fbpx
ಸಮಾಚಾರ

ದೀರ್ಘಾವಧಿಯ ಕ್ರಿಕೆಟ್ ಗೆ ಹಾರ್ದಿಕ್ ಪಾಂಡ್ಯ ವಿದಾಯ?

ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಶೀಘ್ರದಲ್ಲೇ ದೀರ್ಘಾವಧಿಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಲಿದ್ದಾರೆ ಎಂದು ವರದಿಯಾಗಿದೆ. ಹಾರ್ದಿಕ್ ಪಾಂಡ್ಯ ಬೆನ್ನುನೋವಿನಿಂದ ಬಳಲುತ್ತಿದ್ದು, ಹೀಗಾಗಿ ಟೆಸ್ಟ್ ಮಾದರಿಯಿಂದ ನಿವೃತ್ತಿಯಾಗುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇನ್‌ಸೈಡ್ ಸ್ಪೋರ್ಟ್‌ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ‘ಹಾರ್ದಿಕ್ ಪಾಂಡ್ಯ ಅವರು ಟೆಸ್ಟ್‌ನಿಂದ ನಿವೃತ್ತಿ ಹೊಂದಲು ಬಯಸಿದ್ದಾರೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಅವರು ಈ ಬಗ್ಗೆ ಇನ್ನೂ ಅಧಿಕೃತವಾಗಿ ಮಂಡಳಿಗೆ ತಿಳಿಸಿಲ್ಲ. ಸದ್ಯ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಪಾಂಡ್ಯ ಕಂಬ್ಯಾಕ್ ಮಾಡುವ ಯೋಜನೆಯಲ್ಲಿದ್ದಾರೆ. ಆದರೆ ಗಾಯದ ಕಾರಣ ಈ ಬಾರಿ ಮುಂಬೈ ಇಂಡಿಯನ್ಸ್ ತಂಡದಿಂದ ಕೂಡ ಹೊರಬಿದ್ದಿದ್ದಾರೆ. ಹೀಗಾಗಿ ಏಕದಿನ ಹಾಗೂ ಟಿ20 ಮಾದರಿ ಕ್ರಿಕೆಟ್​ ಬಗ್ಗೆ ಗಮನಹರಿಸಲು ಪಾಂಡ್ಯ ಚಿಂತಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕಳೆದ ವರ್ಷ ಬೆನ್ನು ನೋವಿನ ಸಮಸ್ಯೆ ಸಲುವಾಗಿ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆ ಪಡೆದಿದ್ದ ಹಾರ್ದಿಕ್‌ ಪಾಂಡ್ಯ ಬಳಿಕ ತಮ್ಮ ಶ್ರೇಷ್ಠ ಲಯ ಕಂಡುಕೊಂಡಿಲ್ಲ. 28 ವರ್ಷದದ ಆಲ್‌ರೌಂಡರ್‌ ಕ್ರಿಕೆಟ್‌ ವೃತ್ತಿಗೆ ಮರಳಿ ಬ್ಯಾಟಿಂಗ್‌ನಲ್ಲಿ ಆಗಾಗ ಗಮನ ಸೆಳೆದರಾದರೂ ಬೌಲಿಂಗ್‌ನಿಂದ ಬಹುಪಾಲು ಹೊರಗುಳಿದಿದ್ದರು. ಆಲ್‌ರೌಂಡರ್‌ ಪಾತ್ರ ನಿಭಾಯಿಸಲು ಬೌಲಿಂಗ್‌ ಮಾಡಲು ಅವರಿಂದ ಸಾಧ್ಯವಾಗದೇ ಇರುವ ಕಾರಣ ಭಾರತ ತಂಡದಿಂದಲೂ ಸ್ಥಾನ ಕಳೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top