fbpx
ಸಮಾಚಾರ

ಮೇಷ್ಟ್ರ ಮೇಲೆ ಪುಂಡಾಟ ಮಾಡಿದ್ದ ಹುಡುಗ ಕಾಲಿಗೆ ಬಿದ್ದು ಬಿಕ್ಕಿ ಬಿಕ್ಕಿ ಅತ್ತ: ವಿಡಿಯೋ ನೋಡಿ

ಶಿಕ್ಷಕರ ಮೇಲೆ ಹಲ್ಲೆ ನಡೆಸಿ ಪುಂಡಾಟ ಮೆರೆದಿದ್ದ ಹುಡುಗ ಇದೀಗ ಶಿಕ್ಷಕರ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಘಟನೆ ವರದಿಯಾಗಿದೆ. ಕ್ಷಮೆ ಕೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 

 

ಒಂದೆರಡು ದಿನಗಳ ಹಿಂದೆ ಒಂದಿಷ್ಟು ಜನ ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ಪುಂಡಾಟ ನಡೆಸಿ ಅವರ ಮೇಲೆ ಕಸದ ಡಬ್ಬಿ ಹಾಕಿ ಅತಿರೇಕದಿಂದ ವರ್ತಿಸಿದ್ದರು. ಅಷ್ಟೇ ಅಲ್ಲದೆ ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟು ವೈರಲ್ ಮಾಡಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಊರಿನ ಜನ ಮತ್ತು ಶಿಕ್ಷಕರ ಸಮುದಾಯ ಪುಂಡಾಟ ಮಾಡಿದ್ದ ಹುಡುಗರ ವಿರುದ್ದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಶಿಕ್ಷಕರ ಬಳಿ ಕರೆದೊಯ್ದು ಕಾಲಿಗೆ ಬೀಳಿಸಿ ಇನ್ನು ಮುಂದೆ ಹೀಗೆ ಮಾಡುವುದಿಲ್ಲ, ತಪ್ಪಾಯಿತು ಎಂದು ಕ್ಷಮೆ ಕೇಳಿಸಿದ್ದಾರೆ.

ನಾನಿನ್ನು ಒಂದು ವರ್ಷದಲ್ಲಿ ನಿವೃತ್ತಿ ಹೊಂದಲಿದ್ದೇನೆ. ದೂರು ಕೊಟ್ಟರೆ ಅವರ ಜೀವನ ಹಾಳಾಗುತ್ತದೆ ಎಂದು ಚನ್ನಗಿರಿ ತಾಲೂಕಿನ ನಲ್ಲೂರಿನಲ್ಲಿರುವ ಸರಕಾರಿ ಜೂನಿಯರ್ ಕಾಲೇಜಿನ ಹೈಸ್ಕೂಲ್ ವಿಭಾಗದ ಇಳಿವಯಸ್ಸಿನ ಹಿಂದಿ ಶಿಕ್ಷಕ ಪ್ರಕಾಶ್ ಬೋಗರ್ ಹೇಳುತ್ತಿದ್ದರೆ ಎಂತವರ ಮನಸ್ಸಾದರೂ ಕರಗುತ್ತದೆ.

ಗೊತ್ತಾಗೋಲ್ವೇನೋ, ಮನುಷ್ಯತ್ವ ಇಲ್ವಾ, ನಿನ್ ವಯಸ್ಸೆಷ್ಟು? ಮೇಸ್ಟç ವಯಸ್ಸೆಷ್ಟು? ನಿನ್ ತಂದೆಗಿAತ ೨೦ ವರ್ಷ ದೊಡ್ಡವರಿಗೆ ಹೀಗೆ ಮಾಡ್ತೀಯಲ್ವಾ ನೀನು ಉದ್ದಾರ ಆಗೋಲ್ಲ. ಇನ್ನು ನೀನು ಮಾಡೋ ಕೆಲಸದಿಂದ ಊರಿಗೇ ಕೆಟ್ಟ ಹೆಸರು ಬರುತ್ತದೆ. ಒಳ್ಳೆ ಕೆಲಸ ಮಾಡಿ ಊರಿಗೆ ಒಳ್ಳೆ ಹೆಸರು ತಾ ಎಂದು ವಿದ್ಯಾರ್ಥಿಗೆ ಗ್ರಾಮಸ್ಥರು ಛೀಮಾರಿ ಹಾಕಿ ಬುದ್ದಿ ಹೇಳುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top