fbpx
ಸಮಾಚಾರ

ಆಡಿಷನ್​ ವೇಳೆ ಸೊಂಟ, ಎದೆ ಸೈಜ್​ ಬಗ್ಗೆ ಪ್ರಶ್ನೆ ಕೇಳಲಾಗಿತ್ತು’; ನಟಿಯ ಶಾಕಿಂಗ್​ ಹೇಳಿಕೆ.

ಹೀರೋಯಿನ್ನುಗಳಿಗೆ ಥರ ಥರದ ಕಾಟ ಕೊಡುವ ಪ್ರವೃತ್ತಿ ಬಾಲಿವುಡ್’ನಿಂದ ಹಿಡಿದು ಎಲ್ಲ ಪ್ರಾದೇಶಿಕ ಭಾಷೆಗಳ ಚಿತ್ರರಂಗಕ್ಕೂ ಅಂಟಿಕೊಂಡಿರೋ ಸಾಂಕ್ರಾಮಿಕ ರೋಗ. ನಟಿಯರ ಮೇಲೆ ದೈಹಿಕ, ಮಾನಸಿಕ ಕಿರುಕುಳದಂತಹ ಪ್ರಕರಣಗಳು ಆಗಾಗ್ಗೆ ಕೇಳಿಬರುತ್ತಲೇ ಇರುತ್ತವೆ.. ಸಿನಿಮಾ ಅವಕಾಶ ಕೇಳಿಕೊಂಡು ಬರುವ ಅಮಾಯಕ ಹೆಣ್ಣುಮಕ್ಕಳ ಮೇಲೆ ಎರಗಿ ಬೀಳೋ ಕಾಮುಕರ ದಂಡೇ ಇಡೀ ಚಿತ್ರರಂಗದಲ್ಲಿ  ಹೊಂಚುಹಾಕಿ  ಕೂತಿದೆ. ಇದೀಗ ಅಂತಹುದೇ ಮತ್ತೊಂದು ಆರೋಪ ಕೇಳಿಬಂದಿದೆ.

ಸುರ್ವೀನ್​ ಅವರು  ಕನ್ನಡ ಚಿತ್ರದ ಮೂಲಕ ಹಿರಿತೆರೆಗೆ ಕಾಲಿಟ್ಟರು. ನಂತರ ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದರು. ಕಳೆದ ಕೆಲ ವರ್ಷಗಳಿಂದ ಅವರು ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದಾರೆ. ಈಗ ಅವರು ಸಂದರ್ಶನದಲ್ಲಿ ಮಾತನಾಡುತ್ತಾ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಕಾಸ್ಟಿಂಗ್​ ಕೌಚ್​ ಸಮಸ್ಯೆ ಹೆಚ್ಚಿತ್ತು ಎಂಬುದು ಅವರ ಅಭಿಪ್ರಾಯ. ಸಿನಿಮಾ ಬಗ್ಗೆ ಮಾತನಾಡೋಕೆ ಬಂದಾಗ ಚಿತ್ರತಂಡದವರು ಅವರ ಎದೆಯ ಸೈಜ್​ ಕೇಳಿದ್ದರಂತೆ. ಈ ಬಗ್ಗೆ ತುಂಬಾನೇ ಬೇಸರದಿಂದ ಸುರ್ವೀನ್​ ಮಾತನಾಡಿದ್ದಾರೆ.

ಕಿರುತೆರೆಯಲ್ಲಿ ಗುರುತಿಸಿಕೊಂಡವರು ಸುರ್ವೀನ್​. ಅವರು ನಂತರ ಕನ್ನಡ ಚಿತ್ರದ ಮೂಲಕ ಹಿರಿತೆರೆಗೆ ಕಾಲಿಟ್ಟರು. ನಂತರ ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದರು. ಕಳೆದ ಕೆಲ ವರ್ಷಗಳಿಂದ ಅವರು ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದಾರೆ. ಈಗ ಅವರು ಸಂದರ್ಶನದಲ್ಲಿ ಮಾತನಾಡುತ್ತಾ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಬಗ್ಗೆ ಮಾತನಾಡೋಕೆ ಚಿತ್ರತಂಡದವರು ಮುಂಬೈಗೆ ಬಂದಿದ್ದರು. ನಾನು ಆ ಸಂದರ್ಭದಲ್ಲಿ ಕಿರುತೆರೆಯಲ್ಲಿ ನಟಿಸುತ್ತಿದ್ದೆ. ಮಹಿಳೆಯರು ಹಲವು ವಿಚಾರಗಳಲ್ಲಿ ಪ್ರಶ್ನೆಗೆ ಒಳಪಡುತ್ತಾರೆ. ಆಡಿಷನ್​ ವೇಳೆ ದೇಹದ ತೂಕ, ಸೊಂಟದ ಸೈಜ್​, ಎದೆಯ ಅಳತೆ ಕೇಳಿದ್ದರು. ಈ ಮೂಲಕ ನನ್ನ ಮೇಲೆ ನನಗೆ ಅನುಮಾನ ಬರುವಂತೆ ಮಾಡಿದ್ದರು. ಮಹಿಳೆಯರನ್ನು ಅಳೆಯುವ ವಿಧಾನ ಇದಲ್ಲ’ ಎಂದಿದ್ದಾರೆ ಸುರ್ವೀನ್​.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top