fbpx
ಸಮಾಚಾರ

೨೦೨೨ರಲ್ಲಿದೆ ಈ ರಾಶಿಯವರಿಗೆ ದೊಡ್ಡ ಕಂಟಕ… ನಿಮ್ಮ ರಾಶಿಯೂ ಈ ಪಟ್ಟಿಯಲ್ಲಿದ್ದರೆ ಹೀಗೆ ಮಾಡಿ

೨೦೨೧ರ ವರ್ಷ ಮುಗಿದು ಮತ್ತೆ ಹೊಸ ವರ್ಷ ಬಂದಿದೆ. ಹೊಸ ವರ್ಷ ಹೇಗಿರುತ್ತೆ? ಯಾವೆಲ್ಲಾ ಪುಣ್ಯಫಲಗಳು ಈ ವರ್ಷ ನಮ್ಮ ರಾಶಿಗಿದೆ ಎಂದು ತಿಳಿದುಕೊಳ್ಳುವ ಕುತೂಹಲ ನಮಗಿದ್ದೇ ಇರುತ್ತದೆ. ಆದರೆ ಈ ಮೂರು ರಾಶಿಯವರಿಗೆ ಈ ವರ್ಷ ದೊಡ್ಡ ಕಂಟಕ ಕಾಡಲಿದೆ. ಶನಿ ಮಹಾತ್ಮನ ಆರಾಧನೆಯಿಂದ ಮಾತ್ರ ಆ ರಾಶಿಯವರಿಗೆ ಕಂಟಕ ದೂರವಾಗಲಿದೆ. ಹಾಗಾದರೆ ಯಾವುದು ಆ ಮೂರು ರಾಶಿಗಳು ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ಮೊದಲನೆಯ ರಾಶಿ ಕರ್ಕಾಟಕ. ಕರ್ಕಾಟಕ ರಾಶಿಯವರಿಗೆ ಈ ವರ್ಷ ಅಷ್ಟು ಉತ್ತಮ ಫಲಗಳನ್ನು ತಂದುಕೊಡುವುದಿಲ್ಲ. ೨೦೨೧ರಲ್ಲಿ ಕರ್ಕಾಟಕ ರಾಶಿಯವರು ಒಂದಿಷ್ಟು ಉತ್ತಮ ಫಲಗಳನ್ನು ಪಡೆದಿದ್ದರು. ಆದರೆ ಅಂತಿಮವಾಗಿ ಒಂದಿಷ್ಟು ಗ್ರಹಗತಿಗಳು ಸ್ಥಿತಿ ಬದಲಾಗಿದ್ದರಿಂದ ಶನಿಯ ನೇರ ದೃಷ್ಟಿ ಈ ರಾಶಿಯವರಿಗೆ ತಾಗಲಿದೆ. ಎಲ್ಲದಕ್ಕೂ ಶನಿ ಮಹಾತ್ಮನ ಆರಾಧನೆಯೇ ಪರಿಹಾರ.ಎರಡನೆಯದಾಗಿ ಮಕರ ರಾಶಿಯವರು.ಇವರಿಗೆ ೨೦೨೧ರ ಡಿಸೆಂಬರ್ ತಿಂಗಳಲ್ಲೇ ಇದರ ಸೂಚನೆ ಸಿಕ್ಕಿದ್ದು ಈಗಾಗಲೇ ಒಂದೆರಡು ಸೋಲುಗಳು ನಿಮಗೆ ಸೂಚನೆ ನೀಡಿರಬಹುದು. ಆರೋಗ್ಯದ ಬಗ್ಗೆ ಕೊಂಚ ಎಚ್ಚರಿಕೆ ವಹಿಸಿ. ಹಣಕಾಸಿನ ವ್ಯವಹಾರದಲ್ಲಿ ಜಾಗರೂಕತೆಯಿಂದ ವರ್ತಿಸಿದರೆ ಮುಂದಾಗುವ ಅಪಾಯವನ್ನು ತಪ್ಪಿಸಬಹುದು. ಮೂರನೇ ರಾಶಿ ಮೀನ. ಸದಾ ಸೋಮಾರಿಗಳಂತೆ ಇರುವವರ ಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ನಿರುದ್ಯೋಗಿಗಳು ಆದಷ್ಟು ಬೇಗ ಉದ್ಯೋಗ ಹುಡುಕಿಕೊಳ್ಳುವುದು ಉತ್ತಮ. ಅತಿಯಾಗಿ ಸ್ನೇಹಿತರನ್ನು ನಂಬದಿರುವುದು ಒಳ್ಳೆಯದು. ನಿಮ್ಮ ಸ್ನೇಹದಲ್ಲಿ ಬಿರುಕು ಬರುವ ಸಾಧ್ಯತೆಗಳಿದೆ. ಅತಿಯಾಗಿ ನಂಬಿದ ಆಪ್ತರೇ ನಿಮ್ಮನ್ನು ದೂರ ತಳ್ಳುವ ಸಾಧ್ಯತೆ ಇದೆ. ಅವಮಾನಗಳನ್ನು ಎದುರಿಸಲು ತಯಾರಾಗಿರಿ. ಮಾನಸಿಕವಾಗಿ ಗಟ್ಟಿಯಾಗಿರುವುದು ಅನಿವಾರ್ಯ. ವರ್ಷಾಂತ್ಯದಲ್ಲಿ ಪರಿಸ್ಥಿತಿ ಸುಧಾರಿಸಲಿದೆ.

ಸಾಧ್ಯವಾದಷ್ಟು ಈ ಮೂರು ರಾಶಿಯನ್ನು ಹೊಂದಿರುವವರು ಪ್ರತೀ ಶನಿವಾರ ಶನಿ ದೇವಾಲಯ ಅಥವಾ ಅಶ್ವಥ ಮರದ ಪಕ್ಕದಲ್ಲಿರುವ ಈಶ್ವರ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಒಳ್ಳೆಯ ಫಲಗಳು ಬರಲು ಸಾಧ್ಯವಿದೆ. ಪ್ರತೀ ಏಕಾದಶಿಯಂದು ಸಾಧ್ಯವಾದರೆ ವ್ರತ ಕೈಗೊಳ್ಳಿ. ನಿಮ್ಮ ಮನೆದೇವರ ಸ್ಮರಣೆಯಿಂದ ಕಾರ್ಯ ಜಯ ಪ್ರಾಪ್ತಿಯಾಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top