fbpx
ಸಮಾಚಾರ

1971ರ ಇಂಡೋ-ಪಾಕ್ ಯುದ್ಧ, ಬಾಂಗ್ಲಾದೇಶ ಉದಯ: ವಿಜಯ್ ದಿವಸ್ ಸಂಭ್ರಮ.

1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ ನೆನಪಿಗಾಗಿ ರಾಷ್ಟ್ರವು ಇಂದು ವಿಜಯ್ ದಿವಸ್ ಅನ್ನು ಆಚರಿಸುತ್ತದೆ. ಈ ದಿನದಂದು ಯುದ್ಧದ ಸಮಯದಲ್ಲಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರಿಗೆ ಹಲವೆಡೆ ಗೌರವ ನಮನ ಸಲ್ಲಿಸಲಾಗುತ್ತಿದೆ. ವಿಜಯ್ ದಿವಸ್‌ನ ಮಹತ್ವ ಏನ್ ಎಂದರೆ ಪಾಕಿಸ್ತಾನದ ವಿರುದ್ಧ 1971ರ ಯುದ್ಧದ ಕೊನೆಯಲ್ಲಿ 93,000 ಪಾಕಿಸ್ತಾನಿ ಸೈನಿಕರು ಶರಣಾದರು. ಈ ಮೂಲಕ ಭಾರತವು ಜಯಸಾಧಿಸಿತು. ಅದಕ್ಕಾಗಿಯೇ ಈ ದಿನವನ್ನು ವಿಜಯ್ ದಿವಸ್ ಎಂದು ಕರೆಯಲಾಗುತ್ತದೆ.

1971ಕ್ಕೂ ಮೊದಲು ಬಾಂಗ್ಲಾದೇಶ ಪಾಕಿಸ್ತಾನದ ಭಾಗವಾಗಿತ್ತು. ಆದರೆ ಪೂರ್ವ ಪಾಕಿಸ್ತಾನದಲ್ಲಿ ಸೇನಾಪಡೆ ಅಲ್ಲಿನ ಜನರ ಮೇಲೆ ಅತ್ಯಾಚಾರ, ಕೊಲೆ, ಸುಲಿಗೆ ನಡೆಸುತ್ತಿದ್ದರು. ಡಿಸೆಂಬರ್ 16, 1971 ರಂದು ಸಂಜೆ 4.30ಕ್ಕೆ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಅವರು ಹೆಲಿಕಾಪ್ಟರ್ ಮೂಲಕ ಢಾಕಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಲೆಫ್ಟಿನೆಂಟ್ ಜನರಲ್ ಅರೋರಾ ಮತ್ತು ಜನರಲ್ ನಿಯಾಜಿ ಮೇಜಿನ ಬಳಿ ಕುಳಿತು ಶರಣಾಗತಿ ದಾಖಲೆಗಳನ್ನು ಒಟ್ಟಿಗೆ ಕಾರ್ಯಗತಗೊಳಿಸಿದರು. ಲೆಫ್ಟಿನೆಂಟ್ ಜನರಲ್ ಅರೋರಾ ಅವರಿಗೆ ಜನರಲ್ ನಿಯಾಜಿ ತಮ್ಮ ರಿವಾಲ್ವರ್ ಹಸ್ತಾಂತರಿಸಿ ಶರಣಾದರು.

ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಸಂಸತ್ ಭವನ ಸಂಭ್ರಮದಲ್ಲಿ ಮುಳುಗಿತು. ಲೋಕಸಭೆಯಲ್ಲಿ ನಡೆದ ಬಿಸಿಬಿಸಿ ಚರ್ಚೆಯ ಸಂದರ್ಭದಲ್ಲಿ ಇಂದಿರಾಗಾಂಧಿಯವರು ಯುದ್ಧದಲ್ಲಿ ಭಾರತ ಗೆದ್ದಿದೆ ಎಂದು ಘೋಷಿಸಿದರು. ಈ ಅವಧಿಯಲ್ಲಿ ಈ ಅದ್ಭುತ ವಿಜಯದ ನೆನಪಿಗಾಗಿ ಹಲವಾರು ಕಾರ್ಯಕ್ರಮಗಳು ಕೂಡ ನಡೆಯುತ್ತಿವೆ. ಈ ಯುದ್ಧದ ಅಂತ್ಯದ ಬಳಿಕ ಪೂರ್ವ ಪಾಕಿಸ್ತಾನವನ್ನು ಬಾಂಗ್ಲಾದೇಶ ಎಂಬ ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಲಾಯಿತು.

‘ವಿಜಯ್ ದಿವಸ್’ ನಮ್ಮ ಕೆಚ್ಚೆದೆಯ ಸೈನಿಕರನ್ನು ಸ್ಮರಣೆ ಮಾಡುವ ದಿನವಾಗಿದ್ದು ಉದಾತ್ತ ಉದ್ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ‘ಮುಕ್ತಿ ಜೋದ್ಧಾಸ್’ಮತ್ತು ಬಾಹ್ಯ ಶತ್ರುಗಳ ಯಾವುದೇ ದಾಳಿಯಿಂದ ನಮ್ಮ ಮನೆಯ ಭೂಮಿಯನ್ನು ಉಳಿಸಲು ವಾಗ್ದಾನ ಮಾಡಿದ ದಿನವೂ ಆಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top