fbpx
ಸಮಾಚಾರ

ಐನ್ಸ್ಟೈನ್ ಬೆಳಕಿಗೂ ಭಾರವಿದೆ ಅಂದರೆ ಭಾರತದ ಈ ಹಳ್ಳಿ ಹುಡುಗ ಅದನ್ನು ಪ್ರಯೋಗದ ಮೂಲಕ ನಿರೂಪಿಸಿದ.

ಐನ್ಸ್ಟೈನ್ ಬೆಳಕಿಗೂ ಭಾರವಿದೆ ಅಂದರೆ ಭಾರತದ ಈ ಹಳ್ಳಿ ಹುಡುಗ ಅದನ್ನು ಪ್ರಯೋಗದ ಮೂಲಕ ನಿರೂಪಿಸಿದ… ಅದಕ್ಕೊಂದು ಸಮೀಕರಣ ಬರೆದು ಖಗೋಳ ಭೌತಶಾಸ್ತ್ರದ ಚರಿತ್ರೆಯಾದ ಬಂಗಾಲದ ಶಿಯೋರಟೋಲಿಯೆಂಬ ಸಣ್ಣ ಹಳ್ಳಿಯ ಈ ಬಡ ಹುಡುಗ…

ಸಾಧನೆ ಎಂಬ ಹಸಿವು ತಲೆಯೊಳಗಿದ್ದರೆ ಬದುಕಿನುದ್ದಕ್ಕೂ ಅದೇನೋ ಒಂಥರಾ ಹೊಸ ಹುಮ್ಮಸ್ಸಿರುತ್ತದೆಯಂತೆ. ಇದೇ ವಿಚಾರಕ್ಕೆ ನಮ್ಮ ಕರ್ನಾಟಕದ ಹಳ್ಳಿಯೊಂದಕ್ಕೆ ಕಳೆದ ವರ್ಷ ಭೇಟಿ ಕೊಟ್ಟಾಗ ಪ್ರತ್ಯಕ್ಷವಾಗಿ ಕಣ್ತುಂಬಿಕೊಳ್ಳುವಂತಾಗಿತ್ತು. ಶಿವಮೊಗ್ಗ ಸಮೀಪದ ಪುಟ್ಟ ಹಳ್ಳಿ ಹೆಗ್ಗೋಡಿನ ಬಳಿ ಇರುವ ಶಾಲೆಯ ಪ್ರಯೋಗಾಲಯದ ಸುತ್ತಲೂ ಒಂದು ರೌಂಡ್ ಹೊಡೆದುಕೊಂಡು ಬರೋಣವೆಂದು ಹೊರಟಿದ್ದವರಿಗೆ ಅಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಯೂ ರೋಬೋಟ್ ತಂತ್ರಜ್ಞರಂತೆ ಕಾಣುತ್ತಿದ್ದರು. ಇವರನ್ನೆಲ್ಲಾ ನೋಡುತ್ತಿದ್ದಾಗ ನನಗೆ ಸಹಾ ನೆನಪಾಗುತ್ತಾರೆ. ಅವರದ್ದು ಅದೆಷ್ಟು ಹಳ್ಳಿಯಾಗಿತ್ತೆಂದರೆ ಪ್ರಾಥಮಿಕ ಶಿಕ್ಷಣಕ್ಕೇ ಅವರು ಹತ್ತು ಕಿ.ಮೀ ನಡೆದು ಹೋಗಬೇಕಾಗಿತ್ತು. ಅಂದ ಹಾಗೆ ಹಳ್ಳಿಯಿಂದ ದಿಲ್ಲಿಯನ್ನೂ ಮೀರಿ ಜಾಗತಿಕ ವಿಜ್ಞಾನ ಲೋಕದಲ್ಲಿ ಹೆಸರು ಮಾಡಿದ ಆ ಶ್ರೇಷ್ಠ ವಿಶೇಷ ಜ್ಞಾನಿಯ ಹೆಸರು ಮೇಘನಾದ ಸಹಾ.

ಸಾಹ ವೃತ್ತಿ ಜೀವನ ಶುರು ಮಾಡಿದ್ದು ಗಣಿತಶಾಸ್ತ್ರದಲ್ಲಾದರೂ ಸಾಧಿಸಿದ್ದು ಭೌತಶಾಸ್ತ್ರದಲ್ಲಿ. ಅವರಿದ್ದ ಸ್ಥಳ ಅದೆಷ್ಟು ಹಳ್ಳಿಯಾಗಿತ್ತೆಂದರೆ ಆ ಊರಿನಲ್ಲಿ ಪ್ರಯೋಗಾಲಯಗಳಿರಲಿಲ್ಲ. ಸೂಕ್ತ ಸಲಕರಣೆಗಳಿರಲಿಲ್ಲ. ಇದ್ದ ಅಲ್ಪ ಸ್ವಲ್ಪ ಸಲಕರಣೆ ಮತ್ತು ಬೆಂಬಿಡದ ಛಲದಿಂದ ಸಣ್ಣಪುಟ್ಟ ಪ್ರಯೋಗಗಳನ್ನು ಮಾಡಿ ಪತ್ರಿಕೆಗಳನ್ನು ಬರೆಯುತ್ತಿದ್ದರು. ಆಗಲೇ ಇವರ ಅದೃಷ್ಟದ ಬಾಗಿಲು ತೆರೆದಿದ್ದು.

1919ರ ಹಾರ್ವರ್ಡ್ ಕ್ಲಾಸಿಫಿಕೇಶನ್ ಆಫ್ ಸ್ಟೆಲ್ಲಾರ್ ಸ್ಪೆಕ್ಟ್ರಾ ಕುರಿತಾಗಿ ಇವರು ಬರೆದ ಪ್ರಬಂಧಕ್ಕೆ ಪ್ರೇಮ್ ಚಂದ್ ರಾಯ್ ಚಂದ್ ವಿದ್ಯಾರ್ಥಿ ವೇತನ ಒದಗಿಬಂತು. ಇದೇ ವಿದ್ಯಾರ್ಥಿ ವೇತನ ಅವರನ್ನು ಯುರೋಪಿನಾದ್ಯಂತ ಸುತ್ತಿಸಿತು. ಮಾತ್ರವಲ್ಲದೇ ಫೌಲರ್ ಮತ್ತು ವಾಲ್ಟರ್ ಎಂಬ ಆಗಿನ ಕಾಲದ ಶ್ರೇಷ್ಠ ವಿಜ್ಞಾನಿಗಳ ಜೊತೆ ಕೆಲಸ ಮಾಡುವ ಅವಕಾಶ ದೊರಕಿಸಿ ಕೊಟ್ಟಿತು. ಮರುವರ್ಷವೇ ಸಹಾ ಥರ್ಮಲ್ ಅಯಾನೀಕರಣ ಸಿದ್ದಾಂತವನ್ನು ರೂಪಿಸಿ ಜಗತ್ತಿಗೆ ಬಳುವಳಿಯಾಗಿ ಕೊಟ್ಟರು.
ಉಷ್ಣ ಅಥವಾ ಸಹಾ ಸಮೀಕರಣವೆಂದು ಕರೆಯಲ್ಪಡುವ ಈ ಸಮೀಕರಣವು ಖಗೋಳ ಭೌತಶಾಸ್ತ್ರ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ ಸಮೀಕರಣ. ಐನ್ಸ್ಟೈನ್ ಬೆಳಕಿಗೆ ಭಾರವಿದೆ ಎಂದಷ್ಟೇ ಹೇಳಿದ್ದರು. ಆದರೆ ಸಹಾ ಅದನ್ನು ಪ್ರಯೋಗಗಳ ಮೂಲಕ ನಿರೂಪಿಸಿ ತೋರಿಸಿದರು. ನಕ್ಷತ್ರಗಳಲ್ಲಿರುವ ವಸ್ತುವನ್ನು ಪತ್ತೆ ಹಚ್ಚಲು ಸೂರ್ಯನ ಬೆಳಕಿಗೆ ಪರಮಾಣುಗಳು ಒಡೆಯುತ್ತವೆ ಎನ್ನುವ ತತ್ವವನ್ನು ವಿವರಿಸಿದರು.

ಎಂ ಎಸ್ಸಿಯಲ್ಲಿ ಭಾರತದ ಮೊಟ್ಟಮೊದಲ ಪರಮಾಣು ಭೌತಶಾಸ್ತ್ರ ಪಠ್ಯಕ್ರಮವನ್ನು ಸಹಾ ವಿನ್ಯಾಸಗೊಳಿಸಿದ್ದರು. ಭಾರತ ಪರಮಾಣು ಶಕ್ತಿಯ ಬಳಕೆಯನ್ನು ಶಾಂತಿಯ ಕಾರಣಕ್ಕೆ ಮಾಡಲೇ ಬೇಕೆನ್ನುವ ಬಲವಾದ ಆಶಯ ಹೊಂದಿದ್ದ ದೇಶ ಕಂಡ ಅಪರೂಪದ ಭೌತ ಶಾಸ್ತ್ರಜ್ಞ, ಗಣಿತಶಾಸ್ತ್ರಜ್ಞರಾಗಿ ಭಾರತದ ಖಗೋಳ ವಿಜ್ಞಾನಕ್ಕೆ ಅಡಿಪಾಯ ಹಾಕಿದ್ದು ಸಹಾ.

ಒಬ್ಬ ವಿಜ್ಞಾನಿ ಆದ ಮಾತ್ರಕ್ಕೆ ವಿಜ್ಞಾನಿಯಾಗಿಯೇ ಉಳಿಯದೆ ರಾಜಕಾರಣಿಯೂ ಆಗಿದ್ದರು. ರಾಜ್ಯ ಸಭಾ ಸದಸ್ಯರಾಗಿದ್ದ ಸಹಾ ತನ್ನ ಕೊನೆಯುಸಿರೆಳೆದಿದ್ದು ರಾಜಭವನದಲ್ಲಿ ಅಧಿಕಾರದಲ್ಲಿದ್ದಾಗಲೇ ಎಂಬುದು ವಿಧಿ ನಿಯಮ.
ಸಹಾ ಬರೆದ ಸಮೀಕರಣ ನಮಗೆ ಸಾಮಾನ್ಯವಾಗಿ ಕಾಣಬಹುದು. ಆದರೆ ಇಂಗ್ಲಿಷ್ ಖಗೋಳಶಾಸ್ತ್ರಜ್ಞ ಮತ್ತು ಭೌತವಿಜ್ಞಾನಿ ಆರ್ಥರ್ ಸ್ಟಾನ್ಲಿ ಎಡ್ಡಿಂಗ್ಟನ್, ಸಹಾ ಸಮೀಕರಣವನ್ನು ದೂರದರ್ಶಕದ ಆವಿಷ್ಕಾರದ ನಂತರ ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದಲ್ಲಿ ಮಾಡಿದ ಹತ್ತನೇ ಅತ್ಯಂತ ಮಹೋನ್ನತ ಆವಿಷ್ಕಾರವೆಂದು ಪರಿಗಣಿಸಿದ್ದಾರೆ. 1608 ರಲ್ಲಿ ಗೆಲಿಲಿಯೊ ನಡೆಸಿದ್ದ ಸ್ಪೆಕ್ಟ್ರೋಸ್ಕೋಪಿ, ಸೌರ ರೇಡಿಯೋ ಹೊರಸೂಸುವಿಕೆ, ಆಣ್ವಿಕ ವಿಘಟನೆ, ಅಯಾನುಗೋಳದಲ್ಲಿ ರೇಡಿಯೊ ತರಂಗಗಳ ಪ್ರಸರಣ, ವಿಕಿರಣ ಒತ್ತಡ ಮತ್ತು ಬೀಟಾ ವಿಕಿರಣಶೀಲತೆ ಮುಂತಾದ ಇತರ ವಿಷಯಗಳ ಕುರಿತು ವೈಜ್ಞಾನಿಕ ಸಮುದಾಯಕ್ಕೆ ಸರಳ ರೀತಿಯಲ್ಲಿ ವಿವರಿಸುವಲ್ಲಿ ಮತ್ತು ಅರ್ಥೈಸುವಲ್ಲಿ ಇದು 1920-50ರ ಕಾಲಘಟ್ಟದಲ್ಲಿ ಸಹಕಾರಿಯಾಗಿತ್ತು.

ಕೆಲವೊಂದು ಸಿದ್ದಾಂತ ಆಧಾರಿತ ವಿಚಾರಗಳಿಂದ ಕಡೆಗಣಿಸಲ್ಪಟ್ಟಿದ್ದರೂ ಸಹಾ ಭಾರತಕ್ಕೆ ಕೊಟ್ಟ ಕೊಡುಗೆಯೂ ಸಣ್ಣದೇನಲ್ಲ. ಭಾರತದ ನದಿಕಣಿವೆ ಯೋಜನೆಗಳು ಅದರಲ್ಲೂ ದಾಮೋದರ ನದಿ ಕಣಿವೆ ಯೋಜನೆಯ ಮುಖ್ಯ ಶಿಲ್ಪಿ ಇವರೇ… ನೋಬೆಲ್ ಪ್ರಶಸ್ತಿಗೆ ಭಾಜನರಾಗಿಲ್ಲವಾದರೂ ಆರು ಬಾರಿ ಇವರ ಹೆಸರು ನಾಮನಿರ್ದೇಶನಗೊಂಡಿತ್ತು ಎನ್ನುವುದು ಗಮನಿಸಲೇ ಬೇಕು. ಖಗೋಳ ಭೌತಶಾಸ್ತ್ರದ ನೋಬೆಲ್ ಪಾರಿತೋಷಕಕ್ಕೆ ಇವರ ಸಮೀಕರಣವೇ ಮುನ್ನುಡಿ ಬರೆದಿದ್ದು ಎಂಬುದು ಮರೆಯಲಾಗದು.
ಬಡ ಕುಟುಂಬದಿಂದ ಮೇಲೆ ಬಂದು ಭಾರತದ ಮೊದಲ ನ್ಯೂಕ್ಲಿಯರ್ ಸಿಲೆಬಸ್ ಬರೆದ ಮೇಘನಾದ ಸಹಾಗೆ ನಮ್ಮ ಕಡೆಯಿಂದ ಚಿಕ್ಕ ಬರಹದ ಅರ್ಪಣೆ….

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top