fbpx
ಸಮಾಚಾರ

ಸಂಸದ ಜಿಸಿ ಚಂದ್ರಶೇಖರ್ ಕನ್ನಡ ಭಾಷಣಕ್ಕೆ ಮನಸೋತ ಸಂಸತ್ ಅನುವಾದಕ

ಕನ್ನಡ ಭಾಷೆಯ ಮೇಲೆ ಸಂಸದ ಜಿಸಿ ಚಂದ್ರಶೇಖರ್ ಅವರಿಗೆ ಅತಿಯಾದ ಪ್ರೀತಿ, ಅಭಿಮಾನ ಇರೋ ವಿಚಾರ ಹೊಸದೇನಲ್ಲ. ತಾವು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಪಡೆದ ಕ್ಷಣದಿಂದಲೂ ಸಂಸತ್ ಒಳಗೆ ಕನ್ನಡ ಕಹಳೆ ಮೊಳಗಿಸುತ್ತಲೇ ಇದ್ದಾರೆ. ಪ್ರತೀ ಸಲ ಸಂಸತ್ ಕಲಾಪ ನಡೆದಾಗಲೂ ಕನ್ನಡ ಭಾಷಣ ಮಾಡುವ ಜಿಸಿ ಚಂದ್ರಶೇಖರ್ ಈವರೆಗೆ ಕನ್ನಡಿಗರ ಸಾಕಷ್ಟು ಗಂಭೀರ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುತ್ತಾರೆ.

ಅಂತೆಯೇ, ಪ್ರಾಂತೀಯ ಭಾಷೆಗಳ ಮೇಲೆ ಕೇಂದ್ರ ಸರ್ಕಾರ ತೋರುತ್ತಿರುವ ತಾರತಮ್ಯ ನೀತಿ ಬಗ್ಗೆ ನೆನ್ನೆ ರಾಜ್ಯಸಭೆಯಲ್ಲಿ ಕರ್ನಾಟಕದ ಸಂಸದ ಜಿಸಿ ಚಂದ್ರಶೇಖರ್ ಮಾತನಾಡಿದ್ದರು. ಕನ್ನಡ ಭಾಷೆಯ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಬೇಕೆಂದು ಆಗ್ರಹಿಸಿ ಜಿಸಿ ಚಂದ್ರಶೇಖರ್ ಅವರು ಕನ್ನಡದಲ್ಲಿ ಮಾತನಾಡಿದ್ದರು. ಅವರ ಕನ್ನಡ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

 

 

ಜಿಸಿ ಚಂದ್ರಶೇಖರ್ ಅವರ ಕನ್ನಡ ಭಾಷಣಕ್ಕೆ ಕನ್ನಡಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಮದ್ಯೆ ಸಂಸತ್ ನಲ್ಲಿ ಅನುವಾದಕರಾಗಿ ಕಾರ್ಯ ನಿರ್ವಹಿಸುವ ಅನುವಾದಕರೊಬ್ಬರು ಜಿಸಿ ಚಂದ್ರಶೇಖರ್ ಅವರ ಕನ್ನಡ ಭಾಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೌದು, ನೆನ್ನೆಯ ಕಳಪೆ ಮುಗಿದ ಬಳಿಕ ರಾಜ್ಯಸಭೆಯ ಕನ್ನಡ ಅನುವಾದಕ ಶೋಭಿತ್ ಎಂಬುವವರು ಚಂದ್ರಶೇಖರ್ ಅವರಿಗೆ ಸಂದೇಶ ಕಳುಹಿಸುವ ಮೂಲಕ ಸಂಸದರ ಕನ್ನಡ ಪ್ರೇಮಕ್ಕೆ ಸೆಲ್ಯೂಟ್ ಹೊಡೆದಿದ್ದಾರೆ.

 

 

ಅನುವಾದಕ ಶೋಭಿತ್ ಮೆಚ್ಚುಗೆ ಸೂಚಿಸಿದ ಬಗ್ಗೆ ಸ್ವತಃ ಸಂಸದ ಜಿಸಿ ಚಂದ್ರಶೇಖರ್ ಅವರೇ ತಮ್ಮ ಫೇಸ್ಬುಕ್ ಖಾತೆಯಲ್ಲಿ ತಿಳಿಸಿದ್ದು ಶೋಭಿತ್ ಅವರು ಕಳುಹಿಸಿರುವ ಸಂದೇಶದ ಸ್ಕ್ರೀನ್ ಶಾಟ್ ಅನ್ನು ಕೂಡ ಹಂಚಿಕೊಂಡಿದ್ದಾರೆ. “ತುಂಬಾ ಜನ ನನ್ನ ಕೇಳಿದರು, ನೀವು ಕನ್ನಡದಲ್ಲಿ ಮಾತನಾಡುವ ಬದಲು ಇಂಗ್ಲಿಷ್ ನಲ್ಲಿ ಮಾತನಾಡಿದಿದ್ದರೆ, ಸಂಸತ್ ನಲ್ಲಿದ್ದ ಕನ್ನಡೇತರ ಸಂಸದರಿಗೂ ಅರ್ಥವಾಗುತ್ತಿತ್ತು ಎಂದು. ಆದರೆ ನಿಮಗೆ ತಿಳಿದಿರಲಿ ನಾವು ಕನ್ನಡದಲ್ಲಿ ಮಾತನಾಡುವಾಗ ಕನ್ನಡೇತರಿಗೆ ಅರ್ಥ ಮಾಡಿಸಲೆಂದೇ ಸಂಸತ್ ನಲ್ಲಿ ಅನುವಾದಕರನ್ನು ನೇಮಿಸಿರುತ್ತಾರೆ. ನಾವು ಕನ್ನಡ ಮಾತನಾಡುವ ವೇಳೆ ಅನುವಾದಕರು ಅದೇ ಸಮಯದಲ್ಲಿ ಆಂಗ್ಲ ಅಥವಾ ಅರ್ಥವಾಗುವ ಬೇರೆ ಭಾಷೆಗೆ ಅನುವಾದ ಮಾಡುತ್ತಾರೆ. ಸಂಸತ್ ನಲ್ಲಿ ನಮ್ಮ ನಾಡಿನ ಭಾಷೆ ಕನ್ನಡದಲ್ಲಿ ಮಾತನಾಡುವುದು ಹೆಮ್ಮೆಯ ವಿಷಯ ಎಂಬುದು ನನ್ನ ಅನಿಸಿಕೆ. ಹೆಮ್ಮೆ ಮಾತ್ರವಲ್ಲ ಅತ್ಯಂತ ಖುಷಿಯ ವಿಚಾರ ಕೂಡ ಹೌದು. ಅಷ್ಟಲ್ಲದೇ ದೊಡ್ಡವರು ಹೇಳಿದ್ದಾರಾ, “ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಅದು ಕನ್ನಡ” ಎಂದು.

“ಸದನದ ಇತರ ಸದಸ್ಯರಿಗೆ ಅರ್ಥವಾಗುವಂತೆ ಅನುವಾದ ಮಾಡಿದ ಅನುವಾದಕ ಅಧಿವೇಶನ ಮುಗಿದ ನಂತರ ನಮಗೆ ಕಳುಹಿಸಿದ ವಾಟ್ಸಾಪ್ ಸಂದೇಶವನ್ನು ನಿಮ್ಮ ಜೊತೆಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ.” ಎಂದು ಸಂಸದ ಜಿಸಿ ಚಂದ್ರಶೇಖರ್ ಸಂಕ್ಷಿಪ್ತವಾಗಿ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top