fbpx
ಸಮಾಚಾರ

ಗ್ರ್ಯಾಂಡ್ ಎಂಟ್ರಿ ಕೊಡಲು ಹೋಗಿ ಎಡವಟ್ಟು ಮಾಡಿಕೊಂಡ ನವ ದಂಪತಿ.!

ವರ ಮತ್ತು ವಧು ವೇದಿಕೆಗೆ ಬರಲು ಸಖತ್ ಪ್ಲಾನ್ ಮಾಡಿಕೊಂಡಿದ್ದರು. ಈಗಂತೂ ಮದುವೆ ಸಮಾರಂಭಗಳಲ್ಲಿ ನವ ವಧು ವರ ವಿಭಿನ್ನವಾಗಿ ತಮ್ಮ ವಿವಾಹದ ದಿನವನ್ನು ಬಹುಕಾಲದವರೆಗೆ ನೆನಪಿನಲ್ಲಿಟ್ಟುಕೊಳ್ಳಲು  ಏನಾದರೊಂದು ಹೊಸ ಶೈಲಿಯನ್ನು ಪ್ರಯತ್ನಿಸುತ್ತಲೇ ಇರುತ್ತಾರೆ.

ಆದರೆ ಕೆಲವೊಮ್ಮೆ ಆ ವಿಭಿನ್ನವಾಗಿ ಮಾಡಿದಂತಹ ಪ್ರಯತ್ನಗಳು ಎಡವಟ್ಟುಗಳಾಗಿ ಬದಲಾಗುತ್ತದೆ. ಗ್ರ್ಯಾಂಡ್ ಆಗಿ ಎಂಟ್ರಿ ಕೊಡುತ್ತಿದ್ದ ನವ ದಂಪತಿ ತಮ್ಮ ಮದುವೆ ಸಮಾರಂಭದಲ್ಲಿ ಗ್ರ್ಯಾಂಡ್ ಆಗಿ ಎಂಟ್ರಿ ನೀಡುತ್ತಿರುವಾಗಲೇ ಅವರಿಬ್ಬರು ಕುಳಿತಿರುವ ಜೆಸಿಬಿಯ ಮುಂಬದಿಯನ್ನು ಆಸನ ಮಾಡಿಕೊಂಡು ಕುಳಿತಿದ್ದು, ಬಂದ ಅತಿಥಿಗಳತ್ತ ಕೈ ಬೀಸುತ್ತಿರುವಾಗ ಅವರಿಬ್ಬರು ಕೆಳಗಿರುವ ಟೇಬಲ್ ಮೇಲೆ ಬಿದ್ದಿದ್ದಾರೆ.ಇಲ್ಲಿ ನೋಡಿ ಗ್ರ್ಯಾಂಡ್ ಎಂಟ್ರಿ ನೀಡಲು ಹೋಗಿ ಎಡವಟ್ಟಾಗಿದೆ. ವರದಿಯ ಪ್ರಕಾರ, ಛತ್ತೀಸಗಢದ ರಾಯ್‌ಪುರದ ದಂಪತಿಗಳು ಕುಳಿತಿರುವ ಸ್ವಿಂಗ್ ಕೆಳಗೆ ಬಿದ್ದಿದ್ದು ನವ ದಂಪತಿಗಳಿಗೆ ಗಾಯವಾಗಿದೆ.

ಸದ್ಯ ಈ ದಂಪತಿಗಳು 12 ಅಡಿ ಎತ್ತರದಿಂದ ಬಿದ್ದು ಸಣ್ಣ ಗಾಯಗಳನ್ನು ಮಾಡಿಕೊಂಡಿದ್ದಾರೆ. ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯು ಯಲ್ಲಾ ಅಪಘಾತದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡಿದೆ ಎಂದು ಹೇಳಲಾಗಿದೆ.ಹೀಗೆ ಅನೇಕ ಮದುವೆ ಸಮಾರಂಭಗಳಲ್ಲಿ ಗ್ರ್ಯಾಂಡ್ ಎಂಟ್ರಿಯು ಹೀಗೆ ಎಡವಟ್ಟುಗಳಾಗುತ್ತದೆ. ಇದೆಲ್ಲವನ್ನು ಮಾಡುವ ಮೊದಲು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡು ಮಾಡಬೇಕು. ಏನು ಮಾಡಲು ಹೋಗಿ ನವದಂಪತಿಗಳ ಜೀವನದ ಜೊತೆ  ಎಡವಟ್ಟು ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top