fbpx
ಸಮಾಚಾರ

ನಟಿ ಸಮಂತಾ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಅವರ ಮ್ಯಾನೇಜರ್: ಹೇಳಿದ್ದೇನು?

ನಟಿ ಸಮಂತಾ ಅವರು ಏಕಾಏಕಿ ಆಸ್ಪತ್ರೆಗೆ ಭೇಟಿ ನೀಡಿದ್ದು ಅಭಿಮಾನಿಗಳಲ್ಲಿ ಆತಂಕ ಸೃಷ್ಟಿ ಮಾಡಿತ್ತು. ನೆನ್ನೆ ಚಳಿ ಜ್ವರ ಕಾಣಿಸಿಕೊಂಡ ಹಿನ್ನಲೆ ಸಮಂತಾ ಅವರು ಖಾಸಗಿ ಆಸ್ಪತ್ರೆಗೆ ಬೇಟಿ ನೀಡಿದ್ದರು, ಆ ಬಗ್ಗೆ ಕೆಲ ವದಂತಿಗಳು ಹರಡಿತ್ತು. ಅದಕ್ಕೆಲ್ಲ ತೆರೆ ಎಳೆದಿರುವ ಅವರ ಮ್ಯಾನೇಜರ್, ಸಮಂತಾ ಆರಾಮಾಗಿದ್ದಾರೆ ಎಂದಿದ್ದಾರೆ.

ಸಮಂತಾ ಅವರಿಗೆ ವೈರಲ್​ ಇನ್​ಫೆಕ್ಷನ್​ ಆಗಿದ್ದು, ಇದಕ್ಕಾಗಿ ಅವರು ಆಸ್ಪತ್ರೆಗೆ ತೆರಳಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ವಿಚಾರ ಕೇಳಿ ಅಭಿಮಾನಿಗಳು ತೀವ್ರವಾಗಿ ಆತಂಕಗೊಂಡಿದ್ದರು. ಇದರ ಜತೆಗೆ ಸಮಂತಾಗೆ ಕೆಮ್ಮು ಕಾಣಿಸಿಕೊಂಡಿದೆ ಎಂದೂ ಹೇಳಲಾಗಿತ್ತು. ಕೊರೊನಾ ಆತಂಕ ಮತ್ತೆ ಹೆಚ್ಚಾಗಿದೆ. ರೂಪಾಂತರಿಗಳು ಪತ್ತೆ ಆಗುತ್ತಿವೆ. ಹೀಗಿರುವಾಗಲೇ ಸಮಂತಾಗೆ ಕೆಮ್ಮು ಕಾಣಿಸಿಕೊಂಡಿದ್ದು ಹೀಗಾಗಿ, ಸಮಂತಾಗೆ ಕೊವಿಡ್​ ಅಂಟಿದೆಯೇ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಮೂಡಿತ್ತು.

ಸಮಂತಾ ಮ್ಯಾನೇಜರ್ ಹೇಳಿದ್ದೇನು?
“ಸಮಂತಾ ಅವರಿಗೆ ಯಾವುದೇ ಗಂಭೀರವಾದ ಆರೋಗ್ಯ ಸಮಸ್ಯೆ ಇಲ್ಲ. ಅವರಿಗೆ ಸಣ್ಣದಾಗಿ ಕಫ ಆಗಿತ್ತು, ಹೀಗಾಗಿ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ. ಕೊರೊನಾ ಪರೀಕ್ಷೆಯನ್ನೂ ಕೂಡ ಮಾಡಿಸಿಕೊಂಡಿದ್ದಾರೆ. ಆದರೆ ಏನೂ ಸಮಸ್ಯೆ ಇಲ್ಲ. ಸದ್ಯ ಮನೆಯಲ್ಲಿ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಯಾವುದೇ ವದಂತಿಗಳನ್ನು ನಂಬಬೇಡಿ” ಎಂದು ನಟಿ ಸಮಂತಾ ಮ್ಯಾನೇಜರ್ ಹೇಳಿದ್ದಾರೆ. ಸಮಂತಾ ಮ್ಯಾನೇಜರ್ ಮಾತು ಕೇಳಿ ಅವರ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top