fbpx
ಸಮಾಚಾರ

ರಾಜ್ಯ ಸರ್ಕಾರದಿಂದ 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ

ಕೊರೊನಾ ಎನ್ನುತ್ತಲೇ 2022 ವರ್ಷವನ್ನು ಕಳೆದುಬಿಟ್ಟೆವು. ಇನ್ನು ಕೆಲವೇ ದಿನದಲ್ಲಿ 2022 ಅನ್ನು ಸ್ವಾಗತಿಸಲು ಮುಂದಾಗಿದ್ದೇವೆ. ಈಗಾಗಲೇ ಹೊಸ ವರ್ಷವನ್ನು ಹೇಗೆಲ್ಲಾ ಸ್ವಾಗತಿಸಬೇಕು ಎಂದು ಹಲವರು ಪ್ಲ್ಯಾನ್ ಗಳನ್ನು ಕೂಡ ಮಾಡಿಕೊಂಡಿದ್ದಾರೆ. ಹಾಗಾಗಿಯೇ ರಾಜ್ಯ ಸರ್ಕಾರ  2022ನೇ ಸಾಲಿನ ಸಾರ್ವತ್ರಿಕ  ರಜೆ ದಿನಗಳ ಪಟ್ಟಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ನೂತನ ವರ್ಷದಲ್ಲಿ ಎಷ್ಟು ರಜಗಳು ಬರಲಿವೆ ಎಂದು ಹೇಳಲಾಗಿದೆ. 2022ರ ಸಾರ್ವತ್ರಿಕ ರಜೆಗಳ ಬಗ್ಗೆ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮೊಹಮ್ಮದ್ ನಯೀಮ್ ಮೊಮಿನ್ ಅವರು ಆರ್ ಬಿಐ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಅವರಿಗೆ ಪತ್ರದಲ್ಲಿ ತಿಳಿಸಿದ್ದು, ನೆಗೋಷಿಯೆಬಲ್ ಇನ್ ಸ್ಟ್ರುಮೆಂಟ್ ಆಕ್ಟ್ ಅಡಿಯಲ್ಲಿ ರಜೆಗಳನ್ನು ಘೋಷಿಸಲಾಗಿದೆ. ಇಲ್ಲಿದೆ ಅದರ ವಿವರ ಒಟ್ಟು 22 ದಿನಗಳ ರಜೆಯನ್ನು ಘೋಷಿಸಿದೆ.

 

ಜನವರಿ 15, 2022 – ಮಕರ ಸಂಕ್ರಾಂತಿ

ಜನವರಿ 26, 2022- ಗಣರಾಜ್ಯೋತ್ಸವ

ಮಾರ್ಚ್‌ 01, 2022 -ಮಹಾಶಿವರಾತ್ರಿ

ಏಪ್ರಿಲ್‌ 02, 2022 -ಯುಗಾದಿ

ಏಪ್ರಿಲ್‌ 14, 2022 – ಡಾ.ಬಿಆರ್‌ ಅಂಬೇಡ್ಕರ್‌ ಜಯಂತಿ, ಮಹಾವೀರ ಜಯಂತಿ

ಏಪ್ರಿಲ್‌ 15, 2022 – ಗುಡ್‌ ಫ್ರೈಡೆ

 

ಮೇ 01, 2022 – ಕಾರ್ಮಿಕ ದಿನಾಚರಣೆ

ಮೇ 03, 2022 -ಬಸವೇಶ್ವರ ಜಯಂತಿ, ಅಕ್ಷಯ ತೃತೀಯ, ರಂಜಾನ್‌

ಜುಲೈ 10, 2022 – ಬಕ್ರೀದ್‌

ಆಗಸ್ಟ್‌ 09, 2022 -ಮೊಹರಂ ಕಡೇ ದಿನ

ಆಗಸ್ಟ್‌ 15, 2022 – ಸ್ವಾತಂತ್ರ್ಯ ದಿನಾಚರಣೆ

ಆಗಸ್ಟ್‌ 31, 2022 -ವರಸಿದ್ಧಿ ವಿನಾಯಕ ವ್ರತ

ಸೆಪ್ಟೆಂಬರ್‌ 25, 2022 -ಮಹಾಲಯ ಅಮಾವಾಸ್ಯೆ

 

ಅಕ್ಟೋಬರ್‌ 02, 2022 -ಗಾಂಧಿ ಜಯಂತಿ

ಅಕ್ಟೋಬರ್‌ 04, 2022 -ಮಹಾನವಮಿ, ಆಯುಧಪೂಜೆ

ಅಕ್ಟೋಬರ್‌ 05, 2022 -ವಿಜಯದಶಮಿ

ಅಕ್ಟೋಬರ್‌ 09, 2022 -ವಾಲ್ಮೀಕಿ ಜಯಂತಿ/ಈದ್‌ ಮಿಲಾದ್‌

ಅಕ್ಟೋಬರ್‌ 24, 2022 -ನರಕ ಚತುರ್ದಶಿ

ಅಕ್ಟೋಬರ್‌ 26, 2022 -ಬಲಿಪಾಡ್ಯಮಿ, ದೀಪಾವಳಿ

ನವೆಂಬರ್‌ 01, 2022 -ಕನ್ನಡ ರಾಜ್ಯೋತ್ಸವ

ನವೆಂಬರ್‌ 11, 2022 -ಕನಕದಾಸ ಜಯಂತಿ

ಡಿಸೆಂಬರ್‌ 25, 2022 -ಕ್ರಿಸ್‌ಮಸ್‌

 

ಅಲ್ಲದೆ ಮುಸ್ಲಿಂ ಬಾಂಧವರಿಗೆ ಸರ್ಕಾರ ಘೋಷಣೆ ಮಾಡಿರುವ ದಿನ ಸಾರ್ವತ್ರಿಕ ರಜೆ ಬೀಳದೇ ಹೋದರೆ ಆಗಿನ ಸಂಧರ್ಭಕ್ಕೆ ಹೋಲಿಕೆ ಮಾಡಿ ರಜಾ ಬದಲಾವಣೆ ಮಾಡಿ ಹಬ್ಬದಂದು ರಜೆ ಘೋಷಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಶಿಕ್ಷಣ ಇಲಾಖೆಗೆ ಸಂಬಂಧಿಸಿದ ರಜಾದಿನಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಿಸಲಿದ್ದಾರೆ ಎಂದು ಹೇಳಲಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top