fbpx
ಐಪಿಎಲ್

ಭಾರತಕ್ಕೆ ರೋಹಿತ್ ನೂತನ ನಾಯಕ: ಏಕದಿನ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಅಗ್ರಗಣ್ಯ ನಾಯಕರು ಯಾರು? ಅವರ ಸಾಧನೆಗಳೇನು?

ಭಾರತ ಏಕದಿನ ಕ್ರಿಕೆಟ್ ತಂಡದ ನೂತನ ನಾಯಕರಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಭಾರತ ಏಕದಿನ ಕ್ರಿಕೆಟ್ ತಂಡದ ಇಲ್ಲಿಯವರೆಗಿನ ನಾಯಕರುಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ. ಅಂತರಾಷ್ಟಿçÃಯ ಕ್ರಿಕೆಟ್ ತಂಡಗಳಲ್ಲಿ ಭಾರತ ಕ್ರಿಕೆಟ್ ತಂಡದ ಸಾಧನೆ ಬಹಳ ದೊಡ್ಡದು. ಅದರಲ್ಲೂ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಸಾಧನೆ ಅಪ್ರತಿಮ. ಇಲ್ಲಿಯವರೆಗೆ ಭಾರತ ಕ್ರಿಕೆಟ್ ತಂಡ ೨೪ ನಾಯಕರುಗಳನ್ನು ಕಂಡಿದೆ. ಅವರಲ್ಲಿ ಭಾರತ ತಂಡದ ಅಗ್ರ ಒಂಭತ್ತು ಏಕದಿನ ಕ್ರಿಕೆಟ್ ನಾಯಕರ ಸಾಧನೆ ಮತ್ತು ಪರಿಚಯ ಇಲ್ಲಿದೆ.

ಏಕದಿನ ಕ್ರಿಕೆಟ್‌ನಲ್ಲಿ ಯಶಸ್ವಿ ಭಾರತೀಯ ನಾಯಕರು :

೯. ಸಚಿನ್ ತೆಂಡೂಲ್ಕರ್ :
ಸಚಿನ್ ತೆಂಡೂಲ್ಕರ್ ಅವರು ೧೯೯೬ ರಲ್ಲಿ ನಾಯಕರಾಗಿ ಭಾರತೀಯ ಕ್ರಿಕೆಟ್ ತಂಡದ ನಾಯಕರಾದರು. ಅತ್ಯುತ್ತಮ ಬ್ಯಾಟಿಂಗ್ ಕೌಶಲ್ಯದಿಂದಾಗಿ ಅವರನ್ನು ವಿಶ್ವದಾದ್ಯಂತ ಕ್ರಿಕೆಟ್ ದೇವರು ಎಂದೇ ಕರೆಯಲಾಗುತ್ತದೆ. ತಮ್ಮ ಬ್ಯಾಟಿಂಗ್ ದಾಖಲೆಗಳಿಂದ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿ ಮಾಡಿದ್ದಲ್ಲದೆ ಭಾರತೀಯ ಕ್ರಿಕೆಟ್ ತಂಡವನ್ನು ಯಶಸ್ಸಿನ ದಿಕ್ಕಿನತ್ತ ಕೊಂಡೊಯ್ದವರು. ಆದರೆ ತಂಡದ ನಾಯಕನಾಗಿ ಅವರ ಕ್ರಿಕೆಟ್ ಪ್ರಯಾಣ ಭಾರತೀಯ ಕ್ರಿಕೆಟ್ ತಂಡದಲ್ಲಿ ಬ್ಯಾಟ್ಸ್ಮನ್ ಆಗಿ ಮಿಂಚಿದAತೆ ಸುದೀರ್ಘವಾಗಿರಲಿಲ್ಲ. ೭೩ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದ ಸಚಿನ್ ೨೩ ಪಂದ್ಯಗಳಲ್ಲಿ ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಅಂದರೆ ಗೆಲುವು ಕೇವಲ ೩೫.೦೭% ಮಾತ್ರ!. ಆ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಅಷ್ಟೊಂದು ಬಲಿಷ್ಠವಾಗಿರಲಿಲ್ಲ. ಆದರೂ ಸಚಿನ್ ನಾಯಕತ್ವ ತಂಡವನ್ನು ಯಶಸ್ವಿಯತ್ತ ಕೊಂಡೊಯ್ಯುವಲ್ಲಿ ಅಷ್ಟೊಂದು ಯಶಸ್ವಿಯಾಗಲಿಲ್ಲ.

