fbpx
ಸಮಾಚಾರ

ಮಾಯಾಂಕ್ ಅಗರವಾಲ್ ಗೆ ಕನ್ನಡದ ಈ ಇಬ್ಬರು ಹೀರೋಗಳು ಇಷ್ಟವಂತೆ: ಯಾರದು?

ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್, ಹೆಮ್ಮೆಯ ಕನ್ನಡಿಗ ಮಾಯಾಂಕ್ ಅಗರ್ವಾಲ್ ಇತ್ತೀಚಿನ ವರ್ಷಗಳಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡದ ಖಾಯಂ ಆಟಗಾರನಾಗಿ ಪರಿಣಮಿಸಿದ್ದಾರೆ. ಟೆಸ್ಟ್ ಮಾತ್ರವಲ್ಲದೆ ಬೆರಳೆಣಿಕೆಯ ಏಕದಿನ ಪಂದ್ಯಗಳಲ್ಲಿ ಕೂಡ ಅವಕಾಶ ಪಡೆದಿದ್ದಾರೆ. ಆದರೆ ಭಾರತದ ಪರವಾಗಿ ವೈಟ್ ಬಾಲ್ ಕ್ರಿಕೆಟ್ ನಲ್ಲಿ ಈ ವರೆಗೆ ತಮ್ಮ ಛಾಪು ಮೂಡಿಸಲು ಸಾಧ್ಯವಾಗಿಲ್ಲ.

ಸದ್ಯ ಕಳೆದ ವಾರದಿಂದ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯಗಳು ಇಲ್ಲದೆ ಇರುವುದರಿಂದ ಎಲ್ಲಾ ಆಟಗಾರರಂತೆ ಮಾಯಾಂಕ್ ಹಾಲಿಡೇ ಮೂಡ್ ನಲ್ಲಿದ್ದಾರೆ. ಈ ಮದ್ಯೆ ಮಾಯಾಂಕ್ ಅಗರವಾಲ್ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದೆ ವೇಳೆ ಕನ್ನಡದಲ್ಲಿ ತಮಗೆ ಇಷ್ಟವಿರುವ ನಟರ ಬಗ್ಗೆ ಕೂಡ ತಿಳಿಸಿದ್ದಾರೆ.

 

 

ಮಯಾಂಕ್ ಮೆಚ್ಚಿದ ಇಬ್ಬರು ಕನ್ನಡದ ನಟರೆಂದರೆ, ಒಬ್ಬರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಮತ್ತೊಬ್ಬರು ರಾಕಿಂಗ್ ಸ್ಟಾರ್ ಯಶ್. ಈ ಇಬ್ಬರು ನಟರೂ ತನ್ನ ಮೆಚ್ಚಿನ ಕನ್ನಡದ ನಟರು ಎಂದು ಮಯಾಂಕ್ ಬಹಿರಂಗಪಡಿಸಿದ್ದಾರೆ.

ಮಯಾಂಕ್ ಅಗರ್ವಾಲ್ ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳುವಂತೆ ಆಹ್ವಾನ ನೀಡಿದ್ದರು. ಈ ವೇಳೆ ಅಭಿಮಾನಿಯೊಬ್ಬ ನೀವು ಇಷ್ಟ ಪಡುವ ಕನ್ನಡದ ಅಚ್ಚು ಮೆಚ್ಚಿನ ನಟ ಯಾರು ಎಂದು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಮಾಯಾಂಕ್ ಕನ್ನಡದಲ್ಲಿ ಕಿಚ್ಚ ಸುದೀಪ್ ಹಾಗೂ ಯಶ್ ಅಚ್ಚುಮೆಚ್ಚಿನ ನಟರು ಎಂದು ಹೇಳಿದ್ದಾರೆ. ಇದು ಸಹಜವಾಗಿ ಯಶ್ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಸಂತಸ ತಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top