fbpx
ಸಮಾಚಾರ

2021ರಲ್ಲಿ ಗೂಗಲ್ ನಲ್ಲಿ ಭಾರತೀಯರು ಅತೀ ಹೆಚ್ಚು ಸರ್ಚ್ ಮಾಡಿದ ವಿಷಯ ಯಾವುದು ಗೊತ್ತಾ? ಗೂಗಲ್ ಕೊಟ್ಟ ರಿಪೋರ್ಟ್ನಲ್ಲಿ ಬಯಲಾಯ್ತು ಸತ್ಯ

2021ರಲ್ಲಿ ಗೂಗಲ್ ನಲ್ಲಿ ಭಾರತೀಯರು ಅತೀ ಹೆಚ್ಚು ಸರ್ಚ್ ಮಾಡಿದ ವಿಷಯ ಯಾವುದು ಗೊತ್ತಾ? ಗೂಗಲ್ ಕೊಟ್ಟ ರಿಪೋರ್ಟ್ನಲ್ಲಿ ಬಯಲಾಯ್ತು ಸತ್ಯ

ಮೊಬೈಲ್ ಲ್ಯಾಪ್‌ಟಾಪ್ ಯುಗದಲ್ಲಿ ನಾವಿರುವಾಗ ದಿನನಿತ್ಯ ಸಾವಿರಾರು ವಿಚಾರಗಳನ್ನು ಸರ್ಚ್ ಮಾಡಿರುತ್ತೇವೆ. ಅದರಲ್ಲೂ ಸರ್ಚ್ ಇಂಜಿನ್ ಗೂಗಲ್ ಎಲ್ಲರ ಅಚ್ಚುಮೆಚ್ಚಿನ ತಾಣ. ಇವತ್ತಿನ ದಿನಕ್ಕೆ ಗೂಗಲ್ನಲ್ಲಿ ಸಿಗದೇ ಇರುವ ಮಾಹಿತಿ ಬಹಳ ಕಡಿಮೆ. ಹೀಗಿರುವಾಗ ಜನ ಯಾವ ವಿಚಾರವನ್ನು ಹೆಚ್ಚು ಸರ್ಚ್ ಮಾಡುತ್ತಾರೆ ಅನ್ನುವ ಕುತೂಹಲ ಸಹಜವಾಗಿದ್ದೇ.

ಇದೀಗ ಗೂಗಲ್ ಭಾರತದಲ್ಲಿ 2021ರಲ್ಲಿ ಅತೀ ಹೆಚ್ಚು ಹುಡುಕಾಟಕ್ಕೊಳಗಾದ ವಿಷಯಗಳನ್ನು ಪಟ್ಟಿ ಮಾಡಿ ರೀಸ್ಟೋರ್ ಮಾಡಿದೆ. ಹಾಗಾದರೆ ನಿಜವಾಗಿಯೂ ಭಾರತೀಯರು ಯಾವ ವಿಷಯವನ್ನು ಗೂಗಲ್‌ನಲ್ಲಿ ಹೆಚ್ಚಾಗಿ ಸರ್ಚ್ ಮಾಡಿದ್ದಾರೆ ನೋಡೋಣ.

ಭಾರತದಲ್ಲಿ ಇಲ್ಲಿಯವರೆಗೆ 2021ರಲ್ಲಿ ಭಾರತೀಯರು ಸರ್ಚ್ ಮಾಡಿರುವ ವಿಷಯಗಳಲ್ಲಿ ಕ್ರಿಕೆಟ್ ಅಗ್ರಸ್ಥಾನದಲ್ಲಿದೆ. ಐಪಿಎಲ್, ಐಸಿಸಿ ಟಿ-20 ವಿಶ್ವಕಪ್ ಗಳ ಬಗ್ಗೆಯೇ ಅತ್ಯಧಿಕ ಜನ ಈ ಸರ್ಚ್ ಇಂಜಿನ್‌ನಲ್ಲಿ ಹುಡುಕಾಡಿದ್ದಾರೆ.
ಇನ್ನು ಕೋಪಾ ಮತ್ತು ಯುರೋ ಫುಟ್ಬಾಲ್ ಪಂದ್ಯಾವಳಿಯ ಸಂದರ್ಭದಲ್ಲಿಯೂ ಅವುಗಳ ಬಗ್ಗೆ ಹೆಚ್ಚು ಸರ್ಚ್ ಗಳಾಗಿವೆ. ಟೋಕಿಯೋ ಹೀರೋ ನೀರಜ್ ಚೋಪ್ರಾ ಬಗ್ಗೆಯೂ ಭಾರತೀಯ ನೆಟ್ಟಿಗರು ಅತೀ ಹೆಚ್ಚು ಹುಡುಕಾಡಿದ್ದಾರೆ.

 

 

ಇನ್ನೂ ಕೋವಿಡ್ ಅವಧಿಯಲ್ಲಿ ವ್ಯಾಕ್ಸಿನ್ ಬಗ್ಗೆಯೂ ಜನ ಹೆಚ್ಚು ಹುಡುಕಾಡಿದ್ದಾರೆ. ಇನ್ನು ಒಂದಿಷ್ಟು ಭಾರತೀಯರ್ ಫ್ರೀ ಫೈರಿಂಗ್ ಗೇಮ್ ಗಳ ಬಗ್ಗೆಯೂ ಜಾಸ್ತಿ ತಲೆ ಕೆಡಿಸಿಕೊಂಡಿದ್ದು ಇದು ಟ್ರೆಂಡಿಂಗ್ ಪಟ್ಟಿ ಸೇರಿಕೊಂಡಿದೆ. How to? ಮತ್ತು what ? ಪ್ರಶ್ನೆಗಳೂ ಅತೀ ಹೆಚ್ಚು ಕೋವಿಡ್ ಮತ್ತು ವ್ಯಾಕ್ಸಿನ್ ಸಂಬಂಧಿತವೇ ಆಗಿದ್ದು ವಾಟ್ ಈಸ್ ಬ್ಲಾಕ್ ಫಂಗಸ್ ಅನ್ನುವುದೂ ಟ್ರೆಂಡಿಂಗ್ ಸರ್ಚ್ ಲಿಸ್ಟ್ನಲ್ಲಿದೆ.

ಪ್ರತೀ ವರ್ಷದಂತೆ ಬಾಲಿವುಡ್ ಬಗ್ಗೆಯೂ ಸರ್ಚ್ ನಡೆದಿದ್ದು ಶಾರುಖ್ ಮಗ ಆರ್ಯಾನ್ ಖಾನ್, ವಿಕ್ಕಿ ಕೌಶಲ್, ಶೆಹನಾಜ್ ಗಿಲ್, ರಾಜ್ ಕುಂದ್ರಾರನ್ನು ಜನ ಹೆಚ್ಚಾಗಿ ಗೂಗಲ್ನಲ್ಲಿ ಹುಡುಕಿದ್ದಾರೆ.

 

 

ಅತೀ ಹೆಚ್ಚು ಹುಡುಕಾಟಕ್ಕೊಳಗಾದ ಚಿತ್ರಗಳ ಪಟ್ಟಿ ನೋಡುವುದಾದರೆ ಜೈ ಭೀಮ್ ಚಿತ್ರ ಅಗ್ರಸ್ಥಾನ ಪಡೆದುಕೊಂಡಿದೆ. ಭಾರತದ ನೆಟ್ಟಿಗರನ್ನು ಸೆಳೆಯುವಲ್ಲಿ ಈ ಪ್ರಾದೇಶಿಕ ಚಿತ್ರ ಯಶಸ್ವಿಯಾಗಿದೆಯೆಂದೇ ಹೇಳಬಹುದು.

ಎನೋಕಿ ಮಶ್ರೂಮ್ ಖಾದ್ಯದ ಬಗ್ಗೆ ಈ ಬಾರಿ ಜನ ಅತೀ ಹೆಚ್ಚು ಹುಡುಕಾಡಿದ್ದಾರೆ. ಈ ರೆಸಿಪಿ ತಯಾರಿಸುವ ಬಗ್ಗೆ ಭಾರತೀಯರು ಆಸಕ್ತಿ ತಳೆದಿದ್ದು ಖಾದ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಹೀಗೆ ಭಾರತೀಯರು ತಮ್ಮ ಅಭಿರುಚಿಯನ್ನು ಗೂಗಲ್ನಲ್ಲಿ ಸರ್ಚ್ ಮಾಡಿ ನೋಡಿದ್ದಾರೆ. ಇವಿಷ್ಟು 2021ರಲ್ಲಿ ಭಾರತೀಯರು ಹುಡುಕಾಡಿದ ಟಾಪ್ ಸರ್ಚ್ ಗಳು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top