fbpx
ಕ್ರಿಕೆಟ್

ಕೊನೆಗೂ ನಿವೃತ್ತಿ ನಿರ್ಧಾರಕ್ಕೆ ಬಂದ ಹರ್ಭಜನ್ ಸಿಂಗ್: ಐಪಿಎಲ್​ನಲ್ಲಿ ಹೊಸ ಹುದ್ದೆ?

ಭಜ್ಜಿ ಭಾರತದ ಪರ 103 ಟೆಸ್ಟ್, 236 ODI ಮತ್ತು 28 T20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 417 ಟೆಸ್ಟ್ ವಿಕೆಟ್‌, 269 ಏಕದಿನ ವಿಕೆಟ್‌ಗಳನ್ನು ಪಡೆದಿದ್ದಾರೆ. ಟೀಮ್ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೊನೆಗೂ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ವರದಿಯಾಗಿದೆ. 2016 ರಲ್ಲಿ ಭಜ್ಜಿ ಕೊನೆಯ ಬಾರಿ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರಲಿಲ್ಲ.

ಈ ಹಿಂದೆ ಹರ್ಭಜನ್ ಸಿಂಗ್ ಐಪಿಎಲ್​ನಲ್ಲಿ ಯುವ ಆಟಗಾರರಿಗೆ ಮಾರ್ಗದರ್ಶಕರಾಗಿದ್ದರು ಎಂಬುದು ವಿಶೇಷ. ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾಗ ರಾಹುಲ್ ಚಹರ್ ಅವರಿಗೆ ಬೌಲಿಂಗ್ ಕಲೆಯನ್ನು ಹೇಳಿಕೊಟ್ಟಿದ್ದರು. ಆದರೆ ಇದೀಗ ಕ್ರಿಕೆಟ್​ಗೆ ವಿದಾಯ ಹೇಳಿ ಹರ್ಭಜನ್ ಸಿಂಗ್ ಹೊಸ ಜವಾಬ್ದಾರಿವಹಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕಳೆದ ಸೀಸನ್​ ಐಪಿಎಲ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದ ಹರ್ಭಜನ್ ಸಿಂಗ್ ಮುಂದಿನ ಸೀಸನ್​ನಲ್ಲಿ ಯಾವ ತಂಡದ ಮಾರ್ಗದರ್ಶಕರಾಗಲಿದ್ದಾರೆ ಎಂಬುದೇ ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ಕೋಚ್ ಎಂದರೆ ಹರ್ಭಜನ್ ಸಿಂಗ್ ಮುಖ್ಯ ಕೋಚ್ ಆಗುವುದಿಲ್ಲ. ಅವರು ತಂಡಕ್ಕೆ ಕನ್ಸಲ್ಟೆಂಟ್, ಮೆಂಟರ್ ಆಗಬಹುದು. ಅಥವಾ ಫ್ರಾಂಚೈಸಿಯ ಸಲಹಾ ತಂಡದ ಭಾಗವಾಗಬಹುದು. ಹರ್ಭಜನ್ ಅವರನ್ನ ಸಂಪರ್ಕಿಸುತ್ತಿರುವ ಫ್ರಾಂಚೈಸಿಯು ಆಟಗಾರನ ಅಗಾಧ ಅನುಭವವನ್ನು ಬಳಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಅಷ್ಟೇ ಅಲ್ಲದೆ ಹರ್ಭಜನ್ ಸಿಂಗ್ 2007ರಲ್ಲಿ ಟಿ20 ವಿಶ್ವಕಪ್ ಹಾಗೂ 2011ರಲ್ಲಿ ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ಭಾಗವಾಗಿದ್ದರು. ಈ ಎರಡು ವಿಶ್ವಕಪ್ ಆಡಿದ ಎಲ್ಲಾ ಆಟಗಾರರು ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಹರ್ಭಜನ್ ಸಿಂಗ್ ಅಧಿಕೃತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಅಧಿಕೃತವಾಗಿ ವಿದಾಯ ಹೇಳುವ ಸಾಧ್ಯತೆಯಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top