 

 

೮. ಸುನಿಲ್ ಗವಾಸ್ಕರ್
ಸುನಿಲ್ ಗವಾಸ್ಕರ್ ೧೯೭೬ ರಲ್ಲಿ ಭಾರತೀಯ ಟೆಸ್ಟ್ ತಂಡದ ನಾಯಕರಾದವರು. ಕೆಲವು ವರ್ಷಗಳ ನಂತರ, ಅವರಿಗೆ ೧೯೮೦ರಲ್ಲಿ ಏಕದಿನ ತಂಡದ ನಾಯಕತ್ವವನ್ನು ನೀಡಲಾಯಿತು. ಏಕದಿನದಲ್ಲಿ ಅವರ ನಾಯಕತ್ವದ ಅವಧಿಯಲ್ಲಿ ಅವರು ೩೮ ಪಂದ್ಯಗಳಲ್ಲಿ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದರು. ಅದರಲ್ಲಿ ೧೪ ಪಂದ್ಯಗಳಲ್ಲಿ ಗೆಲುವಿನ ಸವಿ ಅವರದ್ದಾಗಿತ್ತು. ಅಂದರೆ ಶೇಕಡಾ ೩೬.೮೪% ಗೆಲುವು. ೧೯೮೫ ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಕ್ರಿಕೆಟ್‌ನಲ್ಲಿ ಗೆಲುವು ಸಾಧಿಸಿದ್ದು ಅವರ ನಾಯಕತ್ವದ ವೃತ್ತಿಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ.

 

 

 

೭. ದಿಲೀಪ್ ವೆಂಗ್‌ಸರ್ಕಾರ್

ಭಾರತ ಕ್ರಿಕೆಟ್ ತಂಡದಲ್ಲಿ ತನ್ನ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನಗಳಿಂದಾಗಿ ಕರ್ನಲ್ ಎಂದೇ ಜನಪ್ರಿಯವಾಗಿದ್ದ ಬ್ಯಾಟ್ಸ್ಮನ್ ದಿಲೀಪ್ ವೆಂಗ್‌ಸರ್ಕರ್. ೧೯೮೭ರಲ್ಲಿ ನಾಯಕರಾಗಿ ಭಾರತೀಯ ಕ್ರಿಕೆಟ್ ತಂಡದ ನೇತೃತ್ವ ವಹಿಸಿದರು. ಅವರ ನಾಯಕತ್ವದ ಅವಧಿಯು ಬಹಳ ಅಲ್ಪಾವಧಿಯದ್ದಾಗಿತ್ತು. ಅದು ೧೯೮೯ ರಲ್ಲಿ ಕೊನೆಗೊಂಡಿತು. ಅವರು ನಾಯಕರಾಗಿ ತಮ್ಮ ಮೊದಲ ಸರಣಿಯಲ್ಲಿಯೇ ಎರಡು ಶತಕಗಳನ್ನು ಗಳಿಸಿದ್ದರು. ೧೯೮೯ರ ಆರಂಭದಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ಪ್ರವಾಸ ಅತ್ಯಂತ ಹೀನಾಯವಾಗಿತ್ತು. ಹಾಗಾಗಿ ಈ ಅವಧಿಯಲ್ಲಿ ಅವರು ತಮ್ಮ ನಾಯಕ ಸ್ಥಾನವನ್ನು ಕಳೆದುಕೊಂಡರು. ಅವರ ಅಲ್ಪಾವಧಿಯ ನಾಯಕತ್ವದಲ್ಲಿ ಅವರು ೧೮ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು, ಅವುಗಳಲ್ಲಿ ತಂಡವು ೪೪.೪ ಶೇಕಡಾವಾರು ಗೆಲುವಿನೊಂದಿಗೆ ಕೇವಲ ೮ ಪಂದ್ಯಗಳನ್ನು ಗೆದ್ದಿತು.

 

 

 

೬. ಮೊಹಮ್ಮದ್ ಅಜರುದ್ದೀನ್

ಅಜರುದ್ದೀನ್ ೧೯೮೯ ರಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕರಾದವರು. ಅವರ ಮೊದಲ ಪಂದ್ಯವೇ ನ್ಯೂಜಿಲೆಂಡ್ ಪ್ರವಾಸವಾಗಿತ್ತು. ಅವರು ಒಟ್ಟು ೧೭೪ ಪಂದ್ಯಗಳಲ್ಲಿ ಭಾರತೀಯ ತಂಡವನ್ನು ಮುನ್ನಡೆಸಿದ್ದರು, ಇವುಗಳಲ್ಲಿ ಭಾರತೀಯ ತಂಡವು ೯೦ ಪಂದ್ಯಗಳಲ್ಲಿ ಶೇ. ೫೩.೫೭ರಷ್ಟು ಪಂದ್ಯಗಲನ್ನು ಗೆದ್ದಿದೆ. ಇಂದಿಗೂ ಭಾರತೀಯ ತಂಡದ ಅತ್ಯುತ್ತಮ ನಾಯಕರಲ್ಲಿ ಒಬ್ಬರೆಂದು ಅಜರುದ್ದೀನ್ ಪರಿಗಣಿಸಲ್ಪಟ್ಟಿದ್ದಾರೆ ಮತ್ತು ಅವರು ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಗೆಲುವುಗಳ ದಾಖಲೆಯನ್ನು ಸಹ ಹೊಂದಿದ್ದರು. ಸದ್ಯ ಅವರ ದಾಖಲೆಯನ್ನು ಧೋನಿ ಹಿಂದಿಕ್ಕಿದ್ದಾರೆ.

 

 

೫. ಸೌರವ್ ಗಂಗೂಲಿ
ಸೌರವ್ ಗಂಗೂಲಿ ನಿಸ್ಸಂದೇಹವಾಗಿ ಭಾರತದ ಅತ್ಯಂತ ನಿರ್ಭೀತ ಮತ್ತು ಯಶಸ್ವಿ ಭಾರತೀಯ ನಾಯಕರಲ್ಲಿ ಒಬ್ಬರು. ೧೯೯೯ ರಲ್ಲಿ ತಮ್ಮ ನಾಯಕನಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಅನೇಕ ಸಂಧರ್ಭಗಳಲ್ಲಿ ಧೈರ್ಯದ ನಿರ್ಧಾರಗಳನ್ನು ತೆಗೆದುಕೊಂಡು ತಂಡವನ್ನು ಮುನ್ನಡೆಸಿದರು. ಗಂಗೂಲಿ ಭಾರತ ತಂಡದ ಏರಿಳಿತದ ಭಾಗವಾಗಿದ್ದರು. ಅವರ ನಾಯಕತ್ವದ ಅವಧಿಯಲ್ಲಿ ಅಸಾಧಾರಣ ಎನಿಸಿದ್ದ ಅನೇಕ ಕೆಲಸಗಳನ್ನು ಮಾಡಿದರು. ಎಂಎಸ್ ಧೋನಿ, ಮೊಹಮ್ಮದ್ ಕೈಫ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಜಹೀರ್ ಖಾನ್ ಮತ್ತು ವೀರೇಂದ್ರ ಸೆಹ್ವಾಗ್ ಮುಂತಾದ ಆಟಗಾರರು ಇವರ ಗರಡಿಯಿಂದಲೇ ಪಳಗಿದ್ದು. ನಾಯಕನಾಗಿ ಒಟ್ಟು ೧೪೬ ಏಕದಿನ ಪಂದ್ಯಗಳನ್ನು ಆಡಿದ್ದ ಗಂಗೂಲಿ ೭೪ ಪಂದ್ಯಗಳನ್ನು ಗೆದ್ದಿದ್ದರು. ಒಟ್ಟಾರೆಯಾಗಿ ಗೆಲುವಿನ ಪ್ರತಿಶತ ೫೪%.

 

 

೪. ಕಪಿಲ್ ದೇವ್
ಕಪಿಲ್ ದೇವ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಮತ್ತು ಯಶಸ್ವಿ ಭಾರತೀಯ ನಾಯಕರಲ್ಲಿ ಒಬ್ಬರು ಎಂದೇ ಪರಿಗಣಿಸಲಾಗಿದೆ. ಅವರು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಆಲ್ ರೌಂಡರ್‌ಗಳಲ್ಲಿ ಒಬ್ಬರು. ಅವರ ವೃತ್ತಿಜೀವನದ ಅವಧಿಯಲ್ಲಿ, ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ೫೦೦೦ ರನ್ ಮತ್ತು ೪೦೦ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಏಕೈಕ ಕ್ರಿಕೆಟಿಗ ಹೀಗೆ ಅನೇಕ ಇಂದಿಗೂ ಮುರಿಯಲಾಗದ ದಾಖಲೆಗಳನ್ನು ಮಾಡಿದ್ದಾರೆ. ಅವರು ೧೯೮೩ ರಲ್ಲಿ ಮೊದಲ ಬಾರಿಗೆ ಐತಿಹಾಸಿಕ ವಿಶ್ವಕಪ್ ಗೆದ್ದ ಭಾರತ ತಂಡವನ್ನು ಮುನ್ನಡೆಸಿದ ಮೊದಲ ನಾಯಕ. ೧೯೮೨ ರಲ್ಲಿ ತಮ್ಮ ನಾಯಕತ್ವವದ ಪಯಣ ಪ್ರಾರಂಭಿಸಿದ ಕಪಿಲ್ ಮೊದಲ ಪಂದ್ಯವೇ ವೆಸ್ಟ್ ಇಂಡೀಸ್ ಎದುರಿನದಾಗಿತ್ತು. ಆಗಿನ ಕಾಲದಲ್ಲಿ ಸೋಲೆ ಇಲ್ಲದ ಸರದಾರರಾಗಿ ಮಿಂಚುತ್ತಿದ್ದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಭಾರತ ಪಂದ್ಯವನ್ನು ಯಶಸ್ವಿಯಾಗಿ ಗೆದ್ದುಕೊಂಡಿತ್ತು. ಗವಾಸ್ಕರ್ ಅವರ ಕಳಪೆ ಪ್ರದರ್ಶನದಿಂದಾಗಿ ೧೯೮೪ ರಲ್ಲಿ ತಂಡದ ನಾಯಕರಾಗಿ ಮರು ನೇಮಕಗೊಂಡರು.
೧೯೮೬ ರಲ್ಲಿ ಇಂಗ್ಲೆAಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದರು. ಒಟ್ಟು ೭೯ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದರು. ೫೪.೧೬% ಗೆಲುವಿನ ಶೇಕಡಾವಾರು ೩೯ ಪಂದ್ಯಗಳನ್ನು ಗೆದ್ದರು. ಕೆಲವು ಸಮಯದಲ್ಲಿ ಅವರ ಪ್ರದರ್ಶನ ಮತ್ತು ಅವರ ನಾಯಕತ್ವದ ಅವಧಿಯು ಒರಟಾಗಿತ್ತು. ಒಟ್ಟಾರೆಯಾಗಿ, ಅಂಕಿಅAಶಗಳ ಪ್ರಕಾರ ಆಟಗಾರನಿಗಿಂತ ಉತ್ತಮ ನಾಯಕನಾಗಿ ಇವರು ಮಿಂಚಿದ್ದರು.

 

 

 

೩. ರಾಹುಲ್ ದ್ರಾವಿಡ್
೨೦೦೦ರಲ್ಲಿ ಸೌರವ್ ಗಂಗೂಲಿ ನಂತರ ರಾಹುಲ್ ದ್ರಾವಿಡ್ ಭಾರತ ತಂಡದ ನಾಯಕರಾದರು. ಕ್ರಿಕೆಟ್ ಇತಿಹಾಸದಲ್ಲಿ ಇವರ ಅಮೋಘ ಪ್ರದರ್ಶನದಿಂದಾಗಿ ‘ಕ್ರಿಕೆಟ್ ಗೋಡೆ’ ಎಂದು ಅಡ್ಡಹೆಸರಿನಿಂದ ಕರೆಯಲಾಗುತ್ತದೆ. ನಾಯಕತ್ವದ ಸಮಯದಲ್ಲಿ ಅಥವಾ ಯಾವುದೇ ಸಮಯದಲ್ಲಿ, ತಂಡವು ಪ್ರತಿ ಬಾರಿಯೂ ಅವರನ್ನು ನಂಬುತ್ತಿತ್ತು. ದ್ರಾವಿಡ್ ಪ್ರದರ್ಶನ ಅಂತದ್ದು. ದ್ರಾವಿಡ್ ಭಾರತ ತಂಡವನ್ನು ಪ್ರತಿನಿಧಿಸಿದಾಗ ತಂಡದ ಪರಿಸ್ಥಿತಿಯು ಸಾಕಷ್ಟು ಕಠಿಣತೆಯಿಂದ ಕೂಡಿತ್ತು. ನಿಧಾನವಾಗಿ ಮತ್ತು ಸ್ಥಿರವಾಗಿ ತಂಡವನ್ನು ಮುನ್ನಡೆಸಿದ ರಾಹುಲ್ ತಂಡವನ್ನು ಮರಳಿ ಕಟ್ಟಿದರು. ಗೌತಮ್ ಗಂಭೀರ್, ಸುರೇಶ್ ರೈನಾ, ಯುವರಾಜ್ ಸಿಂಗ್, ಎಂ.ಎಸ್ ಧೋನಿ, ಇರ್ಫಾನ್ ಪಠಾಣ್ ಅವರಂತಹ ಕ್ರಿಕೆಟಿಗರು ಆ ಸಮಯದಲ್ಲಿ ತಂಡದ ಭಾಗವಾಗಿದ್ದರು. ಅನೇಕ ಪಂದ್ಯಗಳಲ್ಲಿ ಅವರು ದ್ರಾವಿಡ್‌ಗೆ ಪಂದ್ಯಗಳನ್ನು ಗೆಲ್ಲಲು ಸಹಾಯ ಮಾಡಿದರು. ಏಕದಿನದಲ್ಲಿ ಗಣನೀಯವಾಗಿ ಸುಧಾರಣೆ ತರುವಲ್ಲಿಯೂ ದ್ರಾವಿಡ್ ಯಶಸ್ವಿಯಾಗಿದ್ದಾರೆ. ನಾಯಕನಾಗಿ ೭೯ ಪಂದ್ಯಗಳನ್ನು ಆಡಿದ ದ್ರಾವಿಡ್ ಅವುಗಳಲ್ಲಿ ೪೨ ಪಂದ್ಯಗಳಲ್ಲಿ ಗೆಲುವು ತಂದುಕೊಡುವ ಮೂಲಕ ೫೬ ಪ್ರತಿಶತ ಗೆಲುವಿನ ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ.

 

My comments were taken out of context: Rahul Dravid

 

೨. ಮಹೇಂದ್ರ ಸಿಂಗ್ ಧೋನಿ
“ಧೋನಿ ಹೈ ತೋ ಮುಮ್ಕಿನ್ ಹೈ!” ಧೊನಿ ಇದ್ದರೆ ಅಲ್ಲಿ ಗೆಲುವಿದೆ ಎಂದು ಹೊಗಳಿಸಿಕೊಳ್ಳುವ ಮಹೇಂದ್ರಸಿAಗ್ ಧೋನಿ ಅತ್ಯಂತ ಯಶಸ್ವಿ ಭಾರತೀಯ ಏಕದಿನ ಕ್ರಿಕೆಟ್ ನಾಯಕರಲ್ಲಿ ಒಬ್ಬರು. ಕ್ಯಾಪ್ಟನ್ ಕೂಲ್ ಭಾರತೀಯ ಕ್ರಿಕೆಟ್‌ಗೆ ಕಾಲಿಟ್ಟಾಗಲೇ ಅನೇಕ ಕ್ರಿಕೆಟ್ ದಾಖಲೆಗಳನ್ನು ಹೊಂದಿದ್ದರು. ೨೦೦೭ ರಲ್ಲಿ ನಾಯಕತ್ವವದ ಜವಾಬ್ದಾರಿ ಹೆಗಲಿಗೇರಿಸಿಕೊಂಡ ಧೋನಿ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಯಾವಾಗಲೂ ಶಾಂತವಾಗಿರುವ ಧೋನಿ ಭಾರತ ಕ್ರಿಕೆಟ್ ನಾಯಕನಾಗಿ ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಮತ್ತು ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ನಾಯಕನಾಗಿ, ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ನಂತರ ಅವರ ಬ್ಯಾಟಿಂಗ್ ಸರಾಸರಿಯಲ್ಲಿ ೩ ನೇ ಸ್ಥಾನ ಅವರದ್ದಾಗಿದೆ. ೨೦೧೩ ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ಏಕದಿನ ಕ್ರಿಕೆಟ್‌ನಲ್ಲಿ ನಂ.೧ ಶ್ರೇಯಾಂಕಿತ ತಂಡವಾಗಿತ್ತು.

 

 

 

ಕಪಿಲ್ ದೇವ್ ನಂತರ ೨೦೧೧ರಲ್ಲಿ ಮತ್ತೊಮ್ಮೆ ವಿಶ್ವಕಪ್‌ಗೆ ತಂಡವನ್ನು ಮುನ್ನಡೆಸಿ ಕಪ್ ಗೆಲ್ಲಿಸಿಕೊಟ್ಟ ನಾಯಕ. ಅವರ ನಾಯಕತ್ವದಲ್ಲಿ ಭಾರತ ೨೦೦೭ ರ ಟಿ-೨೦ ವಿಶ್ವಕಪ್ ಮತ್ತು ೨೦೧೩ ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ನಾಯಕನಾಗಿ ೨೦೦ ಏಕದಿನ ಪಂದ್ಯಗಳನ್ನು ಆಡಿ ಅವುಗಳಲ್ಲಿ ಅವುಗಳಲ್ಲಿ ೧೧೦ಪಂದ್ಯಗಳನ್ನು ಗೆದ್ದು ಕೊಟ್ಟಿದ್ದಾರೆ. ಇದು ಶೇಕಡಾ ೬೦ರಷ್ಟು ಗೆಲವು. ನಿಸ್ಸಂದೇಹವಾಗಿ ವಿಶ್ವದ ಅತ್ಯಂತ ಪ್ರೀತಿಪಾತ್ರ ಮತ್ತು ಮೆಚ್ಚುಗೆ ಪಡೆದ ಕ್ರಿಕೆಟಿಗರಲ್ಲಿ ಒಬ್ಬರು. ೧೫ನೇ ಆಗಸ್ಟ್ ೨೦೨೦ ರಂದು ತಮ್ಮ ನಿವೃತ್ತಿಯ ಕುರಿತು ಧೋನಿಯವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ೨೦೧೯ರ ವಿಶ್ವಕಪ್ ಸೆಮಿ-ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ್ದೇ ವೃತ್ತಿ ಜೀವನದ ಕೊನೆಯ ಪಂದ್ಯ.

೧. ವಿರಾಟ್ ಕೋಹ್ಲಿ
ಕಿಂಗ್ ಕೋಹ್ಲಿ ಎಂದೇ ಹೆಸರಾಗಿರುವ ವಿರಾಟ್ ಕೋಹ್ಲಿ ೨೦೦೮ರಲ್ಲಿ ಮೊದಲ ಬಾರಿಗೆ ತಮ್ಮ ಕ್ರಿಕೆಟ್ ಬದುಕಿನಲ್ಲಿ ಅಂತರಾಷ್ಟಿçÃಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಅಲ್ಲಿಂದ ಬಹುಶಃ ಅವರು ತಿರುಗಿ ನೋಡಿದ್ದೇ ಇಲ್ಲ. ತಮ್ಮ ೧೩ ವರ್ಷದ ವೃತ್ತಿ ಬದುಕಿನಲ್ಲಿ ಕೋಹ್ಲಿ ಅನೇಕ ದಾಖಲೆಗಳನ್ನು ಮುರಿದು ತಮ್ಮದಾಗಿಸಿಕೊಂಡಿದ್ದಾರೆ. ೨೦೧೬ರಿಂದ ಭಾರತ ಕ್ರಿಕೆಟ್ ತಂಡದ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕೋಹ್ಲಿ ಕ್ರಿಕೆಟ್ ನಾಯಕರಾಗಿ ಆಯ್ಕೆಯಾಗುವ ಸಂದರ್ಭದಲ್ಲಿ ಅವರ ಬಗ್ಗೆ ಸಾಕಷ್ಟು ಕೆಟ್ಟ ಅಭಿಪ್ರಾಯಗಳಿದ್ದವು. ಆದರೆ ಕೋಹ್ಲಿ ತಮ್ಮ ಬ್ಯಾಟ್ ಮತ್ತು ಪ್ರದರ್ಶನದಿಂದಲೇ ಅವರೆಲ್ಲರಿಗೂ ಉತ್ತರಿಸಿ ನಾಯಕನಾಗಿ ತಂಡವನ್ನು ಮುನ್ನಡೆಸುವುದರಲ್ಲಿ ಸೈ ಎನಿಸಿಕೊಂಡಿದ್ದಾರೆ. ಭಾರತ ಏಕದಿನ ಕ್ರಿಕಟ್ ತಂಡದಲ್ಲಿ ಕಪಿಲ್ ದೇವ್, ಎಂಎಸ್ ಧೋನಿ, ಅಜರುದ್ದೀನ್, ಗಂಗೂಲಿ ನಂತರದ ಅತ್ಯಂತ ಯಶಸ್ವಿ ನಾಯಕರೆನಿಸಿಕೊಂಡಿದ್ದಾರೆ. ಅತೀ ಹೆಚ್ಚು ಏಕದಿನ ಕ್ರಿಕೆಟ್ ರನ್ ಗಳಿಸಿದ ದಾಖಲೆ ಇವರ ಹೆಸರಿನಲ್ಲಿದೆ.
ಭಾರತ ಕ್ರಿಕೆಟ್ ತಮಡದ ನಾಯಕನಾಗಿ ಅತೀ ಹೆಚ್ಚು ಏಕದಿನ ಶತಕಗಳನ್ನು ಗಳಿಸಿದ ಆಟಗಾರನೆಂಬ ದಾಖಲೆಯೂ ಈಗ ಕೋಹ್ಲಿ ಹೆಸರಿನಲ್ಲಿದೆ. ಆಡಿರುವ ೯೫ ಪಂದ್ಯಗಳಲ್ಲಿ ಸುಮಾರು ೬೫ ಪಂದ್ಯಗಳನ್ನು ಗೆದ್ದಿರುವ ಕೋಹ್ಲಿ ಗೆಲುವಿನ ಸರಾಸರಿ ೭೦ ಪ್ರತಿಶತ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top