fbpx
ಸಮಾಚಾರ

ಕರೆನ್ಸಿ ನೋಟುಗಳ ಮೇಲೆ ನೇತಾಜಿ ಫೋಟೋ ಮುದ್ರಿಸಿ: ಹರೇನ್ ಬಿಸ್ವಾಸ್ ಮನವಿ

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಭಾರತೀಯ ಕರೆನ್ಸಿಗಳಲ್ಲಿ ಬ್ರಿಟಿಷ್ ರಾಜನ ಚಿತ್ರದ ಜಾಗಕ್ಕೆ ಮಹಾತ್ಮಾ ಗಾಂಧಿಯವರ ಭಾವಚಿತ್ರವನ್ನು ತರಬೇಕೆಂದು ಸರ್ಕಾರದ ಮಟ್ಟದಲ್ಲಿ ಚಿಂತನೆ ಬಂತು. ಆದರೆ ಈಗ ಕರೆನ್ಸಿ ನೋಟುಗಳ ಮೇಲೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರವನ್ನು ಮುದ್ರಿಸುವಂತೆ 94 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಹರೇನ್ ಬಗ್ಚಿ ಬಿಸ್ವಾಸ್ ಕೊಲ್ಕತ್ತಾ ಹೈಕೋರ್ಟ್‍ಗೆ ಮನವಿ ಸಲ್ಲಿಸಿದ್ದಾರೆ.

1949ರಲ್ಲಿ ಅಂದಿನ ಸರ್ಕಾರ 1 ರೂಪಾಯಿ ನೋಟುಗಳಲ್ಲಿ ಅಶೋಕ ಸ್ಥಂಭವನ್ನು ಮುದ್ರಿಸಿತ್ತು. 1953ರಲ್ಲಿ ಹೊಸ ನೋಟುಗಳಲ್ಲಿ ಹಿಂದಿ ಭಾಷೆಗೆ ವಿಶೇಷ ಪ್ರಾಧಾನ್ಯತೆ ಇತ್ತು. ಹಿಂದಿ ಭಾಷೆಯಲ್ಲಿ ನೋಟಿಗೆ ಬಹುವಚನವಾಗಿ ಹೇಳಲಾಗುತ್ತಿದ್ದ ರುಪಯಾ ಹೋಗಿ ರೂಪಾಯೆಯಾಯಿತು. 1954ರಲ್ಲಿ 1,000, 5,0000 ಮತ್ತು 10,000ದ ಅಧಿಕ ಮುಖಬೆಲೆಯ ನೋಟುಗಳನ್ನು ಮಾರುಕಟ್ಟೆಗೆ ಮರು ಜಾರಿಗೆ ತರಲಾಯಿತು. ಹರೇನ್ ಬಗ್ಚಿ ಬಿಸ್ವಾಸ್ ಅವರು ಕೊಲ್ಕತ್ತಾ ಹೈಕೋರ್ಟ್‍ನಲ್ಲಿ ಕರೆನ್ಸಿ ನೋಟುಗಳ ಮೇಲೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಫೋಟೋವನ್ನು ಮುದ್ರಿಸಿ ಎಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು  ಸಲ್ಲಿಸಿದ್ದಾರೆ.

ಹಾಗೇ 2021ರ ಫೆಬ್ರವರಿಯಲ್ಲಿ ಮದ್ರಾಸ್ ಹೈಕೋರ್ಟ್​ ಕೂಡ ಇಂಥದ್ದೇ ಒಂದು ಅರ್ಜಿಯನ್ನು ವಿಲೇವಾರಿ ಮಾಡಿದೆ. ನೇತಾಜಿ ಸುಭಾಷ್​ ಚಂದ್ರಬೋಸ್​ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ ಎಂಬುದನ್ನು ಕೋರ್ಟ್ ಒಪ್ಪಿಕೊಳ್ಳುತ್ತದೆ. ಅವರು ತಮ್ಮ ಪಿಐಎಲ್‍ನಲ್ಲಿ, ‘ಮಹಾತ್ಮ ಗಾಂಧಿ’ ಅವರಂತೆ ಕರೆನ್ಸಿ ನೋಟುಗಳಲ್ಲಿ ನೇತಾಜಿ ಅವರ ಚಿತ್ರವನ್ನು ಏಕೆ ಸೇರಿಸಬಾರದು? ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ ಅವರ ಕೊಡುಗೆಗೆ ಭಾರತ ಸರ್ಕಾರವು ಸರಿಯಾದ ಮನ್ನಣೆಯನ್ನು ನೀಡಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top