fbpx
ಸಮಾಚಾರ

RRR ಟ್ರೈಲರ್ ರಿಲೀಸ್: ಜೂ.NTR ರಾಮಚರಣ್ ಕನ್ನಡ ಧ್ವನಿಗೆ ಕನ್ನಡಿಗರು ಫಿದಾ

ಪ್ರಸಿದ್ಧ ನಿರ್ದೇಶಕ ರಾಜಮೌಳಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ RRR ಚಿತ್ರದ ಟ್ರೈಲರ್ ಇಂದು ರಿಲೀಸ್ ಆಗಿದ್ದು ಪ್ರಪಂಚಾದ್ಯಂತ ಇರುವ ಸಿನಿ ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ. ಮೇಕಿಂಗ್ ಕ್ವಾಲಿಟಿ, ಸ್ಟಾರ್ ನಟರ ಹೀರೊಗಿರಿ, ಸಾಹಸ ದೃಶ್ಯಗಳು, ಹಿನ್ನಲೆ ಸಂಗೀತ, ಮನಕಲಕುವ ಡೈಲಾಗುಗಳು ಟ್ರೈಲರ್ ನ ಹೈಲೈಟ್ಸ್.

 

 

ಇನ್ನು RRR ಚಿತ್ರವೂ ತೆಲುಗು ಸೇರಿದಂತೆ ಐದು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಹಾಗೆಯೆ ಕನ್ನಡದಲ್ಲಿ ಕೂಡ RRRಬಿಡುಗಡೆಯಾಗಲಿದ್ದು ಇಂದು ಟ್ರೈಲರ್ ಅನ್ನು ಕನ್ನಡದಲ್ಲಿಯೂ ಕೂಡ ಲಾಂಚ್ ಮಾಡಲಾಗಿದೆ. ಕನ್ನಡ ಅವತರಿಣಿಕೆಯಲ್ಲಿ ಪಾತ್ರಗಳಿಗೆ ಡಬ್ಬಿಂಗ್ ಅನ್ನು ಅಚ್ಚುಕಟ್ಟಾಗಿ ಮಾಡಲಾಗಿದ್ದು ಪ್ರತಿ ಪಾತ್ರಕ್ಕೂ ಹೊಂದುವಂತ ಧ್ವನಿ ನೀಡಲಾಗಿದೆ,.

ವಿಶೇಷವೆಂದರೆ ಚಿತ್ರದ ಪ್ರಮುಖ ಆಕರ್ಷಣೆಯಾಗಿರುವ ರಾಮಚರಣ್ ಮತ್ತು ಜೂ. NTR ಪಾತ್ರಕ್ಕೆ ಸ್ವತಃ ಅವರೇ ಕನ್ನಡದಲ್ಲಿ ಧ್ವನಿ ನೀಡಿದ್ದು ಕನ್ನಡಿಗರ ಮೆಚ್ಚುಗೆ ಗಳಿಸಿಕೊಂಡಿದೆ. ಉಚ್ಚಾರಣೆಯಲ್ಲಿ ಸ್ವಲ್ಪ ಪ್ರಮಾಣದ ನ್ಯೂನತೆ ಕಂಡು ಬಂದರೂ ಸಹ ಇಬ್ಬರ ಕನ್ನಡ ಭಾಷೆ ಬಹುತೇಕ ಕನ್ನಡಿಗರಿಗೆ ಇಷ್ಟವಾಗಿದೆ.

ಅಂದಹಾಗೆ ಬಹುನಿರೀಕ್ಷಿತ RRR ಚಿತ್ರವೂ ಸ್ವತಂತ್ರ ಪೂರ್ವದಲ್ಲಿ ನಡೆದ ಒಂದು ಘಟನೆಯನ್ನು ಆದರಿಸಿ ನಿರ್ಮಾಣವಾಗಿರುವ ಚಿತ್ರವಾಗಿದ್ದು ಇದು ಜನವರಿ 7ರಂದು ಒಟ್ಟು ಐದು ಭಾಷೆಯಲ್ಲಿ ವಿಶ್ವಾದ್ಯಂತ ಏಕಕಾಲಕ್ಕೆ ತೆರೆಕಾಣುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top