fbpx
ಸಮಾಚಾರ

೨೦೨೨ರಲ್ಲಿ ಈ ರಾಶಿಯವರಿಗೆ ಒಲಿಯಲಿದೆ ಗುರುವಿನ ಕೃಪಾಕಟಾಕ್ಷ..! ಯಾವುದು ಆ ಅದೃಷ್ಟವಂತ ರಾಶಿ?

೨೦೨೨ರಲ್ಲಿ ಈ ಒಂದು ರಾಶಿಯವರ ಅದೃಷ್ಟ ಸಂಪೂರ್ಣ ಬದಲಾಗಲಿದ್ದು ಅವರಿಗೆ ಸಂಪೂರ್ಣ ಗುರುವಿನ ಕೃಪಾಕಟಾಕ್ಷ ದೊರೆಯಲಿದೆ. ಆ ಅದೃಷ್ಟವಂತ ರಾಶಿಯವರ ಬೇರೆ ಯಾವುದೂ ಅಲ್ಲ. ಅದು ಸಿಂಹ ರಾಶಿ.ಸಿಂಹ ರಾಶಿಯವರಿಗೆ ಜನ್ಮತಃ ನಾಯಕತ್ವ ಗುಣಗಳು ಬಂದಿದೆ. ಆದರೆ ಇಲ್ಲಿಯವರೆಗೆ ಅವರ ನಿರೀಕ್ಷೆಯಷ್ಟು ಫಲಗಳು ದೊರೆತಿಲ್ಲ. ಆದರೆ ಈಗ ಹೊಸ ವರ್ಷದಲ್ಲಿ ಹೊಸ ಫಲಗಳು ನಿಮ್ಮನ್ನು ಸಂತೋಷದಿAದ ಇಡಲಿದೆ. ಯಾಕೆಂದರೆ ನಿಮಗೆ ಬೇರ್ಯಾವ ರಾಶಿಗಳಿಗೂ ಇಲ್ಲದ ಅದ್ಭುತ ಫಲಗಳು ಈ ವರ್ಷ ಕಾದಿದೆ. ನಿಮ್ಮ ಜೊತೆ ಗುರು ಇರುವುದೇ ಇದಕ್ಕೆ ಮುಖ್ಯ ಕಾರಣ.
ಗುರುವಿನ ಕೃಪೆಯಿಂದ ಏನನ್ನು ಬೇಕಾದರೂ ಸಾಧಿಸಬಹುದು. ಹಿಂದೆ ಗುರು ಮುಂದೆ ಗುರಿ ಇದ್ದರೆ ಗೆಲವು ನಿಮ್ಮದೇ, ಹಾಗಾಗಿ ಗುರುಗಳೊಂದಿಗೆ ಮತ್ತು ಗುರು ಸಮಾನರೊಂದಿಗೆ ಉತ್ತಮ ಬಾಂದವ್ಯ ವೃದ್ದಿಸಿಕೊಳ್ಳುವುದು ಅಗತ್ಯ.

ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳದಿರುವುದು ಉತ್ತಮ.ಗುರು ನಿಮ್ಮ ಜೊತೆಗಿರುವುದರಿಂದ ಶತ್ರು ಭಯ ಇದ್ದೇ ಇರುತ್ತದೆ. ಶತ್ರುಗಳ ಬಗ್ಗೆ ಜಾಸ್ತಿ ಚಿಂತೆ ಮಾಡದೆ ಗುರುಗಳ ಸಲಹೆಯೊಂದಿಗೆ ಮುಂದುವರೆಯಿರಿ. ಇನ್ನು ಸಿಂಹ ರಾಶಿಯ ವಿದ್ಯಾರ್ಥಿಗಳಿಗೆ ಓದಿನಲ್ಲಿ ಅಲ್ಪ ಪ್ರಮಾಣದ ಪ್ರಗತಿ ಕಾಣಿಸಲಿದೆ. ಆದರೆ ಉದ್ಯೋಗಾಕಾಂಕ್ಷಿ ಯುವಕರಿಗೆ ಉದ್ಯೋಗ ದೊರೆತು ಆರ್ಥಿಕ ಅಭಿವೃದ್ದಿ ಸಾಧ್ಯವಾಗಲಿದೆ. ನವವಿವಾಹಿತರಿಗೆ ೨೦೨೨ರಲ್ಲಿ ಸಂತಸದ ಸುದ್ದಿಯೂ ಲಭಿಸಲಿದೆ. ಸಂಸಾರದಲ್ಲಿ ನೆಮ್ಮದಿ ದೊರೆತು ಕಾಲಿಟ್ಟಲೆಲ್ಲಾ ಜಯ ನಿಮ್ಮದಾಗಲಿದೆ. ಸಪ್ಟೆಂಬರ್‌ನಿAದ ಅಕ್ಟೋಬರ್‌ವರೆಗೆ ಕೊಂಚ ಜಾಗ್ರತೆ ವಹಿಸಿದರೆ ಸಿಂಹ ರಾಶಿಯರು ೨೦೨೨ರಲ್ಲಿ ಸಿಂಹದAತೆ ಕಳೆಯಬಲ್ಲರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top