fbpx
ಸಮಾಚಾರ

ಹಾಸ್ಯನಟ ಸಂಜು ಬಸಯ್ಯ ಅವರದ್ದು 8 ವರ್ಷಗಳ ಪ್ರೀತಿ!

ಕನ್ನಡ ಕಿರುತೆರೆ ಲೋಕದಲ್ಲಿ ಅದೆಷ್ಟೋ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿದ್ದು ಅನೇಕ ಕಲಾವಿದರು ಹೀರೋಗಳ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಜನರನ್ನು ನಕ್ಕು ನಗಿಸುವ ಯಶಸ್ವಿಯಾಗಿತ್ತು. ಈಗ ಕನ್ನಡಿಗರ ಮನೆಮಾತಾದವರಲ್ಲಿ ಸಂಜುಬಸಯ್ಯ ಕೂಡ ಒಬ್ಬರು. ಹೌದು ನೋಡಲು ಚಿಕ್ಕವರಾಗಿ ಕಂಡರೂ ಕೂಡ ಇವರ ಕಲೆ ನಿಜಕ್ಕೂ ಮೆಚ್ಚುವಂತದ್ದು.

ಸಂಜುಬಸಯ್ಯ ಅವರು ನೋಡಲು ಚಿಕ್ಕವನಾಗಿದ್ದರೂ ಕೂಡ ಅವರಿಗೆ ಒಬ್ಬರು ಪ್ರೇಯಸಿ ಇದ್ದಾರೆ. ಸಂಜು ಬಸಯ್ಯ ಅವರ ಪ್ರೇಯಸಿ ಯಾವ ನಟಿಗೂ ಕೂಡ ಕಮ್ಮಿ ಇಲ್ಲ. ರಿಯಾಲಿಟಿ ಶೋ ವೇದಿಕೆ ಮೇಲೆ ನೆರೆದಿದ್ದ ಸಾಕಷ್ಟು ಜನರಿಗೆ ಆಶಚರ್ಯ ಮೂಡುವಂತೆ ಮಾಡಿದ್ದಾರೆ. ಇವರಿಬ್ಬರು  ಒಂದು ನಾಟಕ ಕಂಪನಿಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದರು, ನಂತರ ನಾಟಕದಲ್ಲಿ ಅಭಿನಯಸುತ್ತಿರುವಾಗ ಒಬ್ಬರಿಗೆ ಒಬ್ಬರು ಪರಿಚಯ ಮಾಡಿಕೊಂಡರು. ಆ ಸಮಯದಲ್ಲಿ ಅವರಿಬ್ಬರ  ಮಧ್ಯೆ ಪ್ರೀತಿ ಚಿಗುರಿ ಬೆಳೆಯಿತು  8 ವರ್ಷಗಳ ಹಿಂದೆ ಪ್ರಪೋಸ್  ಮಾಡಿದ್ದ ಸಂಜು ಇದ್ದಕೆ ಆಕೆ ಈಗ ಒಪ್ಪಿಕೊಂಡಿದ್ದಾಳೆ. ಅವರ  ಪ್ರೇಯಸಿ ನನಗಿಂತ ಸಂಜು ಬಸಯ್ಯ ಅವರು ಆರು ತಿಂಗಳು ದೊಡ್ಡವರು ಎಂದು ಹೇಳಿದರು. ಹಾಗೆಯೇ ನಟ ಜಗ್ಗೇಶ್ ಅವರು ಪಲ್ಲವಿ ಜೊತೆಗೆ ಮಾತನಾಡಿ ಆಕೆಯ ನಿರ್ಧಾರವನ್ನು ಮೆಚ್ಚಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಅವರಿಬ್ಬರು ಸದ್ಯದಲ್ಲಿಯೇ ಮದುವೆಯಾಗಿ ಹೇಳಿದಾಗ ಅವರ ಮದುವೆಗೆ ಅತಿಥಿಯಾಗಿ ನಾನು ಬರುತ್ತೇನೆ ಎಂದು ಜಗ್ಗೇಶ್ ಅವರು ಭರವಸೆ ನೀಡಿದರು. ಒಟ್ಟಾರೆಯಾಗಿ ಸಂಜು ಬಸಯ್ಯ ಅವರಿಗೆ ಪ್ರೇಯಸಿ ಸಿಕ್ಕಿದ್ದು ಅವರ ಮುಂದಿನ ಜೀವನ ಪ್ರೀತಿಯೊಂದಿಗೆ ತುಂಬಿರಲಿ ಎಂದು ನಾವು ಈ ಮೂಲಕ ಹಾರೈಸೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top