fbpx
ಸಮಾಚಾರ

ಗರ್ಭಿಣಿ ಮಹಿಳೆಗೆ ಬಿಹಾರದಲ್ಲಿ ಎಚ್‌ಐವಿ+ ರಕ್ತ ಚುಚ್ಚುಮದ್ದು: ಲ್ಯಾಬ್ ಟೆಕ್ನಿಷಿಯನ್ ವಜಾ

ನಳಂದದ ಬಿಹಾರ ಶರೀಫ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಬಿಹಾರದ ಗರ್ಭಿಣಿ ಮಹಿಳೆಯೊಬ್ಬರಿಗೆ ಎಚ್‌ಐವಿ ಸೋಂಕಿತ ರಕ್ತವನ್ನು ವರ್ಗಾಯಿಸಲಾದ ಘಟನೆ ಬೆಳಕಿಗೆ ಬಂದಿದೆ. ದಾನಿಯಿಂದ ಸೋಂಕಿತ ರಕ್ತವನ್ನು ಸಂಗ್ರಹಿಸಿ ಗರ್ಭಿಣಿ ಮಹಿಳೆಗೆ ನೇರವಾಗಿ ವರ್ಗಾಯಿಸಿದ ಪ್ರಯೋಗಾಲಯದ ತಂತ್ರಜ್ಞನನ್ನು ಸರ್ಕಾರ ವಜಾಗೊಳಿಸಿದೆ. ಸುದ್ದಿ ಹೊರಬಿದ್ದ ನಂತರ, ಜಿಲ್ಲಾ ಸಿವಿಲ್ ಸರ್ಜನ್ ಡಾ. ಸುನೀಲ್ ಕುಮಾರ್ ನಳಂದ ಸದರ್ ಆಸ್ಪತ್ರೆಯ ಉಪ ಅಧೀಕ್ಷಕರ ನೇತೃತ್ವದಲ್ಲಿ ಮೂವರು ವೈದ್ಯರ ಸಮಿತಿಯ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದಾರೆ. ಸ್ಥಳೀಯ ಪತ್ರಿಕೆಯೊಂದರಲ್ಲಿ ವರದಿಯಾದ ನಂತರ ರಕ್ತನಿಧಿಯು ಸೋಂಕಿತ ರಕ್ತವನ್ನು ಸಂಸ್ಕರಿಸಿದೆ ಮತ್ತು ಎಚ್ಚೆತ್ತುಕೊಂಡಿದೆ. ರಕ್ತ ನೀಡಿದ ದಾನಿಗಳನ್ನು ಪತ್ತೆಹಚ್ಚಲಾಗಿದ್ದು ಅವರು ತಮಗೆ ಹೆಚ್‌ಐವಿ ಇರುವ ವಿಚಾರವನ್ನು ಮುಚ್ಚಿಟ್ಟು ರಕ್ತದಾನ ಮಾಡಿರುವುದಾಗಿ ತಿಳಿದುಬಂದಿದೆ.

ಸಿಬ್ಬಂದಿ ಮೇಲ್ವಿಚಾರಕರಿಗೆ ತಿಳಿಸಿರಲಿಲ್ಲ. ಆಸ್ಪತ್ರೆಯ ಸಿಬ್ಬಂದಿ ಡಾ. ಕುಮಾರ್ ಹೇಳುವಂತೆ ದಾನಿಗಳು ಸ್ವಯಂ ಘೋಷಣೆಯ ಮೂಲಕ ರಕ್ತದಾನ ಮಾಡಿ ಹೋಗಿದ್ದಾರೆ. ಅವರು ರಕ್ತದಾನ ಮಾಡುವ ವೇಳೆ ಹೆಚ್‌ಐವಿ ಪರೀಕ್ಷೆ ನಡೆಸಿರಲಿಲ್ಲ. ಆದರೆ ಆಚಿಟಿ ರೆಟ್ರೋವೈರಲ್ ಥೆರಪಿ ಸಿಬ್ಬಂದಿಗೆ ಈ ವಿಚಾರ ತಿಳಿದಿತ್ತು. ಆದರೂ ಆತ ತನ್ನ ಮೇಲ್ವಿಚಾರಕರಿಗೆ ತಿಳಿಸಲಿಲ್ಲ ಎಂದು ಆರೋಪಿಸಿದ್ದಾರೆ. ಪರೀಕ್ಷೆಯನ್ನೇ ದೂರಿದ ಸಿಬ್ಬಂದಿ ಹೆಚ್‌ಐವಿ, ಮಲೇರಿಯಾ, ಸಿಫಿಲಿಸ್, ಹೆಪಟೈಟಿಸ್ ಬಿ ಮತ್ತು ಸಿ ಐದು ಸ್ಕ್ರೀನಿಂಗ್ ಪರೀಕ್ಷೆಗಳ ಮೂಲಕ ಮಾದರಿಯನ್ನು ನಡೆಸಿದ್ದೇನೆ ಎಂದು ವಜಾಗೊಂಡ ಉದ್ಯೋಗಿ ಸಂತೋಷ್ ಕುಮಾರ್ ಹೇಳಿದ್ದಾರೆ. ಆದರೆ ಅಧಿಕಾರಿಗಳು ಮಾದರಿಗಳ ಮರು ಪರೀಕ್ಷೆಯನ್ನು ನಡೆಸಬೇಕಿತ್ತು ಆದರೆ ನಡೆಸಿಲ್ಲ ಎಂದು ಆರೋಪಿಸಿದ್ದಾರೆ. ಸ್ಕ್ರೀನಿಂಗ್ ಪರೀಕ್ಷೆ ಮತ್ತು ಪರೀಕ್ಷಾ ಕಿಟ್‌ಗಳು ಈ ಅಚಾತುರ್ಯಕ್ಕೆ ಕಾರಣ. ದೃಢೀಕರಣಕ್ಕಾಗಿ ಇತರ ಪರೀಕ್ಷೆಗಳ ನಂತರ ಎಲಿಸಾ ರೀಡರ್ ಯಂತ್ರದ ಮೂಲಕ ಮಾದರಿಗಳನ್ನು ಪರಿಶೀಲನೆ ನಡೆಸಬೇಕಿತ್ತು ಎಂದು ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆಸ್ಪತ್ರೆಯು ಯಂತ್ರವನ್ನು ಹೊಂದಿತ್ತು, ಆದರೆ ಅದು ಪರೀಕ್ಷಾ ಕಿಟ್‌ಗಳ ಅನುಪಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಸರ್ಕಾರ ಒದಗಿಸಿದ ಕಿಟ್ ತುಂಬಾ ಹಳೆಯದ್ದು. ಎಚ್‌ಐವಿ/ಏಡ್ಸ್ನ ಮುಂಗಡ ಪ್ರಕರಣಗಳಲ್ಲಿ ಸ್ಕ್ರೀನಿಂಗ್‌ನಲ್ಲಿ ವೈರಲ್ ಕಣ ಪತ್ತೆಯಾಗುವುದಿಲ್ಲ. ಆದರೆ ಸಾಮಾನ್ಯವಾಗಿ, ಅಂತಹ ರೋಗಿಗಳು ತುಂಬಾ ದುರ್ಬಲ ಮತ್ತು ತೆಳ್ಳಗಿರುತ್ತಾರೆ, ಅವರು ಸೋಂಕಿಗೆ ಒಳಗಾಗಿದ್ದಾರೆ ಸುಲಭವಾಗಿ ಕಂಡುಹಿಡಿಯಬಹುದು” ಎಂದು ಮಾಜಿ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಡಾ. ಉಪೇಂದ್ರ ಕುಮಾರ್ ಸಿನ್ಹಾ ಹೇಳಿದ್ದಾರೆ. ಈ ಘಟನೆಯ ಕುರಿತು ಸರ್ಕಾರವನ್ನು ದೂರುವ ಸಿನ್ಹಾ ಬಿಹಾರ್ ಶರೀಫ್‌ನಲ್ಲಿ ಮೂರನೇ ತಲೆಮಾರಿನ ಕಿಟ್‌ಗಳನ್ನು ಸರ್ಕಾರ ಖರೀದಿಸಿ ಕೊಟ್ಟಿದೆ. ಅವುಗಳು ಹಳೆಯದಾದ ಮತ್ತು ೩೦-೪೫ ದಿನಗಳ ವಿಂಡೋ ಅವಧಿಯನ್ನು ಹೊಂದಿದ್ದವು. ಹೊಸ ಬಗೆಯ ಸ್ಕಿçÃನಿಂಗ್ ಕಿಟ್‌ಗಳು ಇದ್ದರೂ ಇನ್ನೂ ಹಳೆಯ ಮಾದರಿಯಲ್ಲಿ ಇರುವುದು ವಿಪರ್ಯಾಸ, ಸರ್ಕಾರವೇ ಇದರ ಹೊಣೆ ಹೊತ್ತುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಗರ್ಭಿಣಿ ಮಹಿಳೆಗೆ ರಕ್ತದ ಅವಶ್ಯಕತೆ ಇತ್ತು. ಹಾಗಾಗಿ ರಕ್ತ ಕೊಡಲಾಗಿತ್ತು. ನವೆಂಬರ್ ೫ ರಂದು ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ. ಇಲ್ಲಿಯವರೆಗೆ ಅವರಿಗೆ ಹೆಚ್‌ಐವಿ ಪರೀಕ್ಷೆಯನ್ನು ನಡೆಸಲಾಗಿಲ್ಲ. ಆಸ್ಪತ್ರೆಯ ಅಧಿಕಾರಿಗಳು ಮಹಿಳೆ ಮತ್ತು ಶಿಶುವಿಗೆ ವಾರಕ್ಕೊಮ್ಮೆ ಪರೀಕ್ಷೆ ಮಾಡುವುದಾಗಿ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top