fbpx
ಸಮಾಚಾರ

ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆದ ಸಂಸದ ಜಿಸಿ ಚಂದ್ರಶೇಖರ್

ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಸುವುದನ್ನು ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌)ಯ ಉಂಡರು ಪ್ರತಿಭಟನಾ ರ್‍ಯಾಲಿಯನ್ನು ನಡೆಸಲು ಮುಂದಾಗಿದ್ದರು. ಆದರೆ ಇದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಎಂಇಎಸ್‌ ಮುಖಂಡರ ಮುಖಕ್ಕೆ ಮಸಿ ಬಳಿದಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕನ್ನಡ ಪರ ಸಂಘಟನೆಗಳ ಮೂವರನ್ನು ಬಂಧಿಸಿದ್ದರು. ಕನ್ನಡ ಪರ ಹೋರಾಟಗಾರರ ವಿರುದ್ಧ ಕೊಲೆಗೆ ಯತ್ನ ಎಂದು ಸುಳ್ಳು ಕೇಸ್ ದಾಖಲಿಸಲಾಗಿದ್ದು ಪೋಲೀಸರ ನಡೆಗೆ ಕನ್ನಡಿಗರು ಗರಂ ಆಗಿದ್ದಾರೆ.

ಕಂನಾಡ ನಾಡು ನುಡಿಯ ಬಗ್ಗೆ ಹೋರಾಡಿದ ಹೆಮ್ಮೆಯ ಕನ್ನಡ ಮಕ್ಕಳನ್ನು ಜೈಲಿನಲ್ಲಿ ಇಟ್ಟಿರುವ ಸರ್ಕಾರದ ನಡೆಯನ್ನು ಸಾಮಾಜಿಕ ಜಾಲತಾಣದಲ್ಲಿ ಟೀಕಿಸುತ್ತಿದ್ದಾರೆ. ಇದೀಗ ಘಟನೆಯ ಬಗ್ಗೆ ಸಂಸದ ಜಿಸಿ ಚಂದ್ರಶೇಖರ್ ಅವರು ಕಿಡಿಕಾರಿದ್ದಾರೆ. ಹೌದು, ಕನ್ನಡ ಪರ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಮುಖ್ಯಮಂತ್ರಿಗಳಿಗೆ ಮತ್ತು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.

 

 

ಪತ್ರದಲ್ಲೇನಿದೆ?
“ದಿನೇ ದಿನೇ ಕರ್ನಾಟಕದ ಗಡಿಭಾಗವಾದ ಬೆಳಗಾವಿಯಲ್ಲಿ ಕನ್ನಡಿಗರ ಹಾಗು ಅನ್ಯಭಾಷಿಗರ ನಡುವೆ ದ್ವೇಷ ಬಿತ್ತುವ ಕೆಲ ರಾಜ್ಯದ್ರೋಹಿಗಳ ಗುಂಪು ಪುಂಡಾಟಿಕೆ ನಡೆಸುತ್ತಿದ್ದು, ಅನೇಕ ರಾಜ್ಯದ್ರೋಹಿ ಕೆಲಸಗಳಾದ ನಮ್ಮ ಹೆಮ್ಮೆಯ ರಾಜ್ಯೋತ್ಸವದ ದಿನ ಕರಾಳದಿನವಾಗಿ ಆಚರಣೆ ಮಾಡುವುದು, ಕನ್ನಡ ಪರ ಕರ್ನಾಟಕಪರ ಹೋರಾಟಗಾರರಿಗೆ ಕಿರುಕುಳ ನೀಡುವ ದುಷ್ಕೃತ್ಯಕ್ಕೆ ಕೈ ಹಾಕುತ್ತಲೇ ಇದ್ದು ಇದರಿಂದ ಗಡಿಭಾಗಗಳಲ್ಲಿನ ಸಾಮರಸ್ಯ,ಶಾಂತಿಗೆ ಭಂಗ ಬಂದಿರುವುದಲ್ಲದೆ, ಹೊರ ರಾಜ್ಯಗಳ ರಾಜಕೀಯ ಮೇಲಾಟಗಳ ಕುಮ್ಮಕ್ಕಿನಿಂದ ರಾಜ್ಯದ್ರೋಹಿ ಕೆಲಸಗಳಿಗೂ ಕೆಲವರು ಮುಂದಾಗಿ ಅಮಾಯಕ ಕನ್ನಡಿಗರನ್ನು ಬಲಿತೆಗೆದುಕೊಳ್ಳುತ್ತಿರುವುದು ದುರ್ದೈವದ ಸಂಗತಿ.”

“ಈ ಹಿಂದೆ ರಾಜ್ಯೋತ್ಸವದ ದಿನದಂದು ಕರಾಳದಿನವಾಗಿ ಆಚರಿಸಲು ಮಹಾರಾಷ್ಟ್ರ ಸರ್ಕಾರವೇ ತೀರ್ಮಾನ ತೆಗೆದುಕೊಂಡಿತ್ತು, ಪ್ರಸ್ತುತ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲೇ ನಡೆಯುತ್ತಿರುವುದರಿಂದ ನಮ್ಮ ಸರ್ಕಾರವೇ ಬೆಳಗಾವಿಯಲ್ಲಿರುವುದರಿಂದ ಕರ್ನಾಟಕದೊಳಗೆ ನಾಡದ್ದಜವಾದ ಕನ್ನಡ ಬಾವುಟವೊಂದೇ ಇರಬೇಕೆಂಬ ಕಾನೂನಾತ್ಮಕ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಶಾಶ್ವತವಾಗಿ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಿಯಂತ್ರಿಸಬೇಕೆಂದು ಹಾಗೆಯೇ ದಿನಾಂಕ 13-12-2021 ರಂದು 4 ಜನ ಕನ್ನಡಪರ ಹೋರಾಟಗಾರರ ಮೇಲೆ ತಿಲಕವಾಡಿ, ಬೆಳಗಾವಿ ಪೊಲೀಸ್‌ ಠಾಣೆಯಲ್ಲಿ ಸೆಕ್ಟನ್‌ 143,147,148,153,103,307,504 ಸಹಕಾಲಂ 149 ಐಪಿಸಿ ಸೆಕ್ಷನ್‌ ಅಡಿಯಲ್ಲಿ ದೂರು ದಾಖಲಿಸಲಾಗಿದೆ,”

“ಕನ್ನಡದ ಬಗ್ಗೆ ಹೋರಾಟ ಮಾಡಿದವರ ಬಗ್ಗೆ ಈ ಗುರುತರವಾದ ಆರೋಪಗಳನ್ನು ಮಾಡಿರುವುದನ್ನು ತಕ್ಷಣವೇ ಕೈಬಿಡಬೇಕೆಂದು ಕೇಳಿಕೊಳ್ಳುತ್ತೇನೆ.”

 

 

ಇನ್ನು ಕನ್ನಡ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕೆಂದು ತಾವು ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಬರೆದಿರುವ ಪತ್ರವನ್ನು ಜಿಸಿ ಚಂದ್ರಶೇಖರ್ ಅವರು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ,. ಜೊತೆಗೆ “ಇತ್ತೀಚೆಗೆ 4 ಯುವ ಕನ್ನಡಪರ ಹೋರಾಟಗಾರರನ್ನು ಬೆಳಗಾವಿಯಲ್ಲಿ ಬಂಧಿಸಲಾಗಿದ್ದು ಅನಾವಶ್ಯಕ ಪೊಲೀಸ್ ಕೇಸ್ ದಾಖಲಿಸಿ ಅವರನ್ನು ಹಿಂಡಗಾಲ ಜೈಲಿಗೆ ಹಾಕಲಾಗಿದೆ ಈ ಕುರಿತು ಕನ್ನಡ ಹೋರಾಟಗಾರರ ಮೇಲಿನ ಕೇಸ್ ಗಳನ್ನು ಹಿಂತೆಗಿದುಕೊಳ್ಳಲು ಕೋರಿ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆರಗ ಜ್ಞಾನೇಂದ್ರ ಅವರಿಗೆ ನನ್ನ ಪತ್ರ. ಜೈ ಭುವನೇಶ್ವರಿ ” ಎಂದು ಚಂದ್ರಶೇಖರ್ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top