fbpx
ಸಮಾಚಾರ

13 ಬಲಿ ಪಡೆದ ಹೆಲಿಕಾಪ್ಟರ್​​​​​ ದುರಂತದಲ್ಲಿ ಬದುಕುಳಿದಿದ್ದು ಒಬ್ಬರೇ ಒಬ್ಬರು: 14 ಮಂದಿಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಇವರೊಬ್ಬರೇ…

ತಮಿಳು ನಾಡಿನ ಊಟಿ ಸಮೀಪದಲ್ಲಿ ಉಂಟಾದ ಹೆಲಿಕಾಪ್ಟರ್ ದುರಂತದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿ ಒಟ್ಟು 13 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಈ ಅನಾಹುತದಲ್ಲಿ ಅದೃಷ್ಟವಶಾತ್ ರೀತಿಯಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದಿದ್ದು ಸದ್ಯ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೌದು, ಹೆಲಿಕಾಪ್ಟರ್​​ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಾಯುಪಡೆಯ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್. ಅವರು ಪ್ರಸ್ತುತ ವೆಲ್ಲಿಂಗ್​ಟನ್​ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವರುಣ್ ಸಿಂಗ್ ಈ ಹಿಂದೆಯೂ ಒಮ್ಮೆ ಪ್ರಾಣಾಪಾಯದಿಂದ ಪಾರಾಗಿದ್ದರು. ಅವರಿಗೆ ಆ.15ರಂದು ಶೌರ್ಯಚಕ್ರ ಪ್ರಶಸ್ತಿ ಕೊಟ್ಟು ಗೌರ ವಿಸಲಾಗಿತ್ತು. ವರುಣ್‌ ಸಿಂಗ್‌ ಅವರು 2020 ಅ. 12ರಂದು ಯುದ್ಧವಿಮಾನವೊಂದರ ಪರೀ ಕ್ಷಾರ್ಥ ಹಾರಾಟ ನಡೆಸುತ್ತಿದ್ದರು. ತಾಂತ್ರಿಕ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಅದನ್ನು ಸುರಕ್ಷಿತವಾಗಿ ಇಳಿಸುವ ಪ್ರಯತ್ನದಲ್ಲಿದ್ದ ವೇಳೆ, ವಿಮಾನದ ನಿರ್ವ ಹಣಾ ಸಿಸ್ಟಂ ಕೂಡ ಸ್ಥಗಿತಗೊಂಡಿತು.

ವಿಮಾನ ಸಂಪೂರ್ಣವಾಗಿ ನಿಯಂತ್ರಣ ತಪ್ಪಿದೆ. ಇನ್ನೇನು ಕೆಳಗೆ ಬಿದ್ದು, ಸತ್ತೇ ಹೋಗುತ್ತೇನೆ ಎನ್ನುವಂತಹ ಸನ್ನಿವೇಶವಿದ್ದರೂ, ಧೃತಿಗೆಡದ ವರುಣ್‌ ಅವರು, ವಿಮಾನವನ್ನು ಮರುನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಈ ಶೌರ್ಯವನ್ನು ಮೆಚ್ಚಿ ಅವರಿಗೆ ಶೌರ್ಯಚಕ್ರ ಪ್ರಶಸ್ತಿ ನೀಡಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top