fbpx
ಸಮಾಚಾರ

ಹಿರಿಯ ನಟ ದ್ವಾರಕೀಶ್ ಗೆ ಸಂಕಷ್ಟ: ಕೋರ್ಟ್ ನಲ್ಲಿ ಭಾರಿ ಮುಖಭಂಗ, ಒಂದು ತಿಂಗಳ ಗಡುವು

ಸ್ಯಾಂಡಲ್​ವುಡ್ ಹಿರಿಯ ನಟ ದ್ವಾರಕೀಶ್​ ಅವರ ವಿರುದ್ಧ ಕೇಳಿಬಂದಿದ್ದ ವಂಚನೆ ಆರೋಪ ವಿಚಾರವಾಗಿ ಅವರಿಗೆ ಭಾರಿ ಹಿನ್ನಡೆಯಾಗಿದೆ.. 50 ಲಕ್ಷ ರೂ. ಸಾಲದ ಪಡೆದು, ಹಣವನ್ನು ವಾಪಸ್ ಕೊಡದೆ ಸತಾಯಿಸುತ್ತಿರುವ ಆರೋಪವಿದ್ದು, ಹಣ ಮರುಪಾವತಿಸುವಂತೆ ಕೋರ್ಟ್​ ತೀರ್ಪು ನೀಡಿದೆ. ಒಂದು ತಿಂಗಳ ಒಳಗೆ ಪಡೆದಿದ್ದ ಸಾಲವನ್ನು ತೀರಿಸುವಂತೆ ಸೆಷನ್ಸ್ ಕೋರ್ಟ್ ಸ್ಯಾಂಡಲ್‍ವುಡ್ ಹಿರಿಯ ನಟ ದ್ವಾರಕೀಶ್ ಅವರಿಗೆ ಸೂಚನೆ ನೀಡಿದೆ.

2013ರಲ್ಲಿ ಚಾರುಲತಾ ಸಿನಿಮಾಕ್ಕಾಗಿ ದ್ವಾರಕೀಶ್ ಅವರು ಕೆಸಿಎನ್ ಚಂದ್ರಶೇಖರ್‌ರಿಂದ ಸಾಲ ಪಡೆದಿದ್ದರು. ದ್ವಾರಕೀಶ್ ಸಂಬಂಧಿ ಸಂಜೀವ್ ಮಧ್ಯಸ್ಥಿಕೆ ವಹಿಸಿ ಕೆಸಿಎನ್ ಚಂದ್ರಶೇಖರ್‌ರಿಂದ ಹಣ ಕೊಡಿಸಿದ್ದರು. ಆದರೆ ಸಾಲದ ಹಣ ವಾಪಸ್ ನೀಡದೇ ಸತಾಯಿಸಿದ್ದ ದ್ವಾರಕೀಶ್ ಸಾಲಕೊಟ್ಟವರ ವಿರುದ್ಧವೇ ಕೊಲೆ ಯತ್ನ ಕೇಸ್ ಹಾಕಿದ್ದರು. 50 ಲಕ್ಷ ರೂಪಾಯಿ ಸಾಲ ಪಡೆಯುವ ವೇಳೆಯಲ್ಲಿ ಚೆಕ್ ನೀಡಿದ್ದ ದ್ವಾರಕೀಶ್, ನಂತರ ತಾನು ಯಾವುದೇ ಚೆಕ್ ನೀಡಿಲ್ಲ, ಸಹಿ ನನ್ನದಲ್ಲ ಎಂದು ಕೋರ್ಟ್‍ನಲ್ಲಿ ವಾದಿಸಿದ್ದರು. ಆದರೆ ಫೋರೆನ್ಸಿಕ್ ಲ್ಯಾಬ್ ನಲ್ಲಿ ಸಹಿ ದ್ವಾರಕೀಶ್ ಅವರದ್ದೇ ಎಂದು ಸಾಬೀತಾಗಿತ್ತು.

2019 ರಲ್ಲಿ ಕೋರ್ಟ್ 52 ಲಕ್ಷ ರೂ. ಹಣ ಹಿಂದಿರುಗಿಸುವಂತೆ ದ್ವಾರಕೀಶ್ ಅವರಿಗೆ ಆದೇಶಿಸಿತ್ತು. ಆದರೆ, ಹಣ ಹಿಂದಿರುಗಿಸದೇ ಸೆಷನ್ಸ್ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಕೆಳ ನ್ಯಾಯಾಲಯದ ಆದೇಶವನ್ನು ಸೆಷನ್ಸ್ ಕೋರ್ಟ್ ಎತ್ತಿಹಿಡಿದಿದ್ದು ಇದೀಗ ದ್ವಾರಕೀಶ್​ಗೆ ಮುಖಭಂಗವಾಗಿದೆ. ಕೇವಲ ಒಂದು ತಿಂಗಳಲ್ಲಿ 52 ಲಕ್ಷ ರೂಪಾಯಿ ಹಣ ಹಿಂದಿರುಗಿಸುವಂತೆ ಕೋರ್ಟ್ ಆದೇಶ ಹೊರಡಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top