fbpx
ಸಮಾಚಾರ

ಸಾವಿಗಾಗಿ ಸಾರ್ಕೋ ಸಂಶೋಧಿಸಿದ ಶ್ರೀಮಂತ ದೇಶ.

ಆತ್ಮಹತ್ಯೆ ಮಹಾಪಾಪ ಎಂಬುದು ನಮಗೆಲ್ಲಾ ಗೊತ್ತೇ ಇದೆ. ಇದು ಗೊತ್ತಿದ್ದರೂ ಆತ್ಮಹತ್ಯೆ ಮಾಡಿಕೊಳ್ಳುವವರಿಗೇನೂ ಕಡಿಮೆ ಇಲ್ಲ. ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಕಾನೂನಿನ ಪ್ರಕಾರ ತಪ್ಪು. ಆದರೆ ಈ ದೇಶದಲ್ಲಿ ಆತ್ಮಹತ್ಯೆಗೆ ಎಲ್ಲಿಯವರೆಗೆ ಪ್ರೋತ್ಸಾಹ ಕೊಡುತ್ತಾರೆಂದರೆ ಅದಕ್ಕಾಗಿ ಅವರು ನೋವೇ ಆಗದಂತೆ ಆತ್ಮಹತ್ಯೆ ಮಾಡಿಕೊಳ್ಳುವ ಯಂತ್ರವನ್ನೂ ಆವಿಷ್ಕರಿಸಿ ಪರಿಚಯಿಸುತ್ತಿದ್ದಾರೆ. ಹಾಗಾದರೆ ಆ ದೇಶ ಯಾವುದು? ಇಲ್ಯಾಕೆ ಈ ಆವಿಷ್ಕಾರ ನಡೀತು? ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ
ಆತ್ಮಹತ್ಯೆ ಮಾಡಿಕೊಳ್ಳುವವರಿಗಿಂತಲೂ ದಯಾಮರಣಕ್ಕೀಡಾಗುವವರಿಗಾಗಿ ಈ ಯಂತ್ರವನ್ನು ತಯಾರಿಸಲಾಗಿದ್ದು ಸ್ವಿಜರ್ಲ್ಯಾಂಡಿನಲ್ಲಿ ಈ ಯಂತ್ರಗಳು ತಯಾರಾಗಿವೆ. ಸಾರ್ಕೋ ಎಂದು ಕರೆಯಲ್ಪಡುವ ಈ ಯಂತ್ರದಲ್ಲಿ ಮಲಗಿಕೊಂಡರೆ ಒಂದು ಸೂಜಿ ಚುಚ್ಚಿದಷ್ಟೂ ನೋವಾಗದಂತೆ ಮರಣ ಸಂಭವಿಸುತ್ತದೆ ಎಂದು ಸಂಶೋಧಕ ತಂಡ ಹೇಳಿದೆ. ಈ ಸಾರ್ಕೋ ಯಂತ್ರಗಳು ೩ಡಿ ಮುದ್ರಿತ ಕ್ಯಾಪ್ಸುಲ್‌ಗಳನ್ನು ಒಳಗೊಂಡಿದೆ. ಆಮ್ಲಜನಕದ ಸವಕಳಿಯಿಂದ ಹೈಪೋಕ್ಸಿಯಾ ಮತ್ತು ಹೈಪೋಕ್ಯಾಪ್ನಿಯಾಧಿಂದ ಇದರಲ್ಲಿ ಸಾವು ಸಂಭವಿಸುತ್ತದೆಯoತೆ.
ಶವ ಪೆಟ್ಟಿಗೆಯನ್ನು ಹೋಲುವ ಸಾರ್ಕೋ ೨೦೨೨ರಿಂದ ಪ್ರಾಣ ತೆಗೆಯುವ ಕೆಲಸ ಶುರುಮಾಡಲಿದ್ದು ಡಾ. ಫಿಲಿಪ್ ನಿಟ್ಟೆ ಎಂಬುವವರು ಇದನ್ನು ಅಭಿವೃದ್ದಿಪಡಿಸಿದ್ದಾರೆ. ಸ್ವಿಜರ್ಲ್ಯಾಂಡಿನಲ್ಲಿ ಈಗಾಗಲೇ ದಯಾಮರಣ ಕಾನೂನುಬದ್ದವಾಗಿದ್ದು ೨೦೨೦ರಲ್ಲಿ ೧೩೦೦ ಜನ ದಯಾಮರಣ ಸ್ವೀಕರಿಸಿದ್ದರಂತೆ.
ಯಂತ್ರ ಶವಪೆಟ್ಟಿಗೆಯ ಮಾದರಿಯಲ್ಲಿದ್ದು ಮರಣ ಹೊಂದಲಿಚ್ಚಿಸುವವರು ಇದರಲ್ಲಿ ಮೊದಲು ಮಲಗಬೇಕು. ನಂತರ ಯಂತ್ರ ಕೇಳುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ಬಳಿಕ ಒಳಗಿರುವ ಬಟನ್ ಅದುಮಿದರೆ ಸಾರಜನಕ ತುಂಬಿ ಆಮ್ಲಜನಕ ಕಡಿಮೆಯಾಗುತ್ತದೆ. ಇದರಿಂದಾಗಿ ಒಂದು ನಿಮಿಷದಲ್ಲಿ ಪ್ರಾಣ ಹೊರಟು ಹೋಗುತ್ತದೆಯಂತೆ.
ಇದನ್ನು ಬಳಸಲು ಯಾರಿಗೂ ಯಾವುದೇ ತೆರನಾದ ಒತ್ತಡಗಳಿಲ್ಲ. ಸ್ವಯಂಪ್ರೇರಣೆಯಿAದ ಯಂತ್ರವನ್ನು ಬಳಸಬಹುದೆಂದು ಫಿಲಿಪ್ ಹೇಳುತ್ತಾರೆ. ಸಂಶೋಧನೆಗಳಿoದ, ಯಂತ್ರಗಳಿoದ ಮಾನವನ ಬದುಕನ್ನು ಸಲೀಸಾಗುವುದು ಗೊತ್ತಿತ್ತು. ಇದೀಗ ಪ್ರಾಣವೂ ಸಲೀಸಾಗಿ ಹೋಗುವಂತೆ ಮಾಡುವ ಈ ಯಂತ್ರ ಬಂದಿದೆ. ಸದ್ಯ ನೆಟ್ಟಿಗರ ಗಮನ ಸೆಳೆದಿರುವ ಈ ಯಂತ್ರದಲ್ಲಿ ಮಲಗುವ ದುರ್ಗತಿ ನಮಗೆ ಬಾರದಿರಲಿ ಅಷ್ಟೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top