fbpx
ಸಮಾಚಾರ

2021 ರಲ್ಲಿ ಅತೀ ಹೆಚ್ಚು ರೇಟಿಂಗ್ಸ್ ಪಡೆದುಕೊಂಡ ಕನ್ನಡ ಚಲನಚಿತ್ರಗಳು

2021 ರಲ್ಲಿ ಅತೀ ಹೆಚ್ಚು ರೇಟಿಂಗ್ಸ್ ಪಡೆದುಕೊಂಡ ಕನ್ನಡ ಚಲನಚಿತ್ರಗಳು
ಪ್ರತಿ ವರ್ಷ, ಕನ್ನಡ ಚಿತ್ರರಂಗವು ವಿಭಿನ್ನ ಪ್ರಯೋಗದ, ಕಲ್ಪನೆಯ ಉತ್ತಮ ಚಲನಚಿತ್ರಗಳನ್ನು ತರುತ್ತದೆ. 2021ನ್ನು ಕೋವಿಡ್ ನೆಪವೊಡ್ಡಿ ನಾವೆಲ್ಲರೂ ಸುಲಭವಾಗಿ ಮರೆಯಬಹುದಾದರೂ, ಮುಂಬರುವ ವರ್ಷದಲ್ಲಿ ಇನ್ನಷ್ಟು ಆಹ್ಲಾದಕರ ಆಶ್ಚರ್ಯಗಳ ಭರವಸೆಯೊಂದಿಗೆ 2022ರ ಭರವಸೆಯ ಟಿಪ್ಪಣಿ ಪ್ರಾರಂಭವಾಗಿದೆ. ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಮರುಶೋಧಿಸಿದ ಮತ್ತು ಹಳೆಯ ಕಾಲದಂತೆಯೇ ಅವರನ್ನು ಆಕರ್ಷಿಸಿದ ಟಾಪ್ 10 ಚಲನಚಿತ್ರಗಳನ್ನು ನೋಡೋಣ.

1. ಗರುಡ ಗಮನ ವೃಷಭ ವಾಹನ
ತಾರಗಣ : ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಗೋಪಾಲ್ ದೇಶಪಾಂಡೆ
ಸರಾಸರಿ ರೇಟಿಂಗ್: 4.5
ಬಳಕೆದಾರರ ರೇಟಿಂಗ್ :4.8
ವಿಧಾನ : ಕ್ರೈಮ್, ಡ್ರಾಮಾ ಸಿನಿಮಾ
ಸರ್ಟಿಫಿಕೇಟ್ : ಎ
ಬಿಡುಗಡೆಯಾದ ದಿನಾಂಕ : 19 ನವೆಂಬರ್ 2021
ಸಿನಿಮಾ ಅವಧಿ : 2 ಗಂಟೆ 31 ನಿಮಿಷಗಳು
ಸಿನಿಮಾ ಸಾರಾಂಶ : ಸಿಟಿ ಆಫ್ ಗಾಡ್ ಅಥವಾ ಅಂಗಮಾಲಿ ಡೈರೀಸ್ ಬಗ್ಗೆ ತಲೆ ಕೆಡಿಸಿಕೊಳ್ಳುವವರಿಗೆ ಬಹುತೇಕ ಉತ್ತರ ಎಂಬಂತೆ ಈ ಚಿತ್ರ ನಿರ್ಮಾಣವಾಗಿದೆ. ಶಿವ ಮತ್ತು ಹರಿ ಪಾತ್ರಗಳು ಚಲನಚಿತ್ರದಲ್ಲಿ ಶಾಶ್ವತವಾದ ಪ್ರಭಾವವನ್ನು ಬೀರುತ್ತಾರೆ. ಥಿಯೇಟರ್ನಲ್ಲಿ ಶಿಳ್ಳೆ ಹೊಡೆಯಲು ಮತ್ತು ನಟರೊಂದಿಗೆ ಎದ್ದು ಕುಣಿಯಲು ಇದು ಅನೇಕ ಅವಕಾಶಗಳನ್ನು ನೀಡುತ್ತದೆ. ಕನ್ನಡ ಚಿತ್ರರಂಗದಲ್ಲಿ ಸದಾ ಹೊಸ ಪ್ರಯೋಗಗಳನ್ನು ಮಾಡುವ ಶೆಟ್ಟಿ ಮತ್ತು ತಂಡದವರಿಂದಲೇ ಈ ಸಿನಿಮಾ ಬಂದಿರುವುದು ಜೊತೆಗೆ ಒಳ್ಳೆಯ ರೇಟಿಂಗ್ ಕೂಡ ಪಡೆದು ಕೊಂಡಿರುವುದು ಕನ್ನಡ ಚಿತ್ರರಂಗದಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

 

 

2. ಕೋಟಿಗೊಬ್ಬ-೩
ತಾರಾಗಣ : ಕಿಚ್ಚ ಸುದೀಪ, ಮಡೋನಾ ಸೆಬಾಸ್ಟಿಯನ್, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ, ಪಿ.ರವಿ ಶಂಕರ್, ನವಾಬ್ ಶಾ
ಸರಾಸರಿ ರೇಟಿಂಗ್: 4.0
ಬಳಕೆದಾರರ ರೇಟಿಂಗ್: 4.9
ಸರ್ಟಿಫಿಕೇಟ್: ಯುಎ
ಬಿಡುಗಡೆಯಾದ ದಿನಾಂಕ : 15 ಅಕ್ಟೋಬರ್ 2021
ಚಿತ್ರದ ಅವಧಿ : 2 ಗಂಟೆ 20 ನಿಮಿಷಗಳು
ಸಾರಾಂಶ: ಕೋಟಿಗೊಬ್ಬ 3 ಒಂದು ಮಾಸ್ ಚಿತ್ರವಾಗಿದ್ದು ಮಾಸ್ ಅಭಿಮಾನಿಗಳನ್ನು ನಿರಾಶೆಗೊಳಿಸಲಾರದು. ಇದು ಬಿಗ್ ಬಜೆಟ್ ಮೂವಿ ಅನ್ನುವುದಕ್ಕಿಂತಲೂ ಕ್ಲಾಸ್ ಸಿನಿಮಾವು ಹೌದು.

 

3. ಪುಕ್ಸಟ್ಟೆ ಲೈಫು
ತಾರಾಗಣ : ಸಂಚಾರಿ ವಿಜಯ್, ಮಾತಂಗಿ ಪ್ರಸನ್, ಅಚ್ಯುತ್ ಕುಮಾರ್, ರಂಗಾಯಣ ರಘು, ಅರವಿಂದ್ ಕುಪ್ಳಿಕರ್
ವಿಮರ್ಶಕರ ರೇಟಿಂಗ್: 4.0
ಬಳಕೆದಾರರ ಸರಾಸರಿ ರೇಟಿಂಗ್:4.7
ವಿಧಾನ : ಹಾಸ್ಯ, ನಾಟಕ
ಸರ್ಟಿಫಿಕೇಟ್ : ಯುಎ
ಬಿಡುಗಡೆಯಾದ ದಿನಾಂಕ : 24 ಸೆಪ್ಟೆಂಬರ್ 2021
ಚಿತ್ರದ ಅವಧಿ : 2 ಗಂಟೆ 5 ನಿಮಿಷಗಳು
ಸಾರಾಂಶ: ಶಾಹಜಹಾನ್ ಒಬ್ಬ ಪ್ರಾಮಾಣಿಕ ಕೀ ಮೇಕರ್, ಸ್ವತಃ ಕಳ್ಳರಿರುವ ಪೊಲೀಸರ ಗುಂಪಿಗೆ ತಾನು ಅಸಂಭವ ಸಹಚರನಾಗುತ್ತಾನೆ. ನಂತರ ಅನೇಕ ಹಾಸ್ಯ ಮತ್ತು ಕೆಲವು ಆಘಾತಗಳೊಂದಿಗೆ ಚಿತ್ರ ಸಾಗುತ್ತದೆ.

 

 

4. ರಾಬರ್ಟ್
ತಾರಾಗಣ : ದರ್ಶನ್, ಆಶಾ ಭಟ್, ಜಗಪತಿ ಬಾಬು, ವಿನೋದ್ ಪ್ರಭಾಕರ್, ದೇವರಾಜ್, ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ, ಪಿ.ರವಿ ಶಂಕರ್, ರವಿ ಕಿಶನ್
ವಿಮರ್ಶಕರ ರೇಟಿಂಗ್: 4.0
ಸರಾಸರಿ ಬಳಕೆದಾರರ ರೇಟಿಂಗ್:4.8
ವಿಧ : ಆಕ್ಷನ್, ಥ್ರಿಲ್ಲರ್, ಡ್ರಾಮಾ
ಸರ್ಟಿಫಿಕೇಟ್: ಯುಎ
ಬಿಡುಗಡೆಯಾದ ದಿನಾಂಕ : 11 ಮಾರ್ಚ್ 2021
ಚಿತ್ರದ ಅವಧಿ : 2 ಗಂಟೆ 48 ನಿಮಿಷಗಳು
ಸಾರಾಂಶ: ಈ ಚಲನಚಿತ್ರವನ್ನು ಮತ್ತಷ್ಟು ಉತ್ತಮಗೊಳಿಸಲು ಒಂದು ಹಾಡು ಅಥವಾ ಎರಡು ಹೆಚ್ಚುವರಿ ಹಾಡುಗಳನ್ನು ತೆಗೆಯಬಹುದಿತ್ತು, ಆದರೆ ಚಿತ್ರವು ಅಂತಿಮವಾಗಿ ಮನರಂಜನೆ ನೀಡುವುದರಿಂದ ಅವುಗಳನ್ನು ಕಡೆಗಣಿಸಬಹುದು. ಅಭಿಮಾನಿಗಳು ರಾಬರ್ಟ್ನಿಂದ ಹಬ್ಬದ ವಾತಾವರಣವನ್ನು ಮತ್ತು ದೊಡ್ಡ ಗೆಲುವುಗಳನ್ನು ನಿರೀಕ್ಷಿಸಿದ್ದರು ಮತ್ತು ಚಿತ್ರವು ಅದನ್ನು ನೀಡುತ್ತದೆ.

 

 

5. ಮದಗಜ
ತಾರಾಗಣ : ಶ್ರೀಮುರಳಿ, ಆಶಿಕಾ ರಂಗನಾಥ್, ಚಿಕ್ಕಣ್ಣ, ಜಗಪತಿ ಬಾಬು, ದೇವಯಾನಿ ಚವ್ಹಾಣ್, ರಂಗಾಯಣ ರಘು
ವಿಮರ್ಶಕರ ರೇಟಿಂಗ್:3.5.
ಬಳಕೆದಾರರ ರೇಟಿಂಗ್:3.7
ವಿಧ : ಆಕ್ಷನ್, ಅಪರಾಧ, ಥ್ರಿಲ್ಲರ್
ಸರ್ಟಿಫಿಕೇಟ್ : ಯುಎ
ಬಿಡುಗಡೆಯಾದ ದಿನಾಂಕ : 03 ಡಿಸೆಂಬರ್ 2021
ಚಿತ್ರದ ಅವಧಿ : 2 ಗಂಟೆ 12 ನಿಮಿಷಗಳು

ಸಾರಾಂಶ: ಮದಗಜ ಇದುವರೆಗೆ ಯಾರೂ ಮಾಡಿರದ ಚಿತ್ರವಲ್ಲ, ಆದರೆ ತಂಡವು ಅದನ್ನು ತೆರೆಯ ಮೇಲೆ ತಂದ ರೀತಿ ಅದ್ಭುತ. ನೀವೊಂದು ಕಮರ್ಷಿಯಲ್, ಸಾಹಸ ಮತ್ತು ಮನರಂಜನಾತ್ಮಕ ಚಿತ್ರವನ್ನು ಬಯಸಿದರೆ ಮದಗಜ ಅದಕ್ಕೆ ಯೋಗ್ಯವಾಗಿದೆ ಎಂದು ಹೇಳಬಹುದು.

 

 

6. ಸಕತ್
ತಾರಾಗಣ : ಗಣೇಶ್, ನಿಶ್ವಿಕಾ ನಾಯ್ಡು, ಸಾಧು ಕೋಕಿಲ, ರಂಗಾಯಣ ರಘು, ಮಾಳವಿಕಾ ಅವಿನಾಶ್, ಶೋಬರಾಜ್, ಸುರಭಿ
ವಿಮರ್ಶಕರ ರೇಟಿಂಗ್:3.5
ಬಳಕೆದಾರರ ರೇಟಿಂಗ್:3.9
ವಿಧ : ಹಾಸ್ಯ, ಸಂಗೀತ, ಪ್ರಣಯ
ಸರ್ಟಿಫಿಕೇಟ್ : ಯುಎ
ಬಿಡುಗಡೆಯಾದ ದಿನಾಂಕ :26 ನವೆಂಬರ್ 2021
ಚಿತ್ರದ ಅವಧಿ : 2 ಗಂಟೆ 27 ನಿಮಿಷಗಳು
ಸಾರಾಂಶ: ಮೊದಲಾರ್ಧ ಅದ್ಬುತವಾಗಿದ್ದರೆ ದ್ವಿತಿಯಾರ್ಧ ಸಮಯ ತೆಗೆದುಕೊಂಡಂತೆ ಭಾಸವಾಗುತ್ತದೆ. ನ್ಯಾಯಾಲಯದಲ್ಲಿ ಸಾಕ್ಷಿ ಪೂರೈಸುವ ಹಿನ್ನಲೆಯಲ್ಲಿ ದ್ವಿತಿಯಾರ್ಧ ಕಥೆ ಸಾಗುತ್ತದೆ. ಥಿಯೇಟರ್ನಲ್ಲಿ ನೋಡಲೇ ಬೇಕಾದ ಸಿನಿಮಾ ಇದಾಗಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಬ್ಯೂಟಿಫುಲ್ ಸ್ಮೈಲ್ ನೊಂದಿಗೆ ಚಿತ್ರ ಪ್ರೇಕ್ಷಕರ ಗಮನ ಸೆಳೆಯುತ್ತದೆ.

 

 

7.ಅಮೃತ್ ಅಪಾರ್ಟ್ಮೆಂಟ್
ತಾರಾಗಣ : ತಾರಕ್ ಪೊನ್ನಪ್ಪ, ಬಾಲಾಜಿ ಮನೋಹರ್, ಸಂಪತ್, ಸೀತಾ, ಮಾನಸ ಜೋಶಿ
ವಿಮರ್ಶಕರ ರೇಟಿಂಗ್:3.5Avg.
ಬಳಕೆದಾರರ ರೇಟಿಂಗ್:3.8
ವಿಧ : ನಾಟಕ
ಸರ್ಟಿಫಿಕೇಟ್ : ಯುಎ
ಬಿಡುಗಡೆಯಾದ ದಿನಾಂಕ : 26 ನವೆಂಬರ್ 2021 |
ಚಿತ್ರದ ಅವಧಿ : 2 ಗಂಟೆ 13 ನಿಮಿಷಗಳು
ಸಾರಾಂಶ: ಅಮೃತ್ ಅಪಾರ್ಟ್ಮೆಂಟ್ ಬೆಂಗಳೂರಿನ ಗೌರವಾರ್ಥ ನಿರ್ಮಿಸಿದ ಚಿತ್ರವಾಗಿದೆ. ನಿರ್ದೇಶಕ ಗುರುರಾಜ ಕುಲಕರ್ಣಿಯವರ ಚೊಚ್ಚಲ ನಿರ್ದೇಶನದ ಸಿನಿಮಾವು ಹೌದು. ಜೊತೆಗೆ ಬೆಂಗಳೂರು ನಗರದ ರೋಮಾಂಚಕ, ಕೌತುಕ, ನಗರಜೀವನ ಇತ್ಯಾದಿಗಳನ್ನು ಪ್ರತಿಬಿಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದೇ ಹೇಳಬಹುದು.

 

 

8. 100
ತಾರಾಗಣ : ರಮೇಶ್ ಅರವಿಂದ್, ರಚಿತಾ ರಾಮ್, ರಾಜು ತಾಳಿಕೋಟೆ, ಅಮಿತಾ ರಂಗನಾಥ್, ಪ್ರಕಾಶ್ ಬೆಳವಾಡಿ
ವಿಮರ್ಶಕರ ರೇಟಿಂಗ್:3.5Avg.
ಬಳಕೆದಾರರ ರೇಟಿಂಗ್:3.3
ವಿಧ : ಅಪರಾಧ, ಕುಟುಂಬ, ಥ್ರಿಲ್ಲರ್
ಸರ್ಟಿಫಿಕೇಟ್ : ಯುಎ
ಬಿಡುಗಡೆಯಾದ ದಿನಾಂಕ : 19 ನವೆಂಬರ್ 2021
ಚಿತ್ರದ ಅವಧಿ : 2 hrs 0 mins
ಸಾರಾಂಶ:100 ಸಾಮಾಜಿಕ ಜಾಲತಾಣಗಳು ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸುವ ಒಂದೊಳ್ಳೆಯ ಸಂದೇಶವಿರುವ ಚಿತ್ರ. ಕುಟುಂಬ ಸಮೇತ ಕುಳಿತು ನೋಡುವ ಸಿನಿಮಾ.

 

9. ಭಜರಂಗಿ-೨
ತಾರಾಗಣ : ಶಿವ ರಾಜ್ಕುಮಾರ್, ಭಾವನಾ, ಸೌರವ್ ಲೋಕೇಶ್
ವಿಮರ್ಶಕರ ರೇಟಿಂಗ್:3.5Avg.
ಬಳಕೆದಾರರ ರೇಟಿಂಗ್:3.3
ವಿಧ : ನಾಟಕ
ಸರ್ಟಿಫಿಕೇಟ್ : ಯುಎ
ಬಿಡುಗಡೆಯಾದ ದಿನಾಂಕ : 29 ಅಕ್ಟೋಬರ್ 2021
ಚಿತ್ರದ ಅವಧಿ : 2 ಗಂಟೆ 33 ನಿಮಿಷಗಳು
ಸಾರಾಂಶ: ಭಜರಂಗಿ ಮೊದಲ ಚಿತ್ರಕ್ಕೆ ಹೋಲಿಸಿದರೆ ಸ್ವಲ್ಪ ಜಾಸ್ತಿ ಕಾಲಮಿತಿಯ ಚಿತ್ರ. ಆದರೆ ಒಳ್ಳೆಯ ಅನುಭವ ಕೊಡುವ ಚಿತ್ರ. ಎಲ್ಲಾ ವಯಸ್ಸಿನ ಜನ ಕುಳಿತು ಆನಂದಿಸಬಹುದಾದ ಚಿತ್ರ.

 

10. ಸಲಗ
ತಾರಾಗಣ : ದುನಿಯಾ ವಿಜಯ್, ಧನಂಜಯ, ಸಂಜನಾ ಆನಂದ್, ಅಚ್ಯುತ್ ಕುಮಾರ್
ವಿಮರ್ಶಕರ ರೇಟಿಂಗ್:3.5Avg.
ಬಳಕೆದಾರರ ರೇಟಿಂಗ್:3.7
ವಿಧ : ಅಪರಾಧ, ಥ್ರಿಲ್ಲರ್
ಸರ್ಟಿಫಿಕೇಟ್ : ಎ
ಬಿಡುಗಡೆಯಾದ ದಿನಾಂಕ : 14 ಅಕ್ಟೋಬರ್ 2021
ಚಿತ್ರದ ಅವಧಿ : 2 ಗಂಟೆ 8 ನಿಮಿಷಗಳು
ಸಾರಾಂಶ:ಸಲಗವು ದುನಿಯಾ ವಿಜಯ್ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ, ಬೆಂಗಳೂರಿನ ಪಾತಕ ಲೋಕದ ಕಥೆಯನ್ನು ಹೇಳುವ ಪ್ರಯತ್ನ ಇಲ್ಲಿದೆ. ಆದರೆ ಅನೇಕರಿಗೆ ಕಥೆಯ ಅಂತ್ಯ ಇಷ್ಟವಾಗುವುದಿಲ್ಲ. ಉಳಿದಂತೆ ಗ್ರಾಮೀಣ ಪ್ರತಿಭೆಗಳು ಹೊಸ ತಂಡ ಹೊಸ ಪ್ರಯೋಗದೊಂದಿಗೆ ಚಿತ್ರ ಮೂಡಿ ಬಂದಿದೆ.
2022ರಲ್ಲಿ ಈಗಾಗಲೇ ಅನೇಕ ಸಿನಿಮಾ ತೆರೆ ಮೇಲೆ ಬರಲು ಸಿದ್ದವಾಗಿದ್ದು ಅವೆಲ್ಲವೂ ಮುಂದಿನ ವರ್ಷದ ಟಾಪ್ ರೇಟಿಂಗ್ಸ್ನಲ್ಲಿ ಕಾಣಸಿಗುವಂತಾಗಲಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top