fbpx
ಸಮಾಚಾರ

ನಟಿ ಸಮಂತಾ ವಿರುದ್ಧ ಪುರುಷರ ಸಂಘದಿಂದ ಕೇಸ್ ದಾಖಲು: ಕಾರಣವೇನು?

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಕಳೆದ ಮೂರ್ನಾಲ್ಕು ತಿಂಗಳಿನಿಂದ ತಮ್ಮ ಸಾಂಸಾರಿಕ ಜೀವನದ ಬಗ್ಗೆ ಮಾತ್ರ ಸುದ್ದಿಯಾಗಿದ್ದರು. ಪತಿ ನಾಗಚೈತನ್ಯರಿಂದ ವಿಚ್ಛೇದನ ಪಡೆದ ಬಳಿಕ ತೆರೆ ಮರೆಯಲ್ಲಿದ್ದ ಸಮಂತಾ ಸದ್ಯ ಅಲ್ಲೂ ನಟನೆಯ ಬಹುನಿರೀಕ್ಷಿತ ‘ಪುಷ್ಪ’ ಸಿನಿಮಾದ ಐಟಂ ಹಾಡೊಂದರಲ್ಲಿ ಕುಣಿದು ಸುದ್ದಿಯಾಗಿದ್ದರು. ಆ ಹಾಡು ಕೂಡ ಮೊನ್ನೆತಾನೆ ಬಿಡುಗಡೆಗೊಂಡಿದ್ದು ಪಡ್ಡೆ ಹುಡುಗರ ನಿದ್ದಿಕೆಡಿಸಿದೆ. ಇದೀಗ ಆ ಹಾಡಿಂದಲೇ ನಟಿ ಸಮಂತಾಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಪುರುಷರ ಸಂಘದಿಂದ ಸಮಂತಾ ಅವರ ಸ್ಪೆಷಲ್ ಡ್ಯಾನ್ಸ್ ನಂಬರ್ ಊ ಅಂತಾವಾ ವಿರುದ್ಧ ಕೇಸ್ ದಾಖಲಿಸಲಾಗಿದೆ. ವರದಿಯ ಪ್ರಕಾರ ಹಾಡಿನ ಸಾಹಿತ್ಯ ಮತ್ತು ದೃಶ್ಯಗಳ ಮೂಲಕ ಪುರುಷರನ್ನು ಕಾಮಪ್ರಚೋದಕವಾಗಿ ಚಿತ್ರಿಸುವುದಕ್ಕಾಗಿ ಹಾಡಿನ ವಿರುದ್ಧ ಮೊಕದ್ದಮೆ ಹೂಡಲಾಗಿದೆ. ಹಾಡಿನಲ್ಲಿ ಡ್ಯಾನ್ಸ್ ಮಾಡಿರುವ ಸಮಂತಾ ಅವರ ವಿರುದ್ಧ ದೂರು ದಾಖಲಾಗಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಪುರುಷರ ಸಂಘವು ಆಂಧ್ರಪ್ರದೇಶದ ನ್ಯಾಯಾಲಯದಲ್ಲಿ ಹಾಡನ್ನು ನಿಷೇಧಿಸುವಂತೆ ಒತ್ತಾಯಿಸಿದ್ದು, ನ್ಯಾಯಾಲಯವು ಪ್ರಕರಣವನ್ನು ಇತ್ಯರ್ಥಪಡಿಸಲು ಬಾಕಿಯಿದೆ. ಇದು ಸಮಂತಾ ರುತ್ ಪ್ರಭು ಅವರ ಮೊದಲ ಸ್ಪೆಷಲ್ ಡ್ಯಾನ್ಸ್. ದುರದೃಷ್ಟವಶಾತ್, ಅದರ ಸಾಹಿತ್ಯ ಮತ್ತು ದೃಶ್ಯಗಳಿಂದಾಗಿ ಇದು ವಿವಾದಕ್ಕೆ ಸಿಲುಕಿದೆ. ಈ ಹಾಡು ಕನ್ನಡಲ್ಲಿ ಕೂಡ ಬಿಡುಗಡೆಯಾಗಿದ್ದು ”ಹೂಂ ಅಂತೀಯಾ? ಹೂಹೂಂ ಅಂತೀಯಾ” ಎಂಬ ಸಾಲಿನಿಂದ ಆರಂಭವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top