಿಯಾಗಿದೆ ಹೆಚ್ಚು. ಮಾಜಿ ಪತಿ ನಾಗಚೈತನ್ಯ ಜೊತೆಗಿನ ದಾಂಪತ್ಯ ಜೀವನವನ್ನು ವಿಚ್ಛೇದನ ಪಡೆದುಕೊಳ್ಳುವ ಮೂಲಕ ಮುರಿದುಕೊಂಡಿದ ಸಮಂತ ಆನಂತರ ಅನೇಕ ಗಾಸಿಪ್, ಗಾಳಿಸುದ್ದಿಗಳಿಗೆ ಗುರುಗಳಿಗೆ ತುತ್ತಾಗಿದ್ದರು. ಆದರೆ ಈ ಯಾವ ವಿಚಾರಗಳ ಬಗ್ಗೆಯೂ ಸಮಂತಾ ಮೌನ ಮುರಿದಿರಲಿಲ್ಲ. ಇದೀಗ ಸಮಂತಾ ವಿಚ್ಛೇದನದ ಬಳಿಕ ಇದೆ ಮೊದಲ ಬಗ್ಗೆ ತಮ್ಮ ಖಾಸಗಿ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಫಿಲ್ಮ್ ಫೇರ್ ಸಂದರ್ಶನವೊಂದರಲ್ಲಿ ಸಮಂತಾ ನಾಗಚೈತನ್ಯರೊಂದಿಗೆ ಬೇರೆಯಾಗಿದ್ದರ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಜೀವನದಲ್ಲಿ ಕಷ್ಟದ ದಿನಗಳು ಬರುವುದು ಸಾಮಾನ್ಯ. ಅದನ್ನು ನಾವು ಧೈರ್ಯದಿಂದ ಎದುರಿಸಬೇಕು. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ನಮಗೆ ಇರಬೇಕಾಗುತ್ತೆ.
ನಾನು ನನ್ನನ್ನು ತುಂಬಾ ದುರ್ಬಲ ವ್ಯಕ್ತಿ ಎಂದು ಭಾವಿಸಿದ್ದೆ, ವಿಚ್ಛೇದನದ ಬಳಿಕ ಕುಗ್ಗಿಹೋಗಿ, ಸಾಯುವ ಹಂತ ತಲುಪುತ್ತೇನೆ ಎಂದುಕೊಂಡಿದ್ದೆ. ಆದರೆ ನನ್ನನ್ನು ನಾನು ಸಮರ್ಥವಾಗಿ ನಿಭಾಯಿಸಿಕೊಂಡಿದ್ದೇನೆ. ನನ್ನ ಮನಸ್ಥಿತಿ ಇಷ್ಟು ಬಲವಾಗಿದೆ ಎಂದು ಭಾವಿಸಿರಲಿಲ್ಲ. ನನ್ನ ಬಗ್ಗೆ ನನಗೆ ಹೆಮ್ಮೆ ಇದೆ. ಇನ್ನು ಜೀವನದಲ್ಲಿ ಬಹಳ ಮುಂದೆ ಸಾಗಬೇಕಿದೆ ಎಂದು ತಮ್ಮ ಮನದ ಮಾತನ್ನು ಹೇಳಿಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
