fbpx
ಸಮಾಚಾರ

ಕೆಜಿಎಫ್​ ಚಾಪ್ಟರ್ 2 ಡಬ್ಬಿಂಗ್​ ಮುಗಿಸಿದ ಸಂಜಯ್​ ದತ್​

ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಸಿನಿಮಾ ಕೆಜಿಎಫ್ ಚಾಪ್ಟರ್-2.. ಈ ಚಿತ್ರದ ಬಗೆಗಿನ ನಿರೀಕ್ಷೆಗಳು ದಿನಗಳೆದಂತೆ ಹೆಚ್ಚಾಗುತ್ತಲೇ ಇದೆ. ಕೆಜಿಎಫ್ ಚಾಪ್ಟರ್-1 ಕಾರಣಕ್ಕೂ ಹಾಗೂ ಬಹುತಾರಾಗಣದ ಕಾರಣಕ್ಕೂ ಚಿತ್ರದ ಮೇಲೆ ಕುತೂಹಲ ಮಾಡಿಕೊಳ್ಳುತ್ತಲೇ ಇದೆ.

2018ರಲ್ಲಿ ಬಂದಿದ್ದ ಕೆಜಿಎಫ್ ಚಾಪ್ಟರ್-1 ಎಲ್ಲೆಲ್ದೆ ಉತ್ತಮ ಪ್ರತಿಕ್ರಿಯೆ ಪಡೆದು ದೊಡ್ಡ ಯಶಸ್ಸು ಸಾಧಿಸಿತ್ತು. ಅಲ್ಲಿ ಕತೆಯನ್ನು ಅರ್ಧಕ್ಕೆ ನಿಲ್ಲಿಸಿದ್ದ ನಿರ್ದೇಶಕರು ಎರಡನೇ ಭಾಗಕ್ಕೆ ಕುತೂಹಲವನ್ನು ಹಿಡಿದಿಟ್ಟುಕೊಂಡಿದ್ದಾರೆ. ಕೆಜಿಎಫ್ ಚಾಪ್ಟರ್-1 ಮುಂದುವರೆದ ಭಾಗವಾಗಿರುವ ಈ ಚಿತ್ರ ಜಗತ್ತಿನ ಅತ್ಯಂತ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಲ್ಲಿ ತಲ್ಲೀನವಾಗಿದೆ,. ಈ ಮಧ್ಯೆ ಚಿತ್ರದಲ್ಲಿ ಬಹುಮುಖ್ಯ ಪಾತ್ರ ಮಾಡಿರುವ ಸಂಜಯ್ ದತ್ ಅವರು ಡಬ್ಬಿಂಗ್ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ

ಸಂಜಯ್ ದತ್ ಅವರು ಡಬ್ಬಿಂಗ್ ನಲ್ಲಿ ಪಾಲ್ಗೊಂಡಿರುವ ವಿಚಾರವನ್ನು ನಿರ್ದೇಶಕ ಪ್ರಶಾಂತ್ ನೀಲ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿತ್ತು ಸಂಜಯ್ ದತ್ ಜೊತೆಗಿನ ಹಂಚಿಕೊಂಡಿದ್ದಾರೆ. “ಅಧೀರ ಮತ್ತೆ ಬಂದಿದ್ದಾರೆ, ಧನ್ಯವಾದಗಳು ಸಂಜಯ್ ದತ್ ಸರ್.. ನಿಮ್ಮೆಲ್ಲರಿಗೂ ಏಪ್ರಿಲ್ 14ರಂದು ತೆರೆ ಮೇಲೆ ಸಿಗಲಿದ್ದೇವೆ” ಎಂದು ಪ್ರಶಾಂತ್ ನೀಲ್ ಬರೆದುಕೊಂಡಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top