fbpx
ಸಮಾಚಾರ

ಪುಷ್ಪನ ಅಂಗಳದಲ್ಲಿ ಕನ್ನಡದ ಕಂಪನ್ನು ಪಸರಿಸಿದ ಡಾಲಿ ಧನಂಜಯ್​

ಸುಕುಮಾರ್​ ನಿರ್ದೇಶನದಲ್ಲಿ ಅಲ್ಲು ಅರ್ಜುನ್​ ನಟನೆಯಲ್ಲಿ ಮೂಡಿಬರುತ್ತಿರುವ ಪ್ಯಾನ್​ ಇಂಡಿಯಾ ಸಿನಿಮಾ ಪುಷ್ಪ. ‘ಪುಷ್ಪ’ ಸಿನಿಮಾ ಇದೇ ತಿಂಗಳ 17 ನೇ ತಾರೀಖು ವಿಶ್ವದಾದ್ಯಂತ ಕನ್ನಡ ಸೇರಿ 5 ಭಾಷೆಗಳಲ್ಲಿ ಮೂಡಿಬರಲಿದೆ. ಟಗರು ಚಿತ್ರದ ನಂತ್ರ ಎಲ್ಲರ ನೆಚ್ಚಿನ  ನಟ ಡಾಲಿ ಧನಂಯ್​ ನಸೀಬ್​ ಈಗ ಬದಲಾಗಿದೆ.

ಡಾಲಿ ಅಭಿನಯದ ಬ್ಯಾಕ್​ಟು ಬ್ಯಾಕ್​ ಚಿತ್ರಗಳು ರಿಲೀಸ್​ಗೆ ರೆಡಿಯಾಗಿದ್ದು, ಅವುಗಳಲ್ಲಿ ಪ್ಯಾನ್​ ಇಂಡಿಯಾ ಫಿಲ್ಮ್ ಪುಷ್ಪ ಮೊದಲ ಲೈನ್​ನಲ್ಲಿದೆ. ಸಿನಿಮಾದ ಟೀಸರ್​, ಟ್ರೈಲರ್​, ಸಾಂಗ್​ಗಳಿಂದ ಈಗಾಗಲೇ ಸಖತ್ ಹವಾ ಕ್ರಿಯೆಟ್ ಮಾಡಿದೆ. ಪುಷ್ಪ ಚಿತ್ರ ಇದೇ ವಾರ ರಿಲೀಸ್​ ಆಗಲಿದೆ.  ಅಲ್ಲದೆ ಪುಷ್ಪನ ಅಂಗಳಲ್ಲಿ ಡಾಲಿ ಕನ್ನಡದ ಕಂಪು ಹರಿಸಿದ್ರೆ. ಟಾಲಿವುಡ್​ ಸ್ಟಾರ್​ ಸಿಂಗರ್​​ ಸತ್ಯವತಿ ಮಂಗ್ಲಿ ಕನ್ನಡದ ಹಾಡಿನ ಮೂಲಕ ಎಲ್ಲ  ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ.

ಅಲ್ಲದೆ ಪುಷ್ಪನ ಒಂದಷ್ಟು ಸಿಕ್ರೇಟ್​ಗಳನ್ನ ರಿವೀಲ್​ ಮಾಡಿದ್ದಾರೆ. ಚಿತ್ರದಲ್ಲಿ ಜಾಲಿ ರೆಡ್ಡಿ ಪಾತ್ರದಲ್ಲಿ ಕಾಣಿಸಿರುವ ‘ಪುಷ್ಪ’ ಸಿನಿಮಾದ ಪ್ರೀ ರಿಲೀಸ್​ ಸಂದರ್ಭ ದಲ್ಲಿ  ತಮ್ಮ ಕನ್ನಡದ  ಪ್ರೇಮವನ್ನು ತೋರಿಸಿದ್ದಾರೆ. “ಕಣ್ಣೇ ಅಧಿರಿಂದಿ” ಹಾಡಿನ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದರೆ. ಊ ಅಂತಿಯಾ ಮಾವ ಊಹೂ ಅಂತಿಯಾ ಸಾಂಗ್​ ಮಾವ ಸಾಂಗ್​ನ ಕನ್ನಡ ವರ್ಷನ್​ ಹಾಡನ್ನು ಹಾಡಿದ್ದು ಇದೇ ಹಾಡನ್ನು ಮಂಗ್ಲಿ ಪುಷ್ಪನ ವೇದಿಕೆಯಲ್ಲಿ ಹಾಡಿದ್ದಾರೆ. ಅದೇನೆ ಇರಲಿ ಟಾಲಿವುಡ್​ ಅಂಗಳದಲ್ಲಿ ಕನ್ನಡದ ಕಂಪು ಹರಿಸಿದ ಡಾಲಿ-ಮಂಗ್ಲಿ ಜೋಡಿಗೆ ಕನ್ನಡಿಗರು ಫಿದಾ ಆಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